
ಪಾಕಿಸ್ತಾನದಿಂದ ಪ್ರೀತಿ ಅರಸಿ ಬಂದಿದ್ದ ಸೀಮಾ ಯೂಟ್ಯೂಬ್ ನಿಂದ ಗಳಿಸಿದ್ದೆಷ್ಟು? – ಬಾಡಿಗೆ ಮನೆ ಬಿಟ್ಟು ಸ್ವಂತ ಮನೆಗೆ ಶಿಫ್ಟ್ ಆದ ಸೀಮಾ, ಹುಬ್ಬೇರಿಸಿದ ನೆಟ್ಟಿಗರು..!
- ವೈರಲ್ ನ್ಯೂಸ್
- November 4, 2023
- No Comment
- 144
ನ್ಯೂಸ್ ಆ್ಯರೋ : ಪಾಕ್ ಪ್ರಜೆ ಸೀಮಾ ಹೈದರ್ ಅವರು ಆನ್‌ಲೈನ್ ಗೇಮ್ ಮೂಲಕ ಭಾರತದ ಯುವಕನ ಜತೆ ಪ್ರೀತಿಯಾಗಿ ಮದುವೆಯಾಗಿದ್ದರು. ಸದ್ಯ ಸೀಮಾ ಮಾಡಿದ ಕೆಲಸವೆಲ್ಲಾ ಸುದ್ದಿಯಾಗುತ್ತಿದ್ದು, ಈಚೆಗೆ ಕರ್ವಾ ಚೌತ್ ವ್ರತ ಮಾಡಿದ್ದರು.
ಸಚಿನ್ ಆಯಸ್ಸು ವೃದ್ಧಿಗೆ ಪ್ರಾರ್ಥಿಸಿ ಕರ್ವಾ ಚೌತ್ ವ್ರತ ಕೈಗೊಂಡಿದ್ದ ಸೀಮಾ, ಭಾರತದಲ್ಲಿ ಇದು ತನ್ನ ಮೊದಲ ಕರ್ವಾ ಚೌತ್ ಎಂದಿದ್ದಾರೆ. ಇವರಿಬ್ಬರು ಆಚರಿಸಿದ ಕರ್ವಾ ಚೌತ್ ವ್ರತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಸದ್ಯ ಸೀಮಾ ಹಾಗೂ ಸಚಿನ್ ಯುಟ್ಯೂಬ್ ಚಾನೆಲ್ ಅನ್ನು ಮುನ್ನಡೆಸುತ್ತಿದ್ದು, ಇದರಿಂದನೇ ಆದಾಯವನ್ನು ಗಳಿಸುತ್ತಿದ್ದಾರೆ. ಟಿವಿ ಚಾನೆಲ್ ಒಂದರಲ್ಲಿ ಇವರು ಯೂಟ್ಯೂಬ್‌ನಲ್ಲಿ ಗಳಿಸಿದ ಮೊದಲು ಹಣದ ಬಗ್ಗೆ ಹೇಳಿಕೊಂಡಿದ್ದಾರೆ.
ಮೊದಲ ಬಾರಿ ಸೀಮಾ ಹೈದರ್ ಗೆ ಯುಟ್ಯೂಬ್ ನಿಂದ 45 ಸಾವಿರ ರೂಪಾಯಿ ಸಿಕ್ಕಿದೆ. ತಿಂಗಳ ಕೊನೆಯಲ್ಲಿ ಯೂಟ್ಯೂಬ್ ಹಣವನ್ನು ನೀಡುತ್ತದೆ. ಸೀಮಾ – ಸಚಿನ್ ದಂಪತಿಗೂ ಅಕ್ಟೋಬರ್ ತಿಂಗಳಲ್ಲಿ ₹45 ಸಾವಿರ ಸಿಕ್ಕಿದೆ.
ಪಾಕ್ ಬಿಟ್ಟು ಭಾರತಕ್ಕೆ ಬಂದಿದ್ದ ಸೀಮಾ ಅವರು ಯೂಟ್ಯೂಬ್ ಅನ್ನು ತೆರೆದಿದ್ದರು. ಈ ವೇಳೆ ನಮಗೆ ಜೀವನಕ್ಕೆ ಬೇರೆ ದಾರಿಯಿಲ್ಲ, ಯೂಟ್ಯೂಬ್‌ನಿಂದಲೇ ನಮ್ಮ ಜೀವನ ನಡೆಯಬೇಕು. ಜನರು ಇದಕ್ಕೆ ಸಹಾಯ ಮಾಡಬೇಕೆಂದು ಕೇಳಿಕೊಂಡಿದ್ದರು. ಜನರು ಸೀಮಾ ಮಾತಿಗೆ ಸ್ಪಂದಿಸಿದ್ದು, ಇದೀಗ ಉತ್ತಮ ಗಳಿಕೆಯನ್ನು ಪಡೆದುಕೊಳ್ಳುತ್ತಿದ್ದಾರೆ.
ಸೀಮಾ, ರೀಲ್ಸ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ನೇಪಾಳದಲ್ಲಿಯೂ ಅವರು ರೀಲ್ಸ್ ಮಾಡಿದ್ದರು. ಸೀಮಾ ವಿಡಿಯೋದಲ್ಲಿ ಸಚಿನ್ ಕಾಣಿಸಿಕೊಳ್ತಾರೆ. ನೇಪಾಳದಲ್ಲೂ ಸೀಮಾ ಮಾಡಿದ್ದ ರೀಲ್ಸ್ ನಲ್ಲಿ ಸಚಿನ್ ಇದ್ರು. ಈಗ ಸೀಮಾ ಸಂಪೂರ್ಣ ಯುಟ್ಯೂಬರ್ ಆಗಿದ್ದಾರೆ.
ಪಾಕಿಸ್ತಾನದಿಂದ ಬಂದಾಗ ಸೀಮಾ ಹಾಗೂ ಸಚಿನ್ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈಗ ಸೀಮಾ ತಮ್ಮದೇ ಮನೆಯನ್ನು ಹೊಂದಿದ್ದಾರೆ. ಜನರ ಸಹಾಯದಿಂದ ಮನೆ ಮಾಡಿರೋದಾಗಿ ಸೀಮಾ ಹೇಳಿಕೊಂಡಿದ್ದಾರೆ.
ಇನ್ನೂ ವಿಶೇಷ ಎಂಬಂತೆ ಯೂಟ್ಯೂಬ್ ಚಾನೆಲ್‌ನಿಂದ ಬಂದ ಮೊದಲ ಹಣದಿಂದ ಸಚಿನ್ ಅವರು ಸೀಮಾಗೆ ಉಡುಗೊರೆಯನ್ನು ನೀಡಿದ್ದರಂತೆ. ಸೀಮಾಗೆ ಕರ್ವಾ ಚೌತ್ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಪಾಕಿಸ್ತಾನದಲ್ಲಿ ಕರ್ವಾ ಚೌತ್ ಭಿನ್ನವಾಗಿ ಆಚರಿಸ್ತಾರೆ ಎಂದ ಸೀಮಾ, ಮೊದಲ ಮದುವೆಯಲ್ಲಿ ಖುಷಿ ಇರಲಿಲ್ಲ. ಮೊದಲ ಮದುವೆ ಅಂತ್ಯವಾದ ಕೆಲವೇ ತಿಂಗಳಲ್ಲಿ ಸಚಿನ್ ಸಿಕ್ಕಿದ್ದರು. ಅವರು ನನ್ನನ್ನು ತುಂಬಾ ಪ್ರೀತಿ ಮಾಡ್ತಾರೆ ಎಂದು ಸೀಮಾ ಅವರು ಖುಷಿ ವ್ಯಕ್ತಪಡಿಸಿದ್ದಾರೆ.