ಚಳಿಗಾಲದಲ್ಲೂ ಮಳೆಯ ಅಬ್ಬರದಿಂದ ಹೆಚ್ಚುತ್ತಿದೆ ಆರೋಗ್ಯ ಸಮಸ್ಯೆಗಳು – ದೇಹದ ರಕ್ಷಣೆಗೆ ಹೀಗಿರಲಿ ಆಹಾರ ಪದ್ಧತಿ…

ಚಳಿಗಾಲದಲ್ಲೂ ಮಳೆಯ ಅಬ್ಬರದಿಂದ ಹೆಚ್ಚುತ್ತಿದೆ ಆರೋಗ್ಯ ಸಮಸ್ಯೆಗಳು – ದೇಹದ ರಕ್ಷಣೆಗೆ ಹೀಗಿರಲಿ ಆಹಾರ ಪದ್ಧತಿ…

ನ್ಯೂಸ್ ಆ್ಯರೋ‌ : ಚುಮುಚುಮು ಚಳಿಗಾಲ ಬಂದೇ ಬಿಟ್ಟಿದೆ. ಸೂರ್ಯ ನೆತ್ತಿ ಮೇಲೆ ಬಂದ್ರೂ ಹಾಸಿಗೆಯಿಂದ ಏಳೋದೇ ಬೇಡ ಅನಿಸೋ ಈ ಕಾಲದಲ್ಲಿ, ಅದರಲ್ಲೂ ‌ಮಳೆ ಹಾವಳಿಯಿಂದಾಗಿ ಒಂದಷ್ಟು ಆರೋಗ್ಯ ಸಮಸ್ಯೆಗಳು ಕಾಡೋದು ಮಾಮೂಲು. ಹೀಗಾಗಿ ಚಳಿಗಾಲದಲ್ಲಿ ಶೀತ, ನೆಗಡಿ, ತಲೆನೋವಿನಂತಹ ಅನೇಕ ಆರೋಗ್ಯ ಸಮಸ್ಯೆಗಳು ಕಾಣಬಹುದು..

ಆದ್ರೆ ಇನ್ನೂ ಕೆಲವರಿಗೆ ಸಣ್ಣ ಆರೋಗ್ಯ ಸಮಸ್ಯೆ ಮಾತ್ರವಲ್ಲದೆ ದೊಡ್ಡ ಪ್ರಮಾಣದಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದರಿಂದ ಚಳಿಗಾಲದಲ್ಲಿ ಹೆಚ್ಚು ಮುಂಜಾಗೃತೆಯಿಂದ ಇರುವುದು ಸೂಕ್ತ.. ಸದ್ಯ ರಾಜ್ಯದಲ್ಲಿ ಕಳೆದ ಕೆಲವು ದಿವಸಗಳಿಂದ ಚಳಿಯ ಪ್ರಮಾಣದ ಹೆಚ್ಚಾಗಿದ್ದು, ಇದು ಮುಂದಿನ ದಿವಸಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಗುವುದರಿಂದ ಬೆಳಗ್ಗೆ ಮತ್ತು ಸಾಯಂಕಾಲ ಚಳಿ ಹೆಚ್ಚಾಗಿರುವ ಸಮಯದಲ್ಲಿ ವ್ಯಾಯಾಮ ಮಾಡುವುದು, ಸುತ್ತಾಡುವುದು, ಕೆಲಸ ಮಾಡುವುದು ಬೇಡ.

ಬೆಚ್ಚಗಿನ ಉಡುಪುಗಳನ್ನು ಧರಿಸಬೇಕು. ಎಣ್ಣೆಯಲ್ಲಿ ಬೇಯಿಸಿದ ಆಹಾರ ಸೇವನೆ ಬೇಡ. ಚಳಿಯಲ್ಲಿ ಹೆಚ್ಚಿನ ಚಲನೆ ಹೃದಯಘಾತಕ್ಕೆ ಪೂರಕವಾಗುವುದರಿಂದ ಚಳಿಗಾಲದ ಬಗ್ಗೆ ಪ್ರತಿಯೊಬ್ಬರು ಮುಂಜಾಗ್ರತೆಯಿಂದ ಇರಬೇಕು. ಹೀಗಾಗಿ ಚಳಿಗಾಲದಲ್ಲಿ ಕೆಲವೊಂದಷ್ಟು ಆಹಾರ ಸೇವನೆ ಮಾಡುವುದರಿಂದ ನಾವು ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಬಹುದು. ಚಳಿಗಾಲದಲ್ಲಿ ಈ ಆಹಾರಗಳನ್ನ ಸೇವನೆ ಮಾಡುವುದು ಸೂಕ್ತ

ಚಳಿಗಾಲದಲ್ಲಿ ಹೊರಗಿನ ತಾಪಮಾನ ಕಡಿಮೆಯಾದರೆ, ಮನೆಯೊಳಗೂ ಕೂಡ ಅದೇ ರೀತಿ ವಾತಾವರಣ ನಿರ್ಮಾಣವಾಗುತ್ತದೆ. ಈ ಸಂದರ್ಭದಲ್ಲಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸೋಂಕುಕಾರಕ ಕ್ರಿಮಿಗಳು ಹರಡುವ ಸಾಧ್ಯತೆ ಇರುತ್ತದೆ.ಹೀಗಾಗಿ ನಾವು ಚಳಿಗಾಲದಲ್ಲಿ ನಮ್ಮ ಆಹಾರ ಸೇವನೆಯ ಬಗ್ಗೆ ಸಾಕಷ್ಟು ಜಾಗೃತಿ ವಹಿಸಬೇಕು.. ನಾವು ಸೇವಿಸುವ ಆಹಾರದಲ್ಲಿ ಪೌಷ್ಠಿಕಾಂಶಗಳು, ವಿಟಮಿನ್ ಗಳು ಹೇರಳವಾಗಿ ಇರುವಂತೆ ನೋಡಿಕೊಳ್ಳಬೇಕು. ಹೀಗಾಗಿ ಚಳಿಗಾಲದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇದ್ರೆ ಈ ಆಹಾರಗಳನ್ನ ಸೇವನೆ ಮಾಡುವುದು ಸೂಕ್ತ.

1.ವಿಟಮಿನ್ ಡಿ ಇರುವ ಆಹಾರ:

ನಮ್ಮೆಲ್ಲರಿಗೂ ತಿಳಿದಿರುವ ಹಾಗೆ ವಿಟಮಿನ್ ಡಿ ಪ್ರತಿಯೊಂದು ಜೀವಿಗೂ ಅವಶ್ಯಕವಾಗಿದೆ.ಇದು ದೇಹದಲ್ಲಿ ಕ್ಯಾಲ್ಸಿಯಂ ಮತ್ತು ಫೋಸ್ಪಟ್ ಅಂಶಗಳನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ. ಈ ಅಂಶಗಳು ಮೂಳೆಗಳಿಗೆ, ಹಲ್ಲುಗಳಿಗೆ ಮತ್ತು ಸ್ನಾಯುಗಳ ಆರೋಗ್ಯಕ್ಕೆ ಅತ್ಯಂತ ಅವಶ್ಯವಾಗಿದೆ.

ಇದು ಹೆಚ್ಚು ದೊರೆಯುವುದು ಸೂರ್ಯನ ಬೆಳಕಿನಿಂದ.ಚಳಿಗಾಲದಲ್ಲಿ ಸೂರ್ಯನ ಬೆಳಕು ಅಷ್ಟಾಗಿ ಕಾಣದೆ ಇರುವುದರಿಂದ ವಿಟಮಿನ್ ಡಿ ಆಹಾರ ಸೇವನೆ ಮಾಡುವುದು ಸೂಕ್ತ. ಮೀನು ಹಾಗೂ ಸಮುದ್ರ ಆಹಾರಗಳಲ್ಲಿ ವಿಟಮಿನ್ ಡಿ ಹೆಚ್ಚಿನ ಪ್ರಮಾಣದಲ್ಲಿ ಸಿಗುವುದರಿಂದ ಚಳಿಗಾಲದಲ್ಲಿ ಇದನ್ನು ಸೇವನೆ ಮಾಡಬೇಕು

2)ವಿಟಮಿನ್ ಸಿ:

ವಿಟಮಿನ್ ಸಿ ಇರುವ ಆಹಾರವನ್ನ ಚಳಿಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಶೀತ ಹಾಗೂ ವೈರಲ್ ಫೀವರ್ ಗಳಿಂದ ಮಕ್ತಿ ಪಡೆಯಬಹುದು. ಪಾಲಕ್ ಸೊಪ್ಪು, ಸಿಟ್ರಿಕ್ ಅಂಶವಿರುವ ಕಿತ್ತಳೆ, ನೆಲ್ಲಿಕಾಯಿ, ಪಾಲಕ್ ಸೊಪ್ಪು ಸೇರಿ ಹಲವು ಆಹಾರಗಳು ಚಳಿಗಾಲದಲ್ಲಿ ನಮ್ಮನ್ನ ಆರೋಗ್ಯದಿಂದ ಇರಲು ಸಹಾಯ ಮಾಡುತ್ತವೆ.

3)ಕಬ್ಬಿಣಾಂಶ ಇರುವ ಆಹಾರ:

ಕಬ್ಬಿಣದ ಅಂಶದ ಕೊರತೆ ಎದುರಾದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಇದನ್ನು ಆರಂಭದಲ್ಲೇ ಸರಿಪಡಿಸಿಕೊಳ್ಳುವುದು ಒಳ್ಳೆಯದು. ತಲೆ ಸುತ್ತುವುದು, ಆಯಾಸ, ರಕ್ತದ ಕೊರತೆ ಇವೆಲ್ಲವೂ ಕಭ್ಭಿಣಾಂಶದ ಕೊರತೆಯಿಂದ ಉಂಟಾಗುತ್ತವೆ. ಅದ್ರಲ್ಲೂ ಚಳಿಗಾಲದಲ್ಲಿ ಹೃದಯದ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕಾಗಿರುವುದರಿಂದ ಪಾಲಕ್, ಕೇಲ್ ಮತ್ತು ಸ್ವಿಸ್ ಚಾರ್ಡ್ ನಂತಹ ಸೊಪ್ಪು, ಸೀ ಪುಡ್, ಕೆಂಪು ಮಾಂಸ ಸೇವನೆ ಮಾಡುವುದು ಸೂಕ್ತ

4)ಸತು:

ದ್ವಿದಳ ಧಾನ್ಯ, ಕಡಲೆಕಾಯಿ, ಮೊಟ್ಟೆ, ಕಲ್ಲಂಗಡಿ ಕಡಲೆಯಂತಹ ಸತುವಿರುವ ಆಹಾರಗಳನ್ನ ಚಳಿಗಾಲದಲ್ಲಿ ಸೇವನೆ ಮಾಡಿದ್ರೆ, ನಮ್ಮ ದೇಹಕ್ಕೆ ರೋಗ ನಿರೋಧಕ್ಕೆ ಶಕ್ತಿಗಳು ಲಭಿಸಲಿವೆ.

5) ವಿಟಮಿನ್ B12:

ಸಾಮಾನ್ಯವಾಗಿ ಕಂಡುಬರುವ ವಿಟಮಿನ್ ಬಿಎಕ್ಸ್‌ಎನ್‌ಯುಎಮ್‌ಎಕ್ಸ್‌ನ ಕೊರತೆ ನಮ್ಮಲ್ಲಿ ಹಲವರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. B12 ಕೊರತೆಯು ಬೆಳಿಗ್ಗೆ ಆಯಾಸಗೊಳ್ಳುವುದು, ನರಗಳ ಕಾರ್ಯಚಟುವಟಿಕೆಗಳನ್ನು ಅಡ್ಡಿಪಡಿಸುವುದು, ಅರೆನಿದ್ರಾವಸ್ಥೆ ಮತ್ತು ಇಷ್ಟವಿಲ್ಲದಿರುವಿಕೆ ಮುಂತಾದ ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಮಾಂಸ, ಕೋಳಿ, ಮೀನು, ಮೊಟ್ಟೆ, ಹಾಲು, ಮೊಸರು, ಚೀಸ್ ನಂತಹ ಬಿ 12 ವಿಟಮಿನ್ ಇರುವ ಆಹಾರಗಳು ನಮ್ಮನ್ನ ಚಳಿಗಾದಲ್ಲಿ ಸುರಕ್ಷಿತವಾಗಿ ಇಡುತ್ತವೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *