Meghna Shetty shared a lip smacking mango with the actor

ತುಟಿಗೆ ತುಟಿ ತಾಗುವಂತೆ ಈ ನಟನ ಜೊತೆಗೆ ಮಾವಿನಕಾಯಿ ಚಪ್ಪರಿಸಿದ ಮೇಘನಾ ಶೆಟ್ಟಿ! – ವೈರಲ್ ಆಯ್ತು ಹಾಟ್ ಫೋಟೋಸ್..!

ನ್ಯೂಸ್ ಆ್ಯರೋ : ಕನ್ನಡದ ಬಹುನಿರೀಕ್ಷಿತ ಚಿತ್ರ ‘ಕೈವಾ’ ಬಿಡುಗಡೆಗೆ ಸಜ್ಜಾಗಿದೆ. ಕೈವಾ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಜಯತೀರ್ಥ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಧನ್ವೀರ್ ಗೌಡ ಮತ್ತು ಮೇಘಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ದಿನಕರ್ ತೂಗುದೀಪ, ಜಯರಾಮ್ ಕಾರ್ತಿಕ್ (ಜೆಕೆ), ನಂದ ಗೋಪಾಲ್, ಉಗ್ರಂ ಮಂಜು, ರಘು ಶಿವಮೊಗ್ಗ, ರಮೇಶ್ ಇಂದಿರಾ, ಮಹಾಂತೇಶ ಹಿರೇಮಠ, ಜಾನ್ವಿ ರಾಯಲ, ಬಿಎಂ ಜಿರಿರಾಜ ಮುಂತಾದವರು ನಟಿಸಿದ್ದಾರೆ.

ಸದ್ಯ, ಈ ಸಿನಿಮಾದ ನಟಿ ಮೇಘನಾ ಶೆಟ್ಟಿ ಹಾಗೂ ನಾಯಕ ಧನ್ವೀರ್ ಮಾವಿನ‌ಕಾಯಿಯನ್ನು ತುಟಿಗೆ ತುಟಿ ತಾಗುವಂತೆ ಚಪ್ಪರಿಸಿದ್ದು, ಈ ಫೋಟೋ ಸಾಮಾಜಿಕ‌ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ತುಟಿಗೆ ತುಟಿ ತಾಗುವಂತೆ ಮಾವಿನ ಕಾಯಿ ಚಪ್ಪರಿಸಿದ್ರು!

ಸದ್ಯ, ಸೋಶಿಯಲ್ ಮೀಡಿಯಾದಲ್ಲಿ ಧನ್ವೀರ್ ಹಾಗೂ ಮೇಘನಾ ಶೆಟ್ಟಿ ಸಖತ್ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ‘ಕೈವಾ’ ಸಿನಿಮಾದ ಪ್ರಮೋಷನ್ ಗಾಗಿ ಚಿತ್ರ ತಂಡ ಅನುಶ್ರೀ ಆ್ಯಂಕರ್ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿತ್ತು.

ಈ ಸಂದರ್ಶನದ ಪ್ರೋಮೋ ಈಗಾಗಲೇ ರಿಲೀಸ್ ಆಗಿದ್ದು, ಈ ಪ್ರೋಮೋದಲ್ಲಿ ಮೇಘಾ ಶೆಟ್ಟಿ ಬಾಯಲ್ಲಿಟ್ಟಿದ್ದ ಮಾವಿನ ಕಾಯನ್ನು ಧನ್ವೀರ್ ಕಚ್ಚಿದ್ದಾರೆ. ಅಂದರೆ ತುಟಿಗೆ ತುಟಿ ತಾಗುವಂತೆ ಕಚ್ಚಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೆವಾರಿ ಕಮೆಂಟ್ ಹಾಕುತ್ತಿದ್ದಾರೆ.

ರೆಟ್ರೋ ಸ್ಟೈಲ್ ‘ಕೈವಾ’!

ಇನ್ನು, ಜಯತೀರ್ಥ ನಿರ್ದೇಶನದ ‘ಕೈವಾ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರಕ್ಕೆ ಕಿರಿಕ್ ಪಾರ್ಟಿ, ಕಾಂತಾರ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿ ಖ್ಯಾತಿ ಗಳಿಸಿದ್ದ ಅಜನೀಶ್ ಲೋಕನಾಥ್ ಅವರೇ ಈ ಸಿನಿಮಾಗೂ ಸಂಗೀತ ಸಂಯೋಜಿಸಿದ್ದು, ಶ್ವೇತ್ ಪ್ರಿಯಾ ನಾಯಕ್ ಛಾಯಾಗ್ರಹಣ ಮಾಡಿದ್ದಾರೆ.

ಕೈವಾ ಸಿನಿಮಾದ ಕಥೆಯು 1983ರ ಬೆಂಗಳೂರಿನ ನೈಜ ಘಟನೆಗಳ ಹಿನ್ನೆಲೆಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಇನ್ನು ಡಿಸೆಂಬರ್ 8 ರಂದು ಥಿಯೇಟರ್‌’ಗಳಲ್ಲಿ ಬಿಡುಗಡೆಯಾಗಲು ‘ಕೈವಾ’ ಸಿದ್ಧವಾಗಿದೆ.