ಗೋಲ್ಡನ್ ವೀಸಾ ಇದ್ದರೂ ತಾಯ್ನಾಡಿಗೆ ಮರಳುವ ಹಂಬಲ – ಏಕಾಏಕಿ‌ ಹೆಚ್ಚುತ್ತಿರುವ ಈ ಬೆಳವಣಿಗೆಗೆ ಕಾರಣವೇನು?

ಗೋಲ್ಡನ್ ವೀಸಾ ಇದ್ದರೂ ತಾಯ್ನಾಡಿಗೆ ಮರಳುವ ಹಂಬಲ – ಏಕಾಏಕಿ‌ ಹೆಚ್ಚುತ್ತಿರುವ ಈ ಬೆಳವಣಿಗೆಗೆ ಕಾರಣವೇನು?

ನ್ಯೂಸ್ ಆ್ಯರೋ : ವಿದೇಶದಲ್ಲಿ ಇದ್ದರೂ ಹೆಚ್ಚಿನವರ ಮನಸ್ಸು ತಾಯ್ನಾಡಲ್ಲೇ ಇರುತ್ತದೆ. ಯಾಕೆಂದರೆ ವಿದೇಶದಲ್ಲಿ ವಾಸ ಹೆಚ್ಚಿನವರ ಅನಿವಾರ್ಯತೆ ಆಗಿರುತ್ತದೆ. ಆದರೆ ಇತ್ತೀಚೆಗೆ ಅದರಲ್ಲೂ ಮುಖ್ಯವಾಗಿ ಕೊರೊನಾ ಸಾಂಕ್ರಾಮಿಕ ಬಂದು ಹೋದ ಮೇಲೆ ಹೆಚ್ಚಿನವರು ತಾಯ್ನಾಡಿಗೆ ಮರಳಬೇಕು ಎನ್ನುವ ಪ್ರಬಲ ಇಚ್ಛೆ ಹೊಂದಿದ್ದಾರೆ.

ನಿರ್ದಿಷ್ಟ ಹಣ ಹೂಡಿಕೆ ಮಾಡಿ ವಿದೇಶಿದಲ್ಲಿ ವಸತಿ, ಪೌರತ್ವ ಪಡೆಯುವ ಆಸೆ ಬಿಟ್ಟು ಗೋಲ್ಡನ್ ವೀಸಾ ಹೊಂದಿರುವ ಅನೇಕ ಶ್ರೀಮಂತರು ಈಗ ತಾಯ್ನಾಡಿಗೆ ಮರಳುತ್ತಿದ್ದಾರೆ.

ಸಾಮಾನ್ಯವಾಗಿ ಗೋಲ್ಡನ್ ವೀಸಾ ಪಡೆದವರು ತಾಯ್ನಾಡಿಗೆ ಮರಳಿ ಬರುವುದು ಕಡಿಮೆ. ಆದರೂ ಈಗ ಮರಳಿ ಬರುವ ಟ್ರೆಂಡ್ ಶುರುವಾಗಿದೆ. ಇದಕ್ಕೆ ಕಾರಣವೂ ಇದೆ.

ಕಳೆದ ವರ್ಷಕ್ಕೆ ಹೋಲಿಸಿದರೆ 2023 ರಲ್ಲಿ ಗೋಲ್ಡನ್ ವೀಸಾ ಅರ್ಜಿದಾರರಲ್ಲಿ ತಾಯ್ನಾಡಿಗೆ ಮರಳುವವರ ಸಂಖ್ಯೆ ಶೇ. 15ರಷ್ಟು ಏರಿಕೆಯಾಗಿದೆ ಎಂದು ಜಾಗತಿಕ ಪೌರತ್ವ ಮತ್ತು ನಿವಾಸ ಸಲಹಾ ಸಂಸ್ಥೆಯಾದ ಹೆನ್ಲಿ ಏಂಡ್ ಪಾರ್ಟ್‌ನರ್ಸ್ ವರದಿ ತಿಳಿಸಿದೆ.

ವಿಭಿನ್ನ ಸಂಸ್ಕೃತಿ, ಹೊಸ ಪರಿಸರಕ್ಕೆ ಹೊಂದಿಕೊಳ್ಳುವಲ್ಲಿ ಎದುರಾಗುವ ಸವಾಲುಗಳು, ಆಹಾರ, ಸಂಪ್ರದಾಯ, ಜೀವನ ಮೌಲ್ಯಗಳ ಹಿನ್ನೆಲೆಯಲ್ಲಿ ಹೆಚ್ಚಿನವರು ತಾಯ್ನಾಡಿಗೆ ಮರಳಲು ಮುಖ್ಯ ಕಾರಣವಾಗಿದೆ.

ವಿದೇಶಕ್ಕೆ ಹೋದವರಲ್ಲಿ ಹೆಚ್ಚಿನವರು ಕುಟುಂಬಗಳ ಮೌಲ್ಯವನ್ನು ಅರಿತುಕೊಂಡಿದ್ದಾರೆ. ಹೀಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ವಯಸ್ಸಾದ ಪೋಷಕರಿಗೆ ಉತ್ತಮ ಆರೋಗ್ಯವನ್ನು ಒದಗಿಸಲು ತಾಯ್ನಾಡಿಗೆ ಮರಳಿ ಬರುತ್ತಿದ್ದಾರೆ.

ಸೈಪ್ರಸ್, ಮಾಲ್ಟಾ ಮತ್ತು ಮಾಂಟೆನೆಗ್ರೊದಂತಹ ಕೆಲವು ದೇಶಗಳು ಇತ್ತೀಚಿನ ದಿನಗಳಲ್ಲಿ ರಾಜಕೀಯ ಅಸ್ಥಿರತೆ ಮತ್ತು ಅನಿಶ್ಚಿತತೆಯನ್ನು ಎದುರಿಸುತ್ತಿವೆ. ಇದು ವಿದೇಶದಲ್ಲಿ ನೆಲೆಸಿದವರಲ್ಲಿ ಆತಂಕ ಉಂಟುಮಾಡುತ್ತಿದೆ.

ತಾಯ್ನಾಡಿಗೆ ಮರಳಿದವರಲ್ಲಿ ಹೆಚ್ಚಿನವರು ತಮ್ಮ ಸಂಪತ್ತು, ಕೌಶಲ್ಯ, ಜ್ಞಾನ ಮತ್ತು ಅನುಭವವನ್ನು ರಿಯಲ್ ಎಸ್ಟೇಟ್, ಪ್ರವಾಸೋದ್ಯಮ, ತಂತ್ರಜ್ಞಾನ ಮತ್ತು ಶಿಕ್ಷಣದಂತಹ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡ ಬಯಸುತ್ತಾರೆ. ಇದಕ್ಕೆ ಅವರು ಹೆಚ್ಚಿನ ಸಹಕಾರವನ್ನು ತಾಯ್ನಾಡಿನಲ್ಲಿ ಪಡೆಯುತ್ತಾರೆ. ಇದೇ ಕಾರಣದಿಂದ ಗೋಲ್ಡನ್ ವೀಸಾ ಅರ್ಜಿದಾರರು ತಮ್ಮ ತಾಯ್ನಾಡಲ್ಲಿ ಅನುಭವಿಸುವ ಸ್ವಾತಂತ್ರ್ಯ ಬೇರೆ ದೇಶಗಳಲ್ಲಿ ಅವರಿಗೆ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಹೀಗಾಗಿ ಮರಳಿ ಗೂಡಿಗೆ ಬರಲು ಹಲವಾರು ವಿದೇಶಿ ವಲಸಿಗರು ಮನಸ್ಸು ಮಾಡುತ್ತಿದ್ದಾರೆ.

ಇನ್ನು ಕೋವಿಡ್ ಸಾಂಕ್ರಾಮಿಕ, ಕೆಲವು ದೇಶಗಳಲ್ಲಿ ಎದುರಾದ ಆರ್ಥಿಕ ಸಂಕಷ್ಟ, ಯುದ್ಧ ಭಯವೂ ಅನೇಕರನ್ನು ತಾಯ್ನಾಡಿನತ್ತ ಮುಖ ಮಾಡುವಂತೆ ಮಾಡಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *