Don't break your nose because you don't want human excrement, this company will buy it for crores!

ಛೀ.. ಮಲವೆಂದು ಮೂಗು ಮುರಿಯಬೇಡಿ..! – ಮಾನವನ ತ್ಯಾಜ್ಯಕ್ಕೂ ಬಂದಿದೆ ಭಾರೀ ಡಿಮ್ಯಾಂಡ್..!!

ನ್ಯೂಸ್ ಆ್ಯರೋ : ನಮ್ಮಲ್ಲಿ ಇರುವ ವಸ್ತುಗಳನ್ನು ನಾವು ಕೊಡುವುದರಲ್ಲಿ ಬಹಳ ಹಿಂದೆ. ಹೀಗಾಗಿಯೇ ದಾನಿಗಳ ಬಗ್ಗೆ ಸಮಾಜದಲ್ಲಿ ಗೌರವ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿರುವ ಹಳೆ ವಸ್ತುಗಳನ್ನೂ ಖರೀದಿ ಮಾಡುವವರಿದ್ದಾರೆ. ಸಾಕು ಪ್ರಾಣಿಗಳ ಮಲ ಮೂತ್ರ ಇತ್ತೀಚೆಗೆ ಆನ್ ಲೈನ್ ಮಾರುಕಟ್ಟೆಯಲ್ಲೂ ಡಿಮ್ಯಾಂಡ್ ಹೆಚ್ಚಾಗಿದೆ. ಈ ನಡುವೆ ಈಗ ಮಾನವನ ಮಲಕ್ಕೂ ಬೇಡಿಕೆ ಬಂದಿದೆ.

ಹಾಗಂತ ಛೀ ಎಂದು ಮೂಗು ಮುರಿಯಬೇಡಿ. ಯಾವುದಕ್ಕೂ ಯೋಗ್ಯವಲ್ಲದ ಮಾನವನ ಮೇಲಕ್ಕೆ ಈಗ ಅಮೆರಿಕದಲ್ಲಿ ಭಾರೀ ಬೇಡಿಕೆ ಬಂದಿದೆ.

ಹ್ಯೂಮನ್‌ ಮೈಕ್ರೋಬ್ಸ್‌ ಎನ್ನುವ ಕಂಪೆನಿಯೊಂದು ಮಾನವನ ಮಲವನ್ನು ಖರೀದಿ ಮಾಡುತ್ತಿದ್ದು, ಗುಣಮಟ್ಟದ ಮಲ ದಾನಿಗಳ ಶೋಧ ಕಾರ್ಯ ನಡೆಸುತ್ತಿದೆ.

ಅಮೆರಿಕ ಮತ್ತು ಕೆನಡಾಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕಂಪೆನಿ ತಮ್ಮ ಮಲ ನೀಡುವವರಿಗೆ 500 ಡಾಲರ್‌ ಹಣ ಅಂದರೆ ಸುಮಾರು 41 ಸಾವಿರ ರೂಪಾಯಿ ನೀಡುವುದಾಗಿ ಕಂಪೆನಿ ಹೇಳಿದೆ.

ವಿಶ್ವದ ಯಾವುದೇ ಭಾಗದ ಜನರು ಈ ಕಂಪೆನಿಗೆ ಉತ್ತಮ ಗುಣಮಟ್ಟದ ಮಲವನ್ನು ಕಳುಹಿಸಬಹುದು. ಇದರಿಂದ ಒಬ್ಬರು ವಾರ್ಷಿಕವಾಗಿ ಸುಮಾರು 180,000 ಡಾಲರ್‌ ಅಂದರೆ 1.5 ಕೋಟಿ ರೂಪಾಯಿ ಗಳಿಸಬಹುದು ಎನ್ನುತ್ತದೆ ಕಂಪೆನಿ.

ಇದಕ್ಕೆ ಒಂದು ನಿಯಮ ಅನ್ವಯವಾಗುತ್ತದೆ. ಮುಖ್ಯವಾಗಿ ಮಲ ಆರೋಗ್ಯ ಪೂರ್ಣವಾಗಿರಬೇಕು. ಅದಕ್ಕೆ ಹಲವಾರು ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಎಲ್ಲವನ್ನೂ ಕಂಪೆನಿಯೇ ನಿಭಾಯಿಸುತ್ತದೆ.

ಕಂಪೆನಿ ನಿಗದಿಪಡಿಸಿರುವ ಹಣ ತೃಪ್ತಿಕರವಾಗಿಲ್ಲದಿದ್ದರೆ ದರ ಏರಿಸಲು ಬೇಡಿಕೆ ಇಡುವ ಅವಕಾಶವನ್ನೂ ಕಂಪೆನಿ ಗ್ರಾಹಕರಿಗೆ ನೀಡುತ್ತದೆ. ಡ್ರೈ ಐಸ್‌ ಶಿಪ್ಪಿಂಗ್‌ ಮೂಲಕ ಮಲವನ್ನು ಕಂಪೆನಿಗೆ ಕಳುಹಿಸಬೇಕು. ಮಲವನ್ನು ದಾನವಾಗಿ ನೀಡುವವರ ಮಾಹಿತಿಯನ್ನು ಗೌಪ್ಯವಾಗಿ ಇಡುವುದಾಗಿ ಕಂಪೆನಿ ಭರವಸೆ ನೀಡುತ್ತದೆ.

ಇಷ್ಟು ದುಬಾರಿ ಹಣ ಕೊಟ್ಟು ಇವರು ಮಾನವನ ಮಲವನ್ನು ಯಾಕೆ ಖರೀದಿ ಮಾಡುತ್ತಾರೆ ಎನ್ನುವ ಸಂದೇಹ ಕಾಡುವುದು ಸಹಜ. ಮಾನವ ಸೇವಿಸುವ ಆಹಾರದ ಗುಣಮಟ್ಟವನ್ನು ಅಳೆಯಲು ಜನರ ಮಲವನ್ನೇ ಸಂಗ್ರಹಿಸಿ ಸಂಶೋಧನೆ ನಡೆಸುವುದು ಈ ಸಂಸ್ಥೆಯ ಉದ್ದೇಶವಾಗಿದೆ ಹಾಗೂ ಉತ್ತಮ ಆಹಾರ, ಜೀವನ ಶೈಲಿ ಹೊಂದಿರುವ ಜನರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ಗುಣಮಟ್ಟದ ಮಲ ದಾನಿಗಳನ್ನು ಹುಡುಕಲಾಗುತ್ತಿದೆ. ಇದು ಇತ್ತೀಚಿನ ದಿನಗಳಲ್ಲಿ ಅಗತ್ಯವಾಗುತ್ತಿದೆ ಎಂದು ಸಂಸ್ಥೆಯು ತಿಳಿಸಿದೆ.