ಗಗನಯಾತ್ರಿಗಳನ್ನು ಕಾಡುತ್ತೆ ಒನಿಕೊಲಿಸಿಸ್ – ಏನಿದು ಸಮಸ್ಯೆ? ಅವರ ಕೈ, ಉಗುರುಗಳು ಏನಾಗುತ್ತವೆ ಗೊತ್ತಾ?

ಗಗನಯಾತ್ರಿಗಳನ್ನು ಕಾಡುತ್ತೆ ಒನಿಕೊಲಿಸಿಸ್ – ಏನಿದು ಸಮಸ್ಯೆ? ಅವರ ಕೈ, ಉಗುರುಗಳು ಏನಾಗುತ್ತವೆ ಗೊತ್ತಾ?

ನ್ಯೂಸ್ ಆ್ಯರೋ : ಗಗನಯಾತ್ರಿಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಸಾಕಷ್ಟು ಇದ್ದೇ ಇರುತ್ತದೆ. ಬಾಹ್ಯಾಕಾಶ ಎನ್ನುವುದು ದೂರದಿಂದ ನೋಡಲು ಎಷ್ಟು ಸುಂದರವಾಗಿರುತ್ತದೆಯೋ ಅಲ್ಲಿಗೆ ಹೋಗಿ ಬಂದವರಿಗೆ ಮಾತ್ರ ಗೊತ್ತಿರುತ್ತದೆ ಏನೆಲ್ಲಾ ಸಮಸ್ಯೆ ಎದುರಾಗುತ್ತದೆ ಎಂದು.

ಜೀವನದಲ್ಲಿ ಎಲ್ಲರಿಗೂ ಬಾಹ್ಯಾಕಾಶಕ್ಕೆ ಹೋಗುವ ಆಸೆಯಂತೂ ಇದ್ದೇ ಇರುತ್ತದೆ. ಆದರೆ ಎಲ್ಲರಿಗೂ ಈ ಅವಕಾಶ ಸಿಗುವುದಿಲ್ಲ. ಹೀಗಾಗಿ ಹೆಚ್ಚಿನವರು ದೂರದಿಂದಲೇ ನೋಡಿ ಇದರ ಬಗ್ಗೆ ಸಂತೃಪ್ತಿ ಪಡುತ್ತಾರೆ.

ಬಾಹ್ಯಾಕಾಶಕ್ಕೆ ಹೋಗಿ ಬಂದವರಲ್ಲಿ ಕೆಲವು ಭಯಾನಕ ಸಮಸ್ಯೆಗಳು ಕಾಡುತ್ತವೆ. ಅದರಲ್ಲಿ ಬೆರಳಿನ ಉಗುರುಗಳಿಗೆ ಒಂದು ವಿಚಿತ್ರ ಸಮಸ್ಯೆ ಕಾಡುತೊಡಗುತ್ತದೆ. ಬಾಹ್ಯಾಕಾಶ ನಡಿಗೆಯ ಅನಂತರ ಗಗನಯಾತ್ರಿಗಳ ಉಗುರುಗಳು ಹೊರಬರುತ್ತವೆ. ಇದನ್ನು ಒನಿಕೊಲಿಸಿಸ್ ಎಂದು ಕರೆಯಲಾಗುತ್ತದೆ.

ಬಾಹ್ಯಾಕಾಶದಲ್ಲಿ, ವಾತಾವರಣ ವಿಭಿನ್ನವಾಗಿರುತ್ತದೆ. ಇದು ಹೆಚ್ಚು ಸವಾಲನ್ನು ಗಗನಯಾತ್ರಿಗಳಿಗೆ ತಂದೊಡ್ಡುತ್ತದೆ. ಒನಿಕೊಲಿಸಿಸ್ ಅಥವಾ ಬೆರಳಿನಿಂದ ಉಗುರುಗಳನ್ನು ಬೇರ್ಪಡಿಸುವುದು ಬಾಹ್ಯಾಕಾಶ ಪ್ರಯಾಣಕ್ಕೆ ಸಂಬಂಧಿಸಿದ ಅನಿರೀಕ್ಷಿತ ಸಮಸ್ಯೆಯಾಗಿದೆ.

ಇದು ಮುಖ್ಯವಾಗಿ ಗಾಳಿಯ ಒತ್ತಡ ಮತ್ತು ಸ್ಪೇಸ್‌ಸೂಟ್‌ಗಳಿಂದ ಉಂಟಾಗುತ್ತದೆ. ಬಾಹ್ಯಾಕಾಶದಲ್ಲಿ, ಹೆಚ್ಚು ಗಾಳಿಯ ಒತ್ತಡ ಇರುವುದಿಲ್ಲ, ಆದ್ದರಿಂದ ಗಗನಯಾತ್ರಿಗಳು ಬಾಹ್ಯಾಕಾಶ ನಡಿಗೆಯ ಸಮಯದಲ್ಲಿ ಹೆಚ್ಚು ಸುರಕ್ಷತೆಗಾಗಿ ಒತ್ತಡದ ಸೂಟ್‌ಗಳನ್ನು ಧರಿಸಬೇಕಾಗುತ್ತದೆ. ಆದರೆ ಈ ಸೂಟ್‌ ಗಳಿಂದ ಗಗನಯಾತ್ರಿಗಳಿಗೆ ಒನಿಕೊಲಿಸಿಸ್ ನಂತ ಸಾಮಾನ್ಯ ಗಾಯಗಳನ್ನು ಉಂಟುಮಾಡುತ್ತವೆ.

ಹೆಚ್ಚು ಒತ್ತಡವುಂಟು ಮಾಡುವ ಕೈಗವಸು ಹಾಕುವುದರಿಂದ ಗಗನಯಾತ್ರಿಗಳಿಗೆ ಕೈಗಳನ್ನು ಹೆಚ್ಚು ಚಲಾಯಿಸುವುದು ಕಷ್ಟವಾಗುತ್ತದೆ. ಇದರಿಂದ ಎಷ್ಟೋ ಬಾರಿ ತೀವ್ರ ನೋವು, ಸ್ನಾಯುಗಳ ಸೆಳೆತ ಮತ್ತು ಗಂಭೀರವಾದ ಗಾಯಗಳು ಉಂಟಾಗುತ್ತದೆ.

ಸ್ಪೇಸ್‌ಸೂಟ್ ವಿನ್ಯಾಸಗಳು ಉತ್ತಮವಾಗಿದ್ದರೂ ಸಹ ಬಾಹ್ಯಾಕಾಶ ನಡಿಗೆಯ ಸಮಯದಲ್ಲಿ ಒನಿಕೊಲಿಸಿಸ್ ಸೇರಿದಂತೆ ಕೈ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ಇತ್ತೀಚಿನ ಸಂಶೋಧನೆಯ ಪ್ರಕಾರ ಗಗನಯಾತ್ರಿಗಳಲ್ಲಿ 31 ಒನಿಕೊಲಿಸಿಸ್ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಪುರುಷರಿಗಿಂತ ಮಹಿಳೆಯರಲ್ಲಿ ಇದು ಹೆಚ್ಚು ಎಂಬುದು ತಿಳಿದು ಬಂದಿದೆ.

ಹೀಗಾಗಿ ಭವಿಷ್ಯದ ಬಾಹ್ಯಾಕಾಶ ಕಾರ್ಯಾಚರಣೆಗಳಿಗಾಗಿ ಹೊಸ ಸ್ಪೇಸ್‌ಸೂಟ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರ ಮುಖ್ಯ ಉದ್ದೇಶ ಗಗನಯಾತ್ರಿಗಳಲ್ಲಿ ಒನಿಕೊಲಿಸಿಸ್ ಅಪಾಯವನ್ನು ಕಡಿಮೆ ಮಾಡುವುದಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *