ಒಂದೇ ಕಂಪನಿಯ ಷೇರಿನಿಂದ ಎರಡೇ ತಿಂಗಳಲ್ಲಿ 2400 ಕೋಟಿ ಗಳಿಸಿದ ಭಾರತೀಯ ಮಹಿಳೆ – ಅಷ್ಟೊಂದು ಲಾಭ ತಂದುಕೊಟ್ಟ ಆ ಕಂಪನಿ ಯಾವುದು ?

ಒಂದೇ ಕಂಪನಿಯ ಷೇರಿನಿಂದ ಎರಡೇ ತಿಂಗಳಲ್ಲಿ 2400 ಕೋಟಿ ಗಳಿಸಿದ ಭಾರತೀಯ ಮಹಿಳೆ – ಅಷ್ಟೊಂದು ಲಾಭ ತಂದುಕೊಟ್ಟ ಆ ಕಂಪನಿ ಯಾವುದು ?

Rekha Junjunwala : ಷೇರು ವಹಿವಾಟು ಕೆಲವರಿಗೆ ನಷ್ಟ ತಂದಿಟ್ಟರೆ ಹಲವರಿಗೆ ಹಣದ ಮಳೆಯನ್ನೇ ಸುರಿಸುತ್ತದೆ. ಅದೇ ರೀತಿ ಭಾರತದ ಶ್ರೀಮಂತ ಮಹಿಳೆಯೊಬ್ಬರು ಷೇರು ಮಾರುಕಟ್ಟೆಯ ಮೂಲಕ ಎರಡು ತಿಂಗಳಲ್ಲಿ ಬರೋಬ್ಬರಿ 2,400 ಕೋಟಿ ರೂ. ಗಳಿಸಿದ್ದಾರೆ. ಅಂದರೆ ದಿನದಲ್ಲಿ 40 ಕೋಟಿ ರೂ! ಯಾರು ಆ ಮಹಿಳೆ? ಅವರ ಯಶಸ್ಸಿನ ಗುಟ್ಟೇನು ಎನ್ನುವುದರ ವಿವರ ಇಲ್ಲಿದೆ.

ರೇಖಾ ಜುಂಜುನ್ ವಾಲ ಹೆಸರು ಗೊತ್ತಾ!

ಈ ರೀತಿ ಭರ್ಜರಿ ಲಾಭ ಗಳಿಸಿದವರು ಖ್ಯಾತ ಹೂಡಿಕೆದಾರರಾಗಿದ್ದ ದಿ. ರಾಕೇಶ್ ಜುಂಜುನ್ ವಾಲಾ ಅವರ ಪತ್ನಿ ರೇಖಾ ಜುಂಜುನ್ ವಾಲಾ. ರೇಖಾ 2 ತಿಂಗಳಿನಲ್ಲಿ ಟೈಟಾನ್ ಷೇರ್ ಒಂದರಿಂದಲೇ 2,400 ಕೊಟಿ ರೂ. ಆದಾಯ ಗಳಿಸಿದ್ದಾರೆ.

ರೇಖಾ ಟೈಟಾನ್ ಕಂಪೆನಿಯಲ್ಲಿ 4,69,45,970 ಷೇರು ಹೊಂದಿದ್ದಾರೆ. ಅಂದರೆ ಕಂಪೆನಿಯಲ್ಲಿ ಸುಮಾರು ಶೇ. 5.29ರಷ್ಟು ಪಾಲು. ಕೆಲವು ದಿನಗಳಿಂದ ಟೈಟಾನ್ ಷೇರುಗಳು 5012 ರೂ. ತಲುಪಿವೆ.

ಕಳೆದ ವರ್ಷ ರಾಕೇಶ್ ಜುಂಜುನ್ ವಾಲಾ ನಿಧನ ಹೊಂದಿನ ಬಳಿಕ ಅವರು ಷೇರುಗಳು ರೇಖಾ ಅವರಿಗೆ ವರ್ಗಾವಣೆಗೊಂಡಿದ್ದವು. ಸದ್ಯ ರೇಖಾ 47,650 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಆ ಮೂಲಕ ದೇಶದ ಶ್ರೀಮಂತ ಮಹಿಳೆಯರ ಪೈಕಿ ಒಬ್ಬರಾಗಿದ್ದಾರೆ.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *