BIG NEWS : ``Love Affair'' ranks 3rd for murders in India

ಭಾರತದಲ್ಲಿ ನಡೆಯುವ ಕೊಲೆಗಳಿಗೆ ‘ಲವ್ ಅಫೇರ್’ 3ನೇ ಪ್ರಮುಖ ಕಾರಣ – ಶಾಕಿಂಗ್ ಸತ್ಯ ಬಿಚ್ಚಿಟ್ಟ NCRB ವರದಿ..!

ನ್ಯೂಸ್ ಆ್ಯರೋ : 2022ರಿಂದ ಈಚೆಗೆ ಭಾರತದಲ್ಲಿ ಅಪರಾಧ, ಕೊಲೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸದ್ಯ, ಈ ಆತಂಕಕಾರಿ ವಿಚಾರದ ಬಗ್ಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿ ತಯಾರಿಸಿದ್ದು, ಭಾರತದಲ್ಲಿ ನಡೆಯುವ ಕೊಲೆಗಳಿಗೆ 3ನೇ ಪ್ರಮುಖ ಕಾರಣ ‘ಲವ್ ಅಫೇರ್’ ಎಂಬುದು ದಾಖಲೆಗಳ ಸಮೇತ ಸಾಬೀತಾಗಿದ್ದು, ಮಹಿಳೆಯರ ವಿರುದ್ಧ ಹೆಚ್ಚು ಅಪರಾಧಗಳು ನಡೆಯುತ್ತಿದೆ. ಈ ಅಂಕಿಅಂಶಗ ಶೇ.12% ಏರಿಕೆಯಾಗಿದೆ‌. ಈ ಬಗೆಗಿನ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

ಭಾರತದ 19 ನಗರಳಲ್ಲಿನ ಅಪರಾಧಗಳ ದತ್ತಾಂಶ ಹೀಗಿದೆ?

ಒಟ್ಟು ಅಪರಾಧಗಳು :

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ 8,53, 470 ಗುರುತಿಸಬಹುದಾದ ಅಪರಾಧಗಳನ್ನು ಗುರುತಿಸಿದೆ. 2021ಕ್ಕೆ ಹೋಲಿಸಿದರೆ ಇದು ಕಡಿಮೆ. ಇನ್ನು ಭಾರತೀಯ ದಂಡ ಸಂಹಿತೆ ಹಾಗೂ ವಿಶೇಷ ಮತ್ತು ಸ್ಥಳೀಯ ಕಾನೂನು ಪ್ರಕರಣಗಳ ಬಗ್ಗೆ ನೋಡುವುದಾದರೆ, ಇದರಲ್ಲಿ 72% ಭಾರತೀಯ ದಂಡ ಸಂಹಿತೆ ಅಪರಾಧಗಳು ಮತ್ತು 27% ವಿಶೇಷ ಮತ್ತು ಸ್ಥಳೀಯ ಕಾನೂನು‌ ಅಪರಾಧಗಳು ದಾಖಲಾಗಿದೆ.

ಪ್ರಬಲ ಅಪರಾಧಗಳು :

ಐಪಿಸಿ ಅಪರಾಧಗಳಲ್ಲಿ ಕಳ್ಳತನವು 44% ಅಗ್ರಸ್ಥಾನದಲ್ಲಿದೆ. ಇನ್ನು ನಿಷೇಧ ಕಾಯ್ದೆಯು ಎಸ್.ಎಲ್.ಎಲ್ ಅಪರಾಧಗಳಲ್ಲಿ 28% ಪ್ರಕರಣಗಳು‌‌ ದಾಖಲಾಗಿದೆ.
ಇದರೊಂದಿಗೆ ಮಾನವ ದೇಹದ ಮೇಲೆ ಪರಿಣಾಮ‌ ಬೀರುವ ಅಪರಾಧಗಳಲ್ಲಿ, ಗಾಯ (49%), ಅಪಹರಣ ಮತ್ತು ಅಪಹರಣ (16%), ಮಹಿಳೆಯರ ಘನತೆಗೆ ದಕ್ಕೆ ತರುವ ಉದ್ದೇಶದಿಂದ ಹಲ್ಲೆ ಪ್ರಕರಣ (10%) ಅಪರಾಧಗಳು ನಡೆಯುತ್ತಿದೆ‌.

ಕೊಲೆಗೆ ಪ್ರೀತಿಯೇ ಕಾರಣ!

ಇನ್ನು‌ ಕೊಲೆ ಪ್ರಕರಣಗಳನ್ನು‌ ಗಮನಿಸುವುದಾದರೆ, 2031 ಪ್ರಕರಣಗಳು ದಾಖಲಾಗಿದ್ದು, 2021ಕ್ಕೆ ಹೋಲಿಸಿದರೆ‌ ಇದು 3.9% ಹೆಚ್ಚಳವಾಗಿದೆ. ವಿವಾದಗಳು ಹಾಗೂ ಪ್ರೀತಿ, ಪ್ರೇಮದ ವ್ಯವಹಾರವೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಇನ್ನು 13,984 ಅಪಹರಣ ಪ್ರಕರಣಗಳು ದಾಖಲಾಗಿದ್ದು, 12,727 ಅಪಹರಣಕ್ಕೊಳಗಾದ ವ್ಯಕ್ತಿಗಳು ಚೇತರಿಸಿಕೊಂಡಿದ್ದಾರೆ.

ಮಹಿಳೆ, ಮಕ್ಕಳು ಮತ್ತು ಹಿರಿಯ ನಾಗರಿಕರ ಮೇಲಿನ‌ ಅಪರಾಧ?

ಮಹಿಳೆಯರ ವಿರುದ್ಧ ಅಪರಾಧಗಳ ಸಂಖ್ಯೆ 48,755ಕ್ಕೆ ಏರಿಕೆಯಾಗಿದೆ. ಪತಿ ಮತ್ತು ಸಂಬಂಧಿಕರ ಕ್ರೌರ್ಯವೇ ಇದಕ್ಕೆ ಕಾರಣ ಎಂದು ವರದಿ ತಿಳಿಸಿದೆ. ಇನ್ನು‌ ಮಕ್ಕಳ ಮೇಲೆ ಒಟ್ಟಾರೆಯಾಗಿ 20,550 ಪ್ರಕರಣಗಳು ದಾಖಲಾಗಿದ್ದು, ‘ಅಪಹರಣ, ಲೈಂಗಿಕ ದೌರ್ಜನ್ಯದಡಿ ಪ್ರಕರಣಗಳು ದಾಖಲಾಗಿದೆ. ಹಾಗೆಯೇ, ಹಿರಿಯ ನಾಗರಿಕರ ಮೇಲೆ 3,996 ಪ್ರಕರಣಗಖಳು ದಾಖಲಾಗಿದ್ದು, ವಂಚನೆ, ಫೋರ್ಜರಿ ಹಾಗೂ ಕಳ್ಳತನಕ್ಕಾಗಿ ನಡೆದಿದೆ ಎಂದು ವರದಿಯು ಬಹಿರಂಗ ಪಡಿಸಿದೆ.