ಹುಡುಗಿ ಕರೆದಳೆಂದು ಬಾಡಿಗೆ ರೂಂಗೆ ಹೋದ ಯೂಟ್ಯೂಬರ್ – ಜ್ಯೂಸ್ ಕುಡಿದು ಕಣ್ಣು ಬಿಟ್ಟಾಗ ಬಟ್ಟೆ ಬಿಚ್ಚಿ ಬೆತ್ತಲಾಗಿದ್ದ..!!

ಹುಡುಗಿ ಕರೆದಳೆಂದು ಬಾಡಿಗೆ ರೂಂಗೆ ಹೋದ ಯೂಟ್ಯೂಬರ್ – ಜ್ಯೂಸ್ ಕುಡಿದು ಕಣ್ಣು ಬಿಟ್ಟಾಗ ಬಟ್ಟೆ ಬಿಚ್ಚಿ ಬೆತ್ತಲಾಗಿದ್ದ..!!

ನ್ಯೂಸ್ ಆ್ಯರೋ : ಯೂಟ್ಯೂಬರ್‌ ಒಬ್ಬನನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಹಣ ಹಾಗೂ ಕಾರನ್ನು ದೋಚಿರುವ ಘಟನೆ ಕೇರಳದಲ್ಲಿ ನಡೆದಿದೆ. ಈ ಸಂಬಂಧ ಇಬ್ಬರು ಯುವತಿಯರು ಸೇರಿದಂತೆ ನಾಲ್ವರು ಆರೋಪಿಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಇಡುಕ್ಕಿಯ ವತ್ತಪರಾ ಮೂಲದ ಪಿ.ಎಸ್​. ಅಭಿಲಾಷ್​ (28), ಕೊಲ್ಲಂನ ಕೈತೋಡ್​ ನೀಲಮೇಲ್​ ನಿವಾಸಿ ಎ.ಐ. ಅಮೀನ್​ (23), ಇಡುಕ್ಕಿಯ ಸಾಂತಂಪರಾ ಮೂಲದ ಪಿ. ಅಥಿರಾ (28) ಹಾಗೂ ಇಡುಕ್ಕಿಯ ವಲರಾ ಮೂಲದ ಕೆ.ಕೆ. ಅಕ್ಷಯಾ (21) ಎಂದು ಗುರುತಿಸಲಾಗಿದೆ.

ನಾಲ್ವರನ್ನು ಥ್ರಿಪ್ಪನಿಥುರಾದಲ್ಲಿರುವ ಅಪಾರ್ಮೆಂಟ್​ನಲ್ಲಿ ಕೂಥಟ್ಟುಕುಲಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ವಂಚನೆಗೆ ಒಳಗಾದ ಕೌನ್ಸಿಲಿಂಗ್ ಯುವಕನ್ನು ಯೂಟ್ಯೂಬರ್ ಎಂದು ಗುರುತಿಸಲಾಗಿದೆ.

ಘಟನೆಯ ಹಿನ್ನೆಲೆ:

ಆರೋಪಿ ಅಕ್ಷಯಾ ತನಗೆ ಕೌನ್ಸೆಲಿಂಗ್ ಬೇಕೆಂದು ಯೂಟ್ಯೂಬರ್‌ಗೆ ಕರೆ ಮಾಡಿ ಕೂಥಟ್ಟುಕುಲಂನಲ್ಲಿರುವ ಬಾಡಿಗೆ ರೂಮಿಗೆ ಕರೆಸಿಕೊಂಡಿದ್ದಾಳೆ. ರೂಮಿಗೆ ತೆರಳಿದ ಬಳಿಕ ಅಕ್ಷಯಾ ಕೊಟ್ಟ ಜ್ಯೂಸ್ ಕುಡಿದ ಯೂಟ್ಯೂಬರ್​ ನಿದ್ದೆಗೆ ಜಾರಿದ್ದಾರೆ. ಎಚ್ಚರಗೊಳ್ಳುವಷ್ಟರಲ್ಲಿ ವಂಚನೆ ಗ್ಯಾಂಗ್​ನ ನಾಲ್ವರು ಸೇರಿ ಆಥಿರಾ ಜತೆ ಬೆತ್ತಲೆಯಾಗಿ ನಿಲ್ಲುವಂತೆ ಮಾಡಿ ಫೋಟೋ, ವಿಡಿಯೋ ತೆಗೆದಿದ್ದಾರೆ.

ಇದಾದ ಬಳಿಕ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಯೂಟ್ಯೂಬರ್​ಗೆ ಬೆದರಿಕೆಯೊಡ್ಡಿದ್ದಾರೆ. ಇದರಿಂದ ಹೆದರಿದ ಯೂಟ್ಯೂಬರ್ ಗ್ಯಾಂಗ್​ನ ಬೇಡಿಕೆಯಂತೆ ತನ್ನ ಖಾತೆಯಲ್ಲಿದ್ದ ₹14000 ಗೂಗಲ್ ಪೇ ಮೂಲಕ ವರ್ಗಾಯಿಸಿದ್ದಾರೆ. ಅಲ್ಲದೆ, ಎರಡು ₹2ಲಕ್ಷ ಮೌಲ್ಯದ ಕಾರನ್ನು ಸಹ ಆರೋಪಿಗಳು ಕಸಿದುಕೊಂಡಿದ್ದಾರೆ.

ಕೂಥಟ್ಟುಕುಲಂ ಠಾಣಾ ಪೊಲೀಸರಿಗೆ ಯೂಟ್ಯೂಬರ್ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯ ನಿವಾಸವನ್ನು ಮೊಬೈಲ್ ಟವರ್ ಲೊಕೇಶನ್ ಮತ್ತು ವಾಹನದ ಜಿಪಿಎಸ್ ಲೊಕೇಶನ್ ಮೂಲಕ ಪತ್ತೆ ಹಚ್ಚಲಾಯಿತು. ನಿನ್ನೆ (ನ.03) ರಾತ್ರಿ ಆರೋಪಿಗಳನ್ನು ಬಂಧಿಸಲಾಗಿದೆ.

ಡಿವೈಎಸ್‌ಪಿ ಟಿ.ಬಿ.ವಿಜಯನ್ ಹಾಗೂ ಇನ್ಸ್​ಪೆಕ್ಟರ್ ಎಂ.ಎ.ಆನಂದ್ ಮಾತನಾಡಿ, ಈ ತಂಡ ಇನ್ಯಾವುದೇ ರೀತಿಯ ವಂಚನೆ ಮಾಡಿದ್ದರೇ ಎಂದು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.

Related post

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 03-12-2023 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಆರೋಗ್ಯ ಪರಿಪೂರ್ಣವಾಗಿರುತ್ತದೆ. ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯುವ ಕಾರಣದಿಂದಾಗಿ ಇಂದು ನೀವು ನಿಮ್ಮ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಕಾರಣದಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ನಿಮ್ಮ ಕುಟುಂಬದೊಂದಿಗೆ…
ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…

Leave a Reply

Your email address will not be published. Required fields are marked *