
ಕರೆನ್ಸಿ ನೋಟಿನ ಮೇಲೆ * ಚಿಹ್ನೆ ಇದ್ರೆ ನಕಲಿನಾ? – ಆರ್.ಬಿ.ಐ. ಏನು ಹೇಳುತ್ತದೆ?
- ಹಣಕಾಸು
- July 28, 2023
- No Comment
- 230
ನ್ಯೂಸ್ ಆ್ಯರೋ : ‘ * ‘ಚಿಹ್ನೆ ಇರುವ ಕರೆನ್ಸಿ ನೋಟುಗಳು (Star series bank notes) ಇತರ ನೋಟುಗಳಂತೆ ಸಂಪೂರ್ಣ ಸಿಂಧುವಾಗಿರುತ್ತವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸ್ಪಷ್ಟ ಪಡಿಸಿದೆ.
ಅನುಮಾನ ಬೇಡ
ಈ ಕುರಿತು ಯಾವುದೇ ಅನುಮಾನ ಬೇಡ, ಆತಂಕವೂ ಪಡಬೇಕಾಗಿಲ್ಲ ಎಂದು ಸಾರ್ವಜನಿಕರಿಗೆ ದೈರ್ಯ ತುಂಬಿದೆ. * ಚಿಹ್ನೆ ಇರುವ ನೋಟುಗಳು ಮಾನ್ಯವಲ್ಲ ಎನ್ನುವ ಸುದ್ದಿ ಹರಿದಾಡುತ್ತಿರುವ ಹಿನ್ನಲೆಯಲ್ಲಿ ಆರ್.ಬಿ.ಐ. ಈ ರಿತಿಯ ಸ್ಪಷ್ಟನೆ ನೀಡಿದೆ.
ಚಿಹ್ನೆ ಯಾಕೆ?
ನೋಟುಗಳು ದೋಷಪೂರಿತವಾಗಿ ಮುದ್ರಣಗೊಂಡಿರುವುದು ಕಂಡುಬಂದರೆ ಬದಲು ನೋಟುಗಳನ್ನು ಮುದ್ರಿಸಲಾಗುತ್ತದೆ. ಈ ರೀತಿ ಬದಲು ನೋಟುಗಳ ಮೇಲೆ * ಚಿಹ್ನೆ ಸೇರ್ಪಡೆಗೊಳಿಸಲಾಗುತ್ತದೆ. ಹೀಗಾಗಿ ಈ ರೀತಿಯ ನೋಟುಗಳು ಮಾನ್ಯವಾಗುತ್ತವೆ ಎಂದು ಆರ್.ಬಿ.ಐ. ಮಾಹಿತಿ ನೀಡಿದೆ.
ಈ ಹಿಂದೆಯೇ ಆರ್.ಬಿ.ಐ. ಈ ಕುರಿತು ಮಾಹಿತಿ ನೀಡಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಸುಳ್ಳು ಸುದ್ದಿ ನಂಬಿ ಅನೇಕರು ಆತಂಕಕ್ಕೆ ಒಳಗಾದ ಹಿನ್ನಲೆಯಲ್ಲಿ ಈ ಪ್ರಕಟಣೆ ಹೊರಡಿಸಲಾಗಿದೆ.