ಚಂದ್ರಯಾನ -3 ಉಪಗ್ರಹ ಉಡಾವಣೆಗೆ ನೆರವಾದ ಕಂಪನಿಗಳಿಗೆ ಒಲಿದ ಅದೃಷ್ಟ – ಶೇರು ಮಾರುಕಟ್ಟೆಯಲ್ಲಿ ಶೇರು ಮೌಲ್ಯ ದಿಢೀರ್ ಏರಿಕೆ

ಚಂದ್ರಯಾನ -3 ಉಪಗ್ರಹ ಉಡಾವಣೆಗೆ ನೆರವಾದ ಕಂಪನಿಗಳಿಗೆ ಒಲಿದ ಅದೃಷ್ಟ – ಶೇರು ಮಾರುಕಟ್ಟೆಯಲ್ಲಿ ಶೇರು ಮೌಲ್ಯ ದಿಢೀರ್ ಏರಿಕೆ

ನ್ಯೂಸ್ ಆ್ಯರೋ‌ : ಕಳೆದ ಜುಲೈ 14ರಂದು ಚಂದ್ರನತ್ತ ಚಿಮ್ಮಿದ ಭಾರತದ ಹೆಮ್ಮೆಯ ಚಂದ್ರಯಾನ-3 ಯೋಜನೆಯಲ್ಲಿ ಹಲವು ಕಂಪೆನಿಗಳು ಇಸ್ರೋ ಜೊತೆ ಕೈಜೋಡಿಸಿವೆ. ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿಯುವ ಹೊತ್ತಿಗೆ ಕಂಪೆನಿಗಳ ಶೇರುಗಳ ಮೌಲ್ಯ ಹೆಚ್ಚುವ ಸಾಧ್ಯತೆ ಇದೆ.

ಯಾವೆಲ್ಲ ಕಂಪೆನಿಗಳು?

ನೌಕೆಯನ್ನು ಸರಿಯಾದ ಕಕ್ಷೆಗೆ ಸೇರಿಸುವಲ್ಲಿ ನೆರವಾಗುವ ತಂತ್ರಾಂಶವನ್ನು ಸಿದ್ದಪಡಿಸಿದ ಟಾಟಾ ಎಲೆಕ್ಸಿ ಕಂಪೆನಿಯ ಪ್ರತಿ ಶೇರಿಗೆ ಉಡ್ಡಯನದ ದಿನವಾದ ಜುಲೈ 14ರಂದು 7,600 ರೂ. ಇತ್ತು. ಅದು ಸದ್ಯ 7360 ರೂ.ಗೆ ಇಳಿದಿದೆ.

ಲ್ಯಾಂಡರ್ ಅಭಿವೃದ್ದಿಪಡಿಸಿದ ಟಾಟಾ ಅಡ್ವಾನ್ಸ್ಡ್ ಸಿಸ್ಟಂನ ಶೇರು ಶೇ. 7ರ ವೃದ್ಧಿ ದರದಲ್ಲಿ ಸದ್ಯ 14.95 ರೂ.ಗೆ ಲಭ್ಯ. ಇನ್ನು ಶ್ರೀಹರಿಕೋಟಾದಲ್ಲಿರುವ ಉಡ್ಡಯನ ಕೇಂದ್ರದಲ್ಲಿನ ಲ್ಯಾಂಚ್ ಪ್ಯಾಡ್ ನಿರ್ಮಿಸಿದ ಎಲ್ ಆ್ಯಂಡ್ ಟಿ ಕಂಪೆನಿಯ ಶೇರು 2,557 ರೂ. ಮೌಲ್ಯ ಹೊಂದಿದೆ. ಜುಲೈ 14ರಂದು 2,460 ರೂ. ಇತ್ತು.

ಮಾರ್ಕ್-3 ರಾಕೆಟ್ ನ ಎಂಜಿನ್ ಮತ್ತು ಕೋರ್ ಪಂಪ್ ಗಳನ್ನು ಸಿದ್ಧಪಡಿಸಿದ ಎಂಟಿಎಆರ್ ಟೆಕ್ ನ ಶೇರು ಕೂಡ ಏರಿಕೆಯಾಗಿ 2,124 ರೂ.ಗೆ ತಲುಪಿದೆ. ಲ್ಯಾಂಡರ್ ಮತ್ತು ರೂವರ್ ಹೊತ್ತೊಯ್ಯುವ ಪೇಲೋಡ್ ಸಿದ್ದಪಡಿಸಿದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಶೇರು 125 ರೂ. ಆಸುಪಾಸಿನಲ್ಲಿದ್ದು ಬೆಳವಣಿಗೆಯ ಹಾದಿಯಲ್ಲಿದೆ.

ಲ್ಯಾಂಡರ್ ಸಿದ್ಧಪಡಿಸುವುದು ಮತ್ತು ಇತರ ಮೆಕ್ಯಾನಿಕಲ್ ಭಾಗಗಳನ್ನು ಸಜ್ಜುಗೊಳಿಸುವಲ್ಲಿ ನೆರವಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನ ಶೇರಿನ ಬೆಲೆ 3,873 ರೂ. ಇದೆ. ಜು. 14ರಂದು 3,840 ರೂ. ಇತ್ತು. ಎಲೆಕ್ಟ್ರಾನಿಕ್ ಭಾಗಗಳನ್ನು ಅಭಿವೃದ್ದಿಪಡಿಸಿದ ಸೆಂಟಮ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನ ಶೇರು ಬೆಲೆ 1,396 ರೂ.ಗೆ ತಲುಪಿದೆ.

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *