ಸೀರೆ ಉಡಿಸಿಯೇ ಲಕ್ಷಾಂತರ ರೂಪಾಯಿ ಕಮಾಯಿ ಮಾಡಿದ ಡಾಲಿ ಜೈನ್ – ಈಕೆ ಸೀರೆ ಉಡಿಸೋಕೆ ಎಷ್ಟು ಲಕ್ಷ ಪಡೀತಾರೆ ಗೊತ್ತಾ?

ಸೀರೆ ಉಡಿಸಿಯೇ ಲಕ್ಷಾಂತರ ರೂಪಾಯಿ ಕಮಾಯಿ ಮಾಡಿದ ಡಾಲಿ ಜೈನ್ – ಈಕೆ ಸೀರೆ ಉಡಿಸೋಕೆ ಎಷ್ಟು ಲಕ್ಷ ಪಡೀತಾರೆ ಗೊತ್ತಾ?

ನ್ಯೂಸ್ ಆ್ಯರೋ‌ : ಸೀರೆ ಮಹಿಳೆಯರ ನೆಚ್ಚಿನ ಉಡುಪು. ವಯಸ್ಸಿನ ಹಂಗಿಲ್ಲದೆ ಎಲ್ಲಾ ಸ್ತ್ರೀಯರು ಸೀರೆಯನ್ನು ಇಷ್ಟಪಡುತ್ತಾರೆ. ಆದರೆ ಕೆಲವರಿಗೆ ಸೀರೆಯನ್ನು ಆಕರ್ಷಕವಾಗಿ ಉಡಲು ಬರುವುದಿಲ್ಲ. ಅಂತಹವರ ಸಮಸ್ಯಗೆ ಇಲ್ಲೊಬ್ಬರು ಪರಿಹಾರ ಒದಗಿಸುತ್ತಾರೆ. ಅಂದರೆ ಬೇರೆಯವರಿಗೆ ಸೀರೆ ಉಡಿಸುತ್ತಾರೆ. ಅವರು ಯಾರು? ಎಷ್ಟು ಶುಲ್ಕ ಪಡೆಯುತ್ತಾರೆ? ಎನ್ನುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಡಾಲಿ ಜೈನ್ ಬೇರೆಯವರಿಗೆ ಸೀರೆ ಉಡಿಸಿಯೇ ಲಕ್ಷಾಧಿಪತಿ ಆಗಿದ್ದಾರೆ. ಬಿಟೌನ್‌ ಸೆಲೆಬ್ರಿಟಿಗಳು ಮದುವೆ, ಅವಾರ್ಡ್‌ ಕಾರ್ಯಕ್ರಮ ಅಥವಾ ಇತರ ಕಾರ್ಯಕ್ರಮಗಳಿಗೆ ಹೋಗುವಾಗ ಅವರಿಗೆ ಡಾಲಿ ಜೈನ್‌ ಆಕರ್ಷಕವಾಗಿ ಸೀರೆ ಉಡಿಸುತ್ತಾರೆ. ಬಾಲಿವುಡ್‌ ನಟಿ ಆಲಿಯಾ ಭಟ್‌ ಅವರ ಮದುವೆಯ ಸೀರೆಯನ್ನು ಉಡಿಸಿದ್ದು ಡಾಲಿ ಜೈನ್‌. ಇನ್ನು ಕತ್ರಿನಾ ಕೈಫ್‌ ಮದುವೆಯ ಲೆಹೆಂಗಾದೊಂದಿಗೆ ಸೀರೆಯನ್ನು ಉಡಿಸಿದ್ದು ಕೂಡ ಇವರೇ. ಅಂತಾರಾಷ್ಟ್ರೀಯ ಕಾರ್ಯಕ್ರಮ ಮೆಟ್ ಗಾಲಾಗಾಗಿ ನತಾಶಾ ಪೂನಾವಾಲಾ, ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿರುವ ಸಾರಾ ಆಲಿಖಾನ್‌ ಮತ್ತಿತರರಿಗೆ ಡಾಲಿ ಜೈನ್‌ ಸೀರೆ ಉಡಿಸಿದ್ದಾರೆ.

ಡಾಲಿ ಜೈನ್ ಒಂದು ಸೀರೆ ಉಡಿಸಲು 35 ಸಾವಿರ ರೂ.ಯಿಂದ 2 ಲಕ್ಷ ರೂ.ವರೆಗೂ ಫೀಸ್ ತೆಗೆದುಕೊಳ್ಳುತ್ತಾರೆ ಎಂದರೆ ನೀವು ನಂಬಲೇ ಬೇಕು. ಡಾಲಿ ಇಂದು ಸೀರೆ ಉಡುವ ಸುಮಾರು 325 ವಿಧಾನಗಳನ್ನು ತಿಳಿದುಕೊಂಡಿದ್ದಾರೆ.

ಸೀರೆ ಎಂದರೆ ಆಗುತ್ತಿರಲಿಲ್ಲ..!!

ಮದುವೆಯಾದ ಆರಂಭದಲ್ಲಿ ಡಾಲಿ ಅವರಿಗೆ ಸೀರೆ ಉಡುವುದೆಂದರೆ ಆಗುತ್ತಿರಲಿಲ್ಲವಂತೆ. ಗಂಡನ ಮನೆಯಲ್ಲಿ ಸೀರೆಯನ್ನೇ ದಿನ ಧರಿಸಬೇಕಿತ್ತು. ಪ್ರತಿದಿನ 45 ನಿಮಿಷ ಸೀರೆಯನ್ನು ಉಡುವುದರಲ್ಲೇ ಸಮಯ ವ್ಯರ್ಥವಾಗುತ್ತಿತ್ತು. ಆದರೆ ದಿನ ಕಳೆದಂತೆ ಸೀರೆ ಎಂದರೆ ಪಂಚಪ್ರಾಣ ಎನ್ನುವಷ್ಟರ ಮಟ್ಟಿಗೆ ಆತ್ಮೀಯವಾಯಿತು ಎಂದು ವಿವರಿಸುತ್ತಾರೆ ಡಾಲಿ. ಈಗ ಅವರು ಸೀರೆಯನ್ನು ಗ್ಲೋಬಲ್‌ ಮಟ್ಟದಲ್ಲಿ ಮಿಂಚುವಂತೆ ಮಾಡಲು ಪಣ ತೊಟ್ಟಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *