ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಕಾಲಾವಧಿ ವಿಸ್ತರಣೆ; ಈ ಬಗೆಗಿನ ಕಂಪ್ಲೀಟ್ ಡೀಟಿಯಲ್ಸ್ ಇಲ್ಲಿದೆ

ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಕಾಲಾವಧಿ ವಿಸ್ತರಣೆ; ಈ ಬಗೆಗಿನ ಕಂಪ್ಲೀಟ್ ಡೀಟಿಯಲ್ಸ್ ಇಲ್ಲಿದೆ

ನ್ಯೂಸ್ ಆ್ಯರೋ : ಪ್ಯಾನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ನೀಡಿದ್ದ ಗಡುವು ಮುಗಿಯಲು ಎರಡು ದಿನಗಳು ಬಾಕಿಯಿರುವಾಗಲೇ ಸರ್ಕಾರ ಮತ್ತೆ ಕಾಲಾವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದೆ. ಈ ಆದೇಶದಿಂದ ಜನ ಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದ್ದು, ಪ್ಯಾನ್ ಆಧಾರ್ ಲಿಂಕ್ ಮಾಡಲು ಜೂನ್ 30ರ ವರೆಗೆ ಅವಕಾಶ ನೀಡಲಾಗಿದೆ‌.

ಈ ಹಿಂದೆ ಸರ್ಕಾರ ಮಾ.31 ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಕೊನೆಯ ದಿನ ಎಂದು ದಿನಾಂಕ ನಿಗದಿ ಮಾಡಿತ್ತು. ಲಕ್ಷಾಂತರ ಜನ ಸಾಮಾನ್ಯರು ಇದು ತಿಳಿಯುತ್ತಿದ್ದಂತೆ ಸೈಬರ್ ಸೆಂಟರ್ ಗಳಿಗೆ ಮುಗಿಬಿದ್ದರು. ಹೇಗಾದರೂ ಮಾಡಿ ಲಿಂಕ್ ಮಾಡಿಸಬೇಕು ಎಂದು ಪರದಾಡಿದರು. ದಿನಗಟ್ಟಲೆ ಬಿಸಿಲಿನಲ್ಲಿ ಕ್ಯೂ ನಿಂತದ್ದೂ ಇದೆ. ಇದನ್ನೇ ಬಂಡವಾಳವಾಗಿಸಿಕೊಂಡ ಕೆಲ ಸೈಬರ್ ಸೆಂಟರ್ ಗಳು ಜನರಿಂದ ಹಣ ಲೂಟಿ ಹೊಡೆಯಲು ಪ್ರಾರಂಭಿಸಿದವು. 1 ಸಾವಿರ ಶುಲ್ಕದ ಜೊತೆಗೆ ಪ್ರೋಸೆಸಿಂಗ್ ಚಾರ್ಜ್ ಎಂದು ಹೆಚ್ಚುವರಿಯಾಗಿ 500ರೂ ಕೀಳುತ್ತಿದ್ದರು. ಆದರೆ ಇದೀಗ ಸರ್ಕಾರ ಹೆಚ್ಚಿನ ಕಾಲಾವಕಾಶ ನೀಡಿದ್ದು ಜನರು ನಿಟ್ಟುಸಿರು ಬಿಡುವಂತಾಗಿದೆ‌.

ಪ್ಯಾನ್ ಕಾರ್ಡ್ ಮಹತ್ವವೇನು

ಎಷ್ಟೋ ಜನರಿಗೆ ಸರ್ಕಾರ ಯಾಕೆ ಈ ನಿಯಮ ಜಾರಿಗೆ ತಂದಿದೆ ಎಂದು ತಿಳಿದಿಲ್ಲ. ಆಧಾರ್ ಕಾರ್ಡಿನಷ್ಟೇ ಮಹತ್ವ ಪ್ಯಾನ್ ಕಾರ್ಡ್ ಗೂ ಇದೆ. ಪರ್ಮನೆಂಟ್ ಅಕೌಂಟ್ ನಂಬರ್‌ ಅಂದರೆ PAN ಕಾರ್ಡ್ ಅತ್ಯಂತ ಪ್ರಮುಖ ಬ್ಯುಸಿನೆಸ್ ಐಡಿ ಎನಿಸಿಕೊಂಡಿದೆ. ಪ್ಯಾನ್ ಕಾರ್ಡ್ ನಂಬರ್ ಇಲ್ಲದೆ ಯಾವುದೇ ಬ್ಯಾಂಕಿಂಗ್ ವ್ಯವಹಾರ ನಡೆಸುವುದು ಕಷ್ಟ. ಖಾತೆ ತೆರೆಯುವುದರಿಂದ ಹಿಡಿದು ಬ್ಯಾಂಕಿನಲ್ಲಿ ಹೂಡಿಕೆ ಮಾಡುವ ವರೆಗೆ ಎಲ್ಲದಕ್ಕೂ ಪ್ಯಾನ್ ಕಾರ್ಡ್ ಬೇಕೇ ಬೇಕು. ಪ್ಯಾನ್ ಕಾರ್ಡ್ ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಷ್ಟವಾಗಬಹುದು. ಆ ಕಾರಣ ಸರ್ಕಾರ ನೀಡಿದ ಸಮಯದಲ್ಲಿ ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸುವುದು ಉತ್ತಮ.

ಪ್ಯಾನ್ ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ ಎಂದು ಪರಿಶೀಲಿಸುವುದು ಹೇಗೆ!

  • ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯೇ ಎಂಬುದನ್ನು ಪರೀಶೀಲಿಸಲು ಒಂದು ಸ್ಮಾರ್ಟ್ಫೋನ್ ಕೈಯಲ್ಲಿದ್ದರೆ ಸಾಕು. ಆ ಮೂಬೈಲ್ ನಲ್ಲಿ ಆಧಾಯ ತೆರಿಗೆ ಇಲಾಖೆ ಇ-ಪೋರ್ಟಲ್‌ಗೆ ಭೇಟಿ ನೀಡಿ https://www.incometax.gov.in/iec/foportal/
  • ಎಡ ಭಾಗದಲ್ಲಿ ಕಾಣುವ Quick Linksನಲ್ಲಿ Link Aadhaar Status ಮೇಲೆ ಕ್ಲಿಕ್ ಮಾಡಿ.
  • ನಿಮ್ಮ 10 ಡಿಜಿಟ್‌ನ ಪ್ಯಾನ್ ಸಂಖ್ಯೆಯನ್ನು ನಮೂದಿಸಿ
  • ನಿಮ್ಮ 12 ಡಿಜಿಟ್‌ನ ಆಧಾರ್ ಸಂಖ್ಯೆಯನ್ನು ನಮೂದಿಸಿ
  • View Link Aadhaar Status ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಪ್ಯಾನ್ ಆಧಾರ್ ಲಿಂಕ್ ಆಗಿದೆಯೇ ಎಂದು ತಿಳಿಯಲಿದೆ.
  • ಎಡಬದಿಯಲ್ಲಿ Quick Liks ಕಾಣಿಸುತ್ತದೆ. ಅಲ್ಲಿ Link Aadhaar Status ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಪಾನ್ ಮತ್ತು ಆಧಾರ್ ನಂಬರ್ ಅನ್ನು ನಮೂದಿಸಿ, ಬಳಿಕ View Link Aadhaar Status ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಆಧಾರ್ ಮತ್ತು ಪಾನ್ ಜೋಡಣೆ ಆಗಿದ್ದರೆ, “Your PAN is already linked to given Aadhaar” (ನಿಮ್ಮ ಪಾನ್ ಈಗಾಗಲೇ ಈ ಆಧಾರ್ ಜೊತೆ ಲಿಂಕ್ ಆಗಿದೆ) ಎಂಬಂತಹ ಸಂದೇಶ ಬರುತ್ತದೆ.
  • ಇನ್ನು, ಇನ್ಕಮ್ ಟ್ಯಾಕ್ಸ್ ಇ ಫೈಲಿಂಗ್ ಪೋರ್ಟಲ್ಗೆ https://incometaxindiaefiling.gov.in/ ಹೋಗಿ ಅಲ್ಲಿ ನೀವು ಲಾಗಿನ್ ಆಗಬೇಕು.
  • ಅಲ್ಲಿ ಲಿಂಕ್ ಆಧಾರ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ಪರಿಶೀಲನೆ ನಡೆಸಬಹುದು.
  • ಪಾನ್ ಜೊತೆ ನಿಮ್ಮ ಆಧಾರ್ ಲಿಂಕ್ ಅಗಿದ್ದರೆ ಆಧಾರ್ ನಂಬರ್ ಕಾಣುತ್ತದೆ. ಇಲ್ಲದಿದ್ದರೆ ಲಿಂಕ್ ಆಧಾರ್ ಸ್ಟೇಟಸ್ ಕಾಣುತ್ತದೆ. ಈ ರೀತಿ ಕಂಡು‌ಬಂದರೆ ನೀವು ಆಧಾರ್ ಮತ್ತು ಪಾನ್ ಲಿಂಕ್ ಮಾಡಬೇಕಾಗುತ್ತದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *