ಮಾರ್ಟಿನ್ ಟೀಸರ್ ನಲ್ಲಿ ಮಿಂಚುತ್ತಿರುವ ಇಬ್ಬರು ಆಜಾನುಬಾಹುಗಳು ಯಾರ್ ಗೊತ್ತಾ..!? – ಕುಖ್ಯಾತ ಕಳ್ಳನೊಬ್ಬ ಇಂಟರ್ ನ್ಯಾಶನಲ್ ರೆಸ್ಲರ್ ಆದ ಕಥೆ ಏನು?

ಮಾರ್ಟಿನ್ ಟೀಸರ್ ನಲ್ಲಿ ಮಿಂಚುತ್ತಿರುವ ಇಬ್ಬರು ಆಜಾನುಬಾಹುಗಳು ಯಾರ್ ಗೊತ್ತಾ..!? – ಕುಖ್ಯಾತ ಕಳ್ಳನೊಬ್ಬ ಇಂಟರ್ ನ್ಯಾಶನಲ್ ರೆಸ್ಲರ್ ಆದ ಕಥೆ ಏನು?

ನ್ಯೂಸ್‌ ಆ್ಯರೋ : ಈಚೆಗೆ ಬಿಡುಗಡೆಯಾದ ಮಾರ್ಟಿನ್ ಟೀಸರ್‌ ಭಾರೀ ಸದ್ದು ಮಾಡಿದ್ದು, ನಟ ಧ್ರುವ ಸರ್ಜಾ ಮಾಸ್‌ ಲುಕ್‌ಗೆ ಎಲ್ಲರೂ ಫಿದಾ ಆಗಿದ್ದಾರೆ. ಬಿಡುಗಡೆಯಾದ ಕೆಲ ಗಂಟೆಗಳಲ್ಲೆ ಮಿಲಿಯನ್ ಜನ ವೀಕ್ಷಿಸುವ ಮೂಲಕ ಹೊಸ ಅಲೆಯನ್ನೇ ಸೃಷ್ಟಿಸಿದೆ.

ಇನ್ನೂ ಟೀಸರ್‌ನಲ್ಲಿ ಪೋಣಿಸಿದ ಕತೆಯಲ್ಲಿ, ಹೊಡೆದಾಟದ ದೃಶ್ಯಗಳನ್ನು ಹೆಚ್ಚು ಒಳಗೊಂಡಿದೆ. ‘ಪೊಗರು’ ಚಿತ್ರದಲ್ಲಿರುವಂತೆ ಈ ಟೀಸರ್‌ನಲ್ಲಿ ಕೂಡಾ ಧ್ರುವ ಸರ್ಜಾ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್‌ಗಳ ಜೊತೆ ಸೆಣೆಸಾಡಿದ್ಧಾರೆ. ಬಾಂಬ್‌, ಬಂದೂಕು, ಪಾಕಿಸ್ತಾನ ಬಾವುಟ, ಅಲ್ಲಿನ ಜೈಲಿಗೆ ನಾಯಕ ಮಾರ್ಟಿನನ್ನು ಬಿಗಿ ಭದ್ರತೆಯಲ್ಲಿ ಕರೆತರುವ ದೃಶ್ಯ, ಹಿ ಇಸ್‌ ಅನ್‌ ಇಂಡಿಯನ್‌, I Know I am Strong ಡೈಲಾಗ್‌ಗಳು ಈ ಟೀಸರ್‌ನ ಹೈಲೈಟ್ಸ್‌ ಆಗಿದೆ.

ಅದರಲ್ಲಿಯೂ ಟೀಸರ್​ನ ಅಂತ್ಯದಲ್ಲಿ ಧ್ರುವ ಸರ್ಜಾ ಇಬ್ಬರು ಮಹಾನ್ ದೈತರೊಂದಿಗೆ ಸೆಣಸಾಡುವ ದೃಶ್ಯದ ತುಣುಕಂತೂ ಅದ್ಭುತವಾಗಿದೆ. ಇನ್ನೂ ಅವರ ದೇಹಾಕೃತಿ ನೋಡಿ ಬೆಚ್ಚಿಬೀಳುವುದರಲ್ಲಿ ಎರಡು ಮಾತಿಲ್ಲ.

ಸಿನಿಮಾದಲ್ಲಿ ಅಭಿನಯಿಸಿರುವ ದೈತ್ಯರ ಹೆಸರು ನ್ಯಾಥನ್ ಜೋನಸ್ ಮತ್ತು ರೂಬಿಲ್ ಮೊಸ್ಕ್ಯುರಾ. ವಿಶ್ವದ ಅತ್ಯುತ್ತಮ ಬಾಡಿಬಿಲ್ಡರ್, ರೆಸ್ಟಲರ್​ಗಳಲ್ಲಿ ಇವರ ಹೆಸರು ಮುಂಚೂಣಿಯಲ್ಲಿದೆ. ಇವರ ವ್ಯಕ್ತಿ ಪರಿಚಯ ಇಲ್ಲಿದೆ.

ನ್ಯಾಥನ್ ಜೋನಸ್ ಪರಿಚಯ:

ಹಾಲಿವುಡ್ ಸಿನಿಮಾಗಳ ಪರಿಚತನಾಗಿರುವ ಜೋನಸ್ ಅವರು, ಜಾಕಿಚಾನ್​ರ ‘ಫಸ್ಟ್ ಸ್ಟ್ರೈಕ್’, ಟೋನಿ ಜಾ ನಟನೆಯ ‘ದಿ ಪ್ರೊಟೆಕ್ಟರ್’, ಆಸ್ಕರ್ ವಿಜೇತ ‘ಮ್ಯಾಡ್​ ಮ್ಯಾಕ್ಸ್; ಫ್ಯೂರಿ ರೋಡ್’, ‘ದಿ ಸ್ಕಾರ್ಪಿಯನ್ ಕಿಂಗ್’, ‘ಫಾಸ್ಟ್ ಆಂಡ್ ಫ್ಯೂರಿಯಸ್’, ‘ಹಾಬ್ಸ್ ಆಂಡ್ ಶಾ’, ‘ಟ್ರಾಯ್’ ಸಿನಿಮಾಗಳ ಜೊತೆಗೆ ತಮಿಳಿನ ‘ಭೂಲಾಹಂ’, ಹಿಂದಿಯ ‘ಎ ಫ್ಲೈಯಿಂಗ್ ಜೆಟ್’ ಸಿನಿಮಾಗಳಲ್ಲಿ ನಟಿಸಿದ್ದಾರೆ.

ದರೋಡೆಕೋರನಾಗಿದ್ದ ಜೋನಸ್‌ ಜೈಲಿನಲ್ಲಿ ಬದಲಾಗಿದ್ದು ಹೇಗೆ?

ರೆಸ್ಲಿಂಗ್​ ರಿಂಗ್​ಗೆ ಇಳಿಯುವ ಮುನ್ನ ಆಸ್ಟ್ರೇಲಿಯಾದಲ್ಲಿ ದರೋಡೆಕೋರನಾಗಿದ್ದ ನ್ಯಾಥನ್ 16 ವರ್ಷ ಜೈಲಿನಲ್ಲಿದ್ದರು. ಅಲ್ಲಿ ತಮ್ಮ ಜೀವನದ ಹಾದಿಯನ್ನು ಬದಲಾಯಿಸಿಕೊಂಡು, ಜೈಲಿನಲ್ಲೇ ವೇಟ್​ಲಿಫ್ಟಿಂಗ್​, ಬಾಡಿಬಿಲ್ಡಿಂಗ್​ಗೆ ಪರಿಚಯಗೊಂಡ ನ್ಯಾಥನ್ ಅಲ್ಲಿಂದ ತಮ್ಮ ಜೀವನದ ಹಾದಿ ಬದಲಾಯಿಸಿಕೊಂಡಿದ್ದಾರೆ.

ನ್ಯಾಥನ್​ನ ನೆಚ್ಚಿನ ವ್ಯಾಯಾಮ ವೇಟ್​ಲಿಫ್ಟಿಂಗ್. ಜೈಲಿನಲ್ಲಿ ಇದ್ದಾಗಿನಿಂದಲೂ ವೇಟ್​ಲಿಫ್ಟಿಂಗ್ ಮಾಡುತ್ತಲಿರುವ ನ್ಯಾಥನ್ ತಮ್ಮ 22 ನೇ ವಯಸ್ಸಿನಲ್ಲಿಯೇ 340 ಕೆಜಿ ಡೆಡ್ ಲಿಫ್ಟ್ ಮಾಡಿ ವಿಶ್ವದಾಖಲೆ ಮುರಿದಿದ್ದರು. ಈಗಲೂ ಅವರಿಗೆ ವೇಟ್​ಲಿಫ್ಟಿಂಗ್ ಮೆಚ್ಚಿನ ವ್ಯಾಯಾಮವಂತೆ. ವ್ಯಾಯಾಮದ ಜೊತೆಗೆ ಆಹಾರದ ಬಗ್ಗೆಯೂ ವಿಶೇಷ ಕಾಳಜಿ ಹೊಂದಿರುವ ನ್ಯಾಥನ್, ಮಾಂಸಾಹರ ಹಾಗೂ ಸಸ್ಯಜನ್ಯ ಆಹಾರವನ್ನು ಸೇವಿಸುತ್ತಾರೆ.

ರೂಬಿಲ್ ಮೊಸ್ಕ್ಯುರಾ ಪರಿಚಯ:

ಟೀಸರ್​ನಲ್ಲಿ ಗಮನ ಸೆಳೆಯುವ ಮತ್ತೋರ್ವ ದೈತ್ಯನ ಹೆಸರು ರೂಬಿಲ್ ಮೊಸ್ಕ್ಯುರಾ. ಬಾರಿ ಗಾತ್ರದ ಕತ್ತನ್ನು ಹೊಂದಿರುವ ಕಾರಣ ಈತನನ್ನು ದೈತ್ಯ ಜನಗಳ ಲೋಕ ಕರೆಯುವುದು ‘ನೆಕ್​ಜಿಲಾ’ ಎಂದು. ಅವರಷ್ಟು ದಪ್ಪ, ದೊಡ್ಡದಾದ ಕತ್ತನ್ನು ಹೊಂದಿರುವ ವ್ಯಕ್ತಿ ವಿಶ್ವದಲ್ಲಿಯೇ ಇಲ್ಲ ಎಂಬುದು ಅಚ್ಚರಿಯ ಸಂಗತಿ.

ದಿನದ ಹೆಚ್ಚು ಸಮಯ ಜಿಮ್‌ನಲ್ಲಿ ಕಳೆಯುವ ಈತ ಕೊಲಂಬಿಯಾ ದೇಶದವರು. ಕತ್ತಿನ ಭಾಗಕ್ಕಾಗಿಯೇ ವಿಶೇಷ ವ್ಯಾಯಾಮ, ಲಿಫ್ಟಿಂಗ್​ಗಳನ್ನು ಮಾಡುತ್ತಾರೆ. ವಿಶ್ವದ ಕಠಿಣ ಬಾಡಿಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಒಂದಾದ ಐಎಫ್​ಬಿಬಿ ಸ್ಪರ್ಧೆಯಲ್ಲಿ ಸಹ ರೂಬಿಲ್ ಗಮನ ಸೆಳೆದಿದ್ದಾರೆ.

ಇನ್ನು ಈ ಇಬ್ಬರು ದೈತ್ಯರೊಂದಿಗೆ ಮಾರ್ಟಿನ್ ಸಿನಿಮಾದಲ್ಲಿ ಧ್ರುವ ಸರ್ಜಾ ಹೇಗೆ ಸೆಣಸಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *