ದುಬೈಯಿಂದ ಬರುವ ಮಗಳಿಗೆ ತಾಯಿ ಕೇಳಿದ ಗಿಫ್ಟ್ ಏನ್ ಗೊತ್ತಾ? – ತಾಯಿಯ ಆಸೆ ತೀರಿಸಿದ ಮಗಳು, ಟ್ವೀಟ್ ವೈರಲ್…!!

ದುಬೈಯಿಂದ ಬರುವ ಮಗಳಿಗೆ ತಾಯಿ ಕೇಳಿದ ಗಿಫ್ಟ್ ಏನ್ ಗೊತ್ತಾ? – ತಾಯಿಯ ಆಸೆ ತೀರಿಸಿದ ಮಗಳು, ಟ್ವೀಟ್ ವೈರಲ್…!!

ನ್ಯೂಸ್ ಆ್ಯರೋ‌ : ಬೆಲೆ ಏರಿಕೆಯಿಂದ ದುಬಾರಿಯಾಗಿರುವ ಟೊಮ್ಯಾಟೋ ಸದ್ಯ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಟೊಮ್ಯಾಟೋ ಕುರಿತಾದ ಮೀಮ್ಸ್ ಗಳು ಹರಿದಾಡುತ್ತಿವೆ. ಈ ಮಧ್ಯೆ ದುಬೈಯಿಂದ ಬೆಂಗಳೂರಿಗೆ ಆಗಮಿಸಿದ ಮಹಿಳೆಯೊಬ್ಬರು 10 ಕೆಜಿ ಟೊಮ್ಯಾಟೋ ತಂದು ತಾಯಿಯ ಆಸೆ ಪೂರೈಸಿದ್ದಾರೆ. ಸದ್ಯ ಈ ವಿಚಾರ ವೈರಲ್ ಆಗಿದೆ.

ವೈರಲ್ ಆದ ಟ್ವೀಟ್

ದುಬೈಯಲ್ಲಿ ವಾಸಿಸುತ್ತಿರುವ ಮಹಿಳೆ ರಜೆಗಾಗಿ ಭಾರತಕ್ಕೆ ಹೊರಟಿದ್ದರು. ಈ ಸಂದರ್ಭದಲ್ಲಿ ಅವರು ತನ್ನ ತಾಯಿ ಬಳಿ ಏನು ತರಬೇಕೆಂದು ಕೇಳಿದ್ದರು. ಅದಕ್ಕೆ ತಾಯಿ, ಇಲ್ಲಿ ಟೊಮ್ಯಾಟೋ ಬೆಲೆ ಏರಿಕೆಯಾಗಿದೆ. ಹೀಗಾಗಿ ಅದನ್ನೇ ತರಲು ಹೇಳಿದ್ದಾರೆ. ಅದರಂತೆ ಮಹಿಳೆ 10 ಕೆಜಿ ಟೊಮ್ಯಾಟೋ ವನ್ನು ಸೂಟ್ ಕೇಸ್ ನಲ್ಲಿ ಹಿಡಿದುಕೊಂಡು ಬಂದಿದ್ದಾರೆ. ಇದನ್ನು ಮಹಿಳೆಯ ಸಹೋದರಿ ಟ್ವೀಟ್ ನಲ್ಲಿ ಬಹಿರಂಗ ಪಡಿಸಿದ್ದು, ವೈರಲ್ ಆಗಿದೆ.

ಸದ್ಯ ಈ ಟ್ವೀಟ್ 50 ಸಾವಿರಕ್ಕೂ ಹೆಚ್ಚಿನ ವ್ಯೂಸ್ ಪಡೆದಿದೆ. ಅನೇಕರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಕೆಲವರಂತೂ ಟೊಮ್ಯಾಟೋ ಸಂಗ್ರಹಣೆ ಮತ್ತು ಕಸ್ಟಮ್ಸ್ ನಿಯಮಗಳ ಕುರಿತಾದ ಸಂದೇಹ ಕೇಳಿದ್ದಾರೆ.

ಹವಾಮಾನ ವೈಪರೀತ್ಯದಿಂದ ದೇಶದೆಲ್ಲೆಡೆ ಟೊಮ್ಯಾಟೋ ಬೆಲೆ ಏರಿಕೆಯಾಗಿದೆ. ಕೆಲವು ರಾಜ್ಯಗಳಲ್ಲಿ ಕೆಜಿಗೆ 250 ರೂ. ದಾಟಿದೆ. ಬೆಲೆ ನಿಯಂತ್ರಣಕ್ಕೆ ಕೆಲವು ದಿನ ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *