70 ಲಕ್ಷ ರೂಪಾಯಿ ಲಾಟರಿ ಡ್ರಾ ಆದ್ರೂ ಗೆದ್ದವ ಇನ್ನೂ ಬಂದಿಲ್ಲ‌‌ವಂತೆ – ಅದೃಷ್ಟಶಾಲಿಗಾಗಿ ಲಾಟರಿ ಏಜೆನ್ಸಿಯಿಂದ ಹುಡುಕಾಟ..!!

70 ಲಕ್ಷ ರೂಪಾಯಿ ಲಾಟರಿ ಡ್ರಾ ಆದ್ರೂ ಗೆದ್ದವ ಇನ್ನೂ ಬಂದಿಲ್ಲ‌‌ವಂತೆ – ಅದೃಷ್ಟಶಾಲಿಗಾಗಿ ಲಾಟರಿ ಏಜೆನ್ಸಿಯಿಂದ ಹುಡುಕಾಟ..!!

ನ್ಯೂಸ್ ಆ್ಯರೋ‌ : ಅನೇಕರು ಲಾಟರಿ ಖರೀದಿಸಿ ಡ್ರಾ ದಿನಾಂಕಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಾರೆ. ತಮಗೆ ಎಷ್ಟು ಹಣ ಬಂದಿದೆ ಎಂದು ಫಲಿತಾಂಶ ನೋಡಲು ಕಾತುರರಾಗಿರುತ್ತಾರೆ. ಆದರೆ ಇಲ್ಲೊಬ್ಬರು ತಮಗೆ ಮೊದಲ ಬಹುಮಾನ ಬಂದರೂ ಬಹುಮಾನ ಬಂದ ಲಾಟರಿ ಏಜೆನ್ಸಿಯನ್ನು ಸಂಪರ್ಕಿಸಿಲ್ಲ.

ಕರ್ನಾಟಕ-ಕೇರಳ ಗಡಿ ಭಾಗದ ತಲಪಾಡಿಯಲ್ಲಿರುವ ಅಮಲ್ ಕನಕದಾಸ ಅವರಿಗೆ ಸೇರಿದ ಜಯಮ್ಮ ಲಾಟರಿ ಏಜೆನ್ಸಿಯಲ್ಲಿ ಮಾರಾಟವಾದ ಕೇರಳದ ಅಕ್ಷಯ ಲಾಟರಿಗೆ ಬಂಪರ್ ಬಹುಮಾನ ಬಂದಿದ್ದು, ಇನ್ನೂ ಇದರ ಗ್ರಾಹಕರ ಪತ್ತೆಯಾಗಿಲ್ಲ ಎನ್ನುವುದೇ ಅಚ್ಚರಿಯ ಸಂಗತಿ.

ಮಂಗಳೂರು, ಮಂಜೇಶ್ವರ ಸೇರಿದಂತೆ ಸುತ್ತಮುತ್ತಲಿನ ಗ್ರಾಹಕರನ್ನು ಹೊಂದಿರುವ ಈ ಏಜೆನ್ಸಿಯಲ್ಲಿ ಮಾರಾಟವಾದ ಮೇ 7ರ ಅಕ್ಷಯ ಲಾಟರಿ ಎ.ಟಿ.317545 ನಂಬರ್ ನ ಟಿಕೆಟ್‍ಗೆ 70 ಲಕ್ಷ ರೂ. ಬಂಪರ್ ಬಹುಮಾನ ಬಂದಿದ್ದು, ಈ ಟಿಕೆಟ್ ಪಡದುಕೊಂಡ ಅದೃಷ್ಟ ಶಾಲಿಗೆ ಹುಡುಕಾಟ ನಡೆಯುತ್ತಿದೆ.

ಕನಕದಾಸ ಅವರ ಏಜೆನ್ಸಿಯಿಂದ ಲಾಟರಿ ಖರೀದಿಸಿದ ಒಟ್ಟು ನಾಲ್ಕು ಗ್ರಾಹಕರಿಗೆ ಇದುವರೆಗೆ ಬಂಪರ್ ಬಹುಮಾನ ಬಂದಿದೆ. ಕೆಲ ತಿಂಗಳ ಹಿಂದೆ ಕೆ.ಸಿ. ರೋಡ್‍ನ ವ್ಯಕ್ತಿಯೊಬ್ಬರಿಗೆ 75 ಲಕ್ಷ ರೂ. ಮತ್ತು ಕೋಟೆಕಾರು ಒಲವಿನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸೆಕ್ಯುರಿಟಿ ಗಾರ್ಡ್‍ಗೆ ಒಂದು ಕೋಟಿ ರೂಪಾಯಿ ಬಹುಮಾನ ಬಂದಿತ್ತು. ಇದೀಗ ಅದೃಷ್ಟಶಾಲಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಅಮಲ್ ಕನಕದಾಸ್ ತಿಳಿಸಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *