ಕನಸು ನಿಯಂತ್ರಿಸಲು ಮೆದುಳಿಗೆ ಮೈಕ್ರೋ ಚಿಪ್ ಅಳವಡಿಕೆ ಪ್ಲ್ಯಾನ್ – ತಾನೇ ಶಸ್ತ್ರಚಿಕಿತ್ಸೆ ಮಾಡಿಕೊಂಡವನಿಗೆ ಅದೇನಾಯ್ತು?

ಕನಸು ನಿಯಂತ್ರಿಸಲು ಮೆದುಳಿಗೆ ಮೈಕ್ರೋ ಚಿಪ್ ಅಳವಡಿಕೆ ಪ್ಲ್ಯಾನ್ – ತಾನೇ ಶಸ್ತ್ರಚಿಕಿತ್ಸೆ ಮಾಡಿಕೊಂಡವನಿಗೆ ಅದೇನಾಯ್ತು?

ನ್ಯೂಸ್ ಆ್ಯರೋ‌ : ಪ್ರತಿಯೊಬ್ಬರಿಗೂ ಕನಸು ಬೀಳುತ್ತದೆ. ಅದರ ನಿಯಂತ್ರಣ ಎನ್ನುವುದು ನಮ್ಮ ಕೈಯಲ್ಲಿ ಇರುವುದಿಲ್ಲ. ಆದರೆ ಇಲ್ಲೊಬ್ಬ ಬೇಡದ ಕನಸುಗಳನ್ನು ತಡೆಯಲು, ಸುಂದರ ಕನಸು ಮಾತ್ರ ಬೀಳುವಂತೆ ಮಾಡುವ ಹುಚ್ಚು ಸಾಹಸಕ್ಕೆ ಕೈಹಾಕಿ ತೊಂದರೆಗೆ ಸಿಲುಕಿದ್ದಾನೆ.

ಏನಿದು ಪ್ರಕರಣ?

ಈ ವಿಚಿತ್ರ ಘಟನೆ ನಡೆದಿರುವುದು ರಷ್ಯಾದ ಮಾಸ್ಕೋದಲ್ಲಿ. ಮಿಖಾಯಿಲ್ ರಾಡುಗಾ ಎಂಬ 40 ವರ್ಷದ ವ್ಯಕ್ತಿ ತನ್ನ ಕನಸುಗಳನ್ನು ನಿಯಂತ್ರಿಸಲು ತಲೆಯೊಳಗೆ ಮೈಕ್ರೋ ಚಿಪ್ ಅಳವಡಿಸಿಕೊಳ್ಳಲು ತಾನೇ ಶಸ್ತ್ರಚಿಕಿತ್ಸೆಗೆ ಮುಂದಾಗಿ ಭಾರೀ ಬೆಲೆ ತೆತ್ತಿದ್ದಾನೆ.

ಮೆದುಳಿನೊಳಗೆ ಎಲೆಕ್ಟ್ರೋಡ್ ಮತ್ತು ವಿದ್ಯುತ್ ಉತ್ತೇಜಕವನ್ನು ಅಳವಡಿಸುವ ಯೋಜನೆಯನ್ನು ರಾಡುಗಾ ಬಹಳ ಹಿಂದಿನಿಂದಲೇ ಪ್ರಯೋಗಿಸುತ್ತಲೇ ಇದ್ದ. ಕನಸುಗಳು ಬೀಳುತ್ತಿರುವ ಅರೆ ನಿದ್ರಾವಸ್ಥೆಯಲ್ಲೇ ಈ ಪ್ರಯೋಗ ನಡೆಸುವ ಯೋಜನೆ ಹೊಂದಿರುವುದಾಗಿ ಆತ ಜುಲೈ 18ರಂದು ಟ್ವೀಟ್ ಮಾಡಿದ್ದ.

ತನ್ನನ್ನೇ ಪ್ರಯೋಗಕ್ಕೆ ಒಡ್ಡಿಕೊಂಡ ರಾಡುಗಾ, ಡ್ರಿಲರ್ ಯಂತ್ರದಿಂದ ತಲೆಯಲ್ಲಿ ರಂಧ್ರ ಕೊರೆಯಲು ಮುಂದಾದಾಗ ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತಪಾಸಣೆ ವೇಳೆ ವೈದ್ಯರಿಗೆ ರಾಡುಗಾ ತಲೆಯೊಳಗೆ 1 ವರ್ಷದ ಹಿಂದೆಯೇ ಸೇರಿದ್ದ ಎಲೆಕ್ಟ್ರೋಡ್ ಪತ್ತೆಯಾಗಿತ್ತು. ನಾಲ್ಕು ಗಂಟೆಗಳ ಶಸ್ತ್ರಚಿಕಿತ್ಸೆಯ ಬಳಿಕ ರಾಡುಗಾನನ್ನು ವೈದ್ಯರು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *