ಬೆಂಗ್ಳೂರಲ್ಲಿ ನಾಪತ್ತೆಯಾಗಿದ್ದ ನಟಿ ದೀಪಿಕಾ ಬೆಕ್ಕು ಮಂಗ್ಳೂರಿನಲ್ಲಿ ಪತ್ತೆ – ಬೆಕ್ಕು ಹುಡುಕಿಕೊಟ್ರೆ ₹.15 ಸಾವಿರ ಕೊಡ್ತೀನಿ ಅಂದಿದ್ದ ನಟಿ ಈಗೇನ್ಮಾಡ್ತಾರೆ?
- ಮನರಂಜನೆ
- February 25, 2023
- No Comment
- 149
ನ್ಯೂಸ್ ಆ್ಯರೋ : ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ನಮ್ಮ ಶ್ಯಾಡೋ ಬೆಕ್ಕು ಮಂಗಳೂರಿನಲ್ಲಿ ಪತ್ತೆಯಾಗಿದೆ ಎಂದು ಬಿಗ್ಬಾಸ್ ಸ್ಪರ್ಧಿ, ನಟಿ ದೀಪಿಕಾ ದಾಸ್ ಅವರು ಹೇಳಿದ್ದಾರೆ.
ಈಚೆಗೆ ನಟಿ ದೀಪಿಕಾ ಅವರ ಬೆಕ್ಕು ಕಾಣೆಯಾಗಿತ್ತು. ಈ ಸಂಬಂಧ ಅವರು ಸಾಮಾಜಿಕ ಜಾಲತಾಣದಲ್ಲಿ ನಮ್ಮ ಬೆಕ್ಕು ಶ್ಯಾಡೋ ಕಾಣೆಯಾಗಿದೆ. ಹುಡುಗಿಕೊಟ್ಟವರಿಗೆ ನಗದು ಬಹುಮಾನ ಕೊಡಲಾಗುವುದು ಎಂದು ಬೆಕ್ಕಿನ ಫೋಟೋ ಸಮೇತ ಫೋಸ್ಟ್ ಹಾಕಿದ್ದರು.
ಇದೀಗ ಕಾಣೆಯಾದ ಬೆಕ್ಕು ಮಂಗಳೂರಿನಲ್ಲಿ ಸಿಕ್ಕಿದೆ. ಯಾರೋ ಕಿಡ್ನ್ಯಾಪ್ ಮಾಡಿ ಬೆಕ್ಕನ್ನು ಮಂಗಳೂರಿಗೆ ಸಾಗಿಸಿದ್ದಾರೆ. ಬೆಕ್ಕು ಕೈ ಸೇರಿದ ಬಳಿಕ ಸಂಪೂರ್ಣ ಮಾಹಿತಿ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.
ಕಪ್ಪು ಬಣ್ಣದ 9 ತಿಂಗಳ ಪರ್ಷಿಯನ್ ಬೆಕ್ಕು ಇದಾಗಿದೆ. ಹುಡುಕಿ ಕೊಟ್ಟವರಿಗೆ ₹10–₹15 ಸಾವಿರದವರೆಗೆ ಬಹುಮಾನ ನೀಡಲಾಗುವುದು ಎಂದಿದ್ದರು.