
ನ.19ರಂದು ಏರ್ ಇಂಡಿಯಾ ವಿಮಾನ ಸ್ಫೋಟಿಸುತ್ತೇವೆ..!! – ಬೆದರಿಕೆ ಹಾಕಿದ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್
- ಅಂತಾರಾಷ್ಟ್ರೀಯ ಸುದ್ದಿ
- November 4, 2023
- No Comment
- 112
ನ್ಯೂಸ್ ಆ್ಯರೋ : ಏರ್ ಇಂಡಿಯಾ ವಿಮಾನ ಸ್ಫೋಟಿಸುವುದಾಗಿ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಬೆದರಿಕೆ ಹಾಕಿದ್ದಾನೆ.
ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಬೆದರಿಕೆ ಹಾಕುತ್ತಿರುವ ಖಲಿಸ್ತಾನಿ ಉಗ್ರರು ಕೆನಾಡದಿಂದ ಈ ಬೆದರಿಕೆ ವಿಡಿಯೋವನ್ನು ಕಳುಹಿಸಿದ್ದಾರೆ.
ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಕಳುಹಿಸಿರುವ ಈ ವಿಡಿಯೋ ದಲ್ಲಿ ನವೆಂಬರ್ 19 ರಂದು ಸಿಖ್ ಸಮುದಾಯದ ಯಾರೂ ಕೂಡ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಡಿ. ಅಂದು ಏರ್ ಇಂಡಿಯಾ ವಿಮಾನದ ಮೇಲೆ ದಾಳಿ ನಡೆಯಲಿದೆ ಎಂದು ತಿಳಿಸಿದ್ದಾನೆ.
ರೋಬೊಟ್ ರಾಕೆಟ್ ಮೂಲಕ ಏರ್ ಇಂಡಿಯಾ ವಿಮಾನದ ಮೇಲೆ ದಾಳಿ ನಡೆಸಿ ಸ್ಪೋಟಿಸುವುದಾಗಿ ಹೇಳಿರುವ ಆತ ಆ ದಿನ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಂದ್ ಆಗಿರುತ್ತದೆ. ಯಾವುದೇ ಸೇವೆ ಇರುವುದಿಲ್ಲ ಎಂದು ತಿಳಿಸಿದ್ದಾನೆ.
ಭಾರತವನ್ನು ಮೇಲೇಳಲು ಬಿಡುವುದಿಲ್ಲ. ಸಂಪೂರ್ಣ ಅರ್ಥವ್ಯವಸ್ಥೆಯನ್ನು ಹಾಳುಮಾಡುತ್ತೇವೆ. ಭಾರತದ ಸೊಕ್ಕು ಮುರಿದು ಸಿಖ್ ಸಮುದಾಯದ ಅಧಿಪತ್ಯ ಸ್ಥಾಪನೆಯಾಗಲಿದೆ ಎಂದು ತಿಳಿಸಿದ್ದಾನೆ.
ಐಸಿಸಿ ವಿಶ್ವಕಪ್ ಟೂರ್ನಿಗೆ ಬೆದರಿಕೆ ಹಾಕಿದ್ದ ಖಾಲಿಸ್ತಾನಿ ಉಗ್ರರಿಂದ ಈಗ ಮತ್ತೊಂದು ಬೆದರಿಕೆ ಬಂದಿದೆ. ನಿಜ್ಜರ್ ಹತ್ಯೆಗೆ ನಾವು ಪ್ರತೀಕಾರ ತೆಗೆದುಕೊಳ್ಳುತ್ತೇವೆ ಎಂದು ಉಗ್ರರು ಹೇಳಿದ್ದರು.