
ಆನ್‌ಲೈನ್ ಪರೀಕ್ಷೆಯಲ್ಲಿ ಅಗ್ನಿವೀರರ ನೇಮಕಾತಿ – ಪಠ್ಯದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದ ಲೆಫ್ಟಿನೆಂಟ್ ಜನರಲ್ ಎನ್.ಎಸ್.ಸರ್ನಾ
- ಉದ್ಯೋಗ ಮಾಹಿತಿ
- February 25, 2023
- No Comment
- 100
ನ್ಯೂಸ್ ಆ್ಯರೋ : ಅಗ್ನಿವೀರರ ನೇಮಕಾತಿಗೆ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಈ ಬಾರಿ ಆನ್‌ಲೈನ್‌ನಲ್ಲಿ ನಡೆಸಲಾಗುತ್ತದೆ. ಅದಲ್ಲದೆ ಪಠ್ಯಕ್ರಮ ಅಥವಾ ಪರೀಕ್ಷಾ ಮಾದರಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನೇಮಕಾತಿ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಎನ್.ಎಸ್.ಸರ್ನಾ ತಿಳಿಸಿದ್ದಾರೆ.
ಈಚೆಗೆ ಸೌತ್ ಬ್ಲಾಕ್ಸ್‌ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಆನ್‌ಲೈನ್ ಪರೀಕ್ಷೆಯ ಸ್ವರೂಪಕ್ಕೆ ಹೋಗುವ ನಿರ್ಧಾರವು ಅನೇಕ ಅಂಶಗಳಿಂದ ಪ್ರೇರಿತವಾಗಿದೆ, ಯುವಕರು ಪ್ರಸ್ತುತ ಮೊಬೈಲ್ ಬಳಕೆಯನ್ನು ಹೆಚ್ಚು ಮಾಡುತ್ತಿದ್ದು, ತಾಂತ್ರಿಕವಾಗಿ ಬಹಳ ಮುಂದವರೆದಿದ್ದಾರೆ. ಹೊಸ ವಿಧಾನದಿಂದ ಅನುಕೂಲ ಹೆಚ್ಚಿದೆ ಎಂದರು.
ಈಚೆಗೆ ಅಗ್ನಿವೀರರ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಇದರಿಂದ ಪಡೆಗೆ ಸೇರಲು ಬಯಸುವ ಅಭ್ಯರ್ಥಿಗಳು ಮೊದಲು ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಇ) ಗೆ ಹಾಜರಾಗಬೇಕಾಗುತ್ತದೆ, ನಂತರ ದೈಹಿಕ ಸಾಮರ್ಥ್ಯ ಮತ್ತು ವೈದ್ಯಕೀಯ ಪರೀಕ್ಷೆಗಳಿಗೆ ಹಾಜರಾಗಬೇಕಾಗುತ್ತದೆ.
ಈ ಮೊದಲು ಅಗ್ನಿವೀರ್ ಮತ್ತು ಇತರರ ಅಭ್ಯರ್ಥಿಗಳು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಒಳಗಾಗಬೇಕಾಗಿತ್ತು, ನಂತರ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕಾಗಿತ್ತು ಮತ್ತು ಸಿಇಇಗೆ ಹಾಜರಾಗುವುದು ಕೊನೆಯ ಹಂತವಾಗಿದೆ. ಹೊಸ ಪ್ರಕ್ರಿಯೆಯು ‘ಸುಲಭ, ಸರಳ ಮತ್ತು ಹೆಚ್ಚು ಸುವ್ಯವಸ್ಥಿತ’ ಆಗುತ್ತದೆ ಎಂದು ಲೆಫ್ಟಿನೆಂಟ್ ಜನರಲ್ ಸರ್ನಾ ಹೇಳಿದರು.