
ಪ್ರಧಾನಿ ಮೋದಿ ಬಳಸುವ ಫೋನ್ ಯಾವುದು ಗೊತ್ತೆ? – ಏನಿದರ ವೈಶಿಷ್ಟ್ಯ? ಇಲ್ಲಿದೆ ಮಾಹಿತಿ..
- ಕೌತುಕ-ವಿಜ್ಞಾನ
- September 19, 2023
- No Comment
- 114
ನ್ಯೂಸ್ ಆ್ಯರೋ : ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಜನಪ್ರಿಯ ಜನನಾಯಕರಾಗಿ ಚಿರಪರಿಚಿತ. ತಮ್ಮ ಜೀವನ ಶೈಲಿಯಿಂದಲೂ ಅವರು ಗಮನ ಸೆಳೆಯುತ್ತಾರೆ. ಅದರಲ್ಲೂ ಉಡುಗೆ-ತೊಡುಗೆ ವಿಚಾರದಲ್ಲಿ ಅವರು ಒಂದು ಹೆಜ್ಜೆ ಮುಂದೆ. ಅದೇ ರೀತಿ ಅವರು ಬಳಸುವ ಫೋನ್ ಯಾವುದು? ಎನ್ನುವ ಕುತೂಹಲ ಅನೇಕರದ್ದು. ಅದಕ್ಕೆ ಉತ್ತರ ಇಲ್ಲಿದೆ.
ಯಾವ ಮಾದರಿ?
ಭದ್ರತಾ ಕಾರಣಗಳಿಂದ ಮೋದಿ ಸ್ಮಾರ್ಟ್ ಫೋದಿ ಬಳಸುವಂತಿಲ್ಲ. ಹೀಗಾಗಿ ಅವರು ವಿಐಪಿಗಳಿಗೆಂದೇ ವಿಶೇಷವಾಗಿ ವಿನ್ಯಾಸಗೊಳಿಸಿದ ಉಪಗ್ರಹ ಅಥವಾ RAX ಫೋನ್ ಗಳನ್ನು ಬಳಸುತ್ತಾರೆ. ನವರತ್ನ ಪಿ.ಎಸ್.ಯು., ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಿಂದ ಈ ಫೋನ್ ತಯಾರಿಸಲ್ಪಡುತ್ತದೆ.
ವೈಶಿಷ್ಟ್ಯ
ಈ ಫೋನ್ ವಿಶೇಷ ಸಾಫ್ಟ್ ವೇರ್ ಒಳಗೊಂಡಿದೆ. ಈ ಫೋನ್ ಎಲ್ಲಿದೆ ಎನ್ನುವುದನ್ನು ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಅಲ್ಲದೆ ಮಿಲಿಟರಿ ಆವರ್ತನ ಬ್ಯಾಂಡ್ ನಲ್ಲಿ ಕಾರ್ಯನಿರ್ವಹಿಸುವುದರಿಂದ ಇದನ್ನು ಹ್ಯಾಕ್ ಮಾಡಲು ಆಗುವುದಿಲ್ಲ. ಇದರಲ್ಲಿ ಭದ್ರತಾ ಚಿಪ್ ಗಳನ್ನು ಅಳವಡಿಸಲಾಗಿದೆ.
ಮೋದಿ ಬಳಸುವ ಫೋನ್ ಗೆ ರುದ್ರ ಎಂದು ಹೆಸರಿಡಲಾಗಿದೆ. ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಈ ಫೋನ್ ನ ಮೇಲ್ವಿಚಾರಣೆ ನಡೆಸುತ್ತದೆ.