ರೆಪೋ ದರ ಏರಿಕೆ ಬೆನ್ನಲ್ಲೆ ಟ್ರೇಡಿಂಗ್ ಸಮಯ ವಿಸ್ತರಿಸಿದ ಆರ್‌ಬಿಐ: ಇಲ್ಲಿದೆ ಸಂಪೂರ್ಣ ಮಾಹಿತಿ

ರೆಪೋ ದರ ಏರಿಕೆ ಬೆನ್ನಲ್ಲೆ ಟ್ರೇಡಿಂಗ್ ಸಮಯ ವಿಸ್ತರಿಸಿದ ಆರ್‌ಬಿಐ: ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ಆ್ಯರೋ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ರೆಪೋ ದರವನ್ನು ಶೇ.35ರಷ್ಟು ಹೆಚ್ಚಿಸಿದೆ. ಈ ಮೂಲಕ ಪ್ರಸ್ತುತ ರೆಪೋ ದರ ಶೇಕಡ 6.25ಕ್ಕೆ ತಲುಪಿದೆ. ಆರ್‌ಬಿಐ ರೆಪೋ ದರ ಪರಿಷ್ಕರಣೆ ಘೋಷಣೆ ಮಾಡುವ ಸಂದರ್ಭದಲ್ಲೇ ಮಾರುಕಟ್ಟೆಯ ಟ್ರೇಡಿಂಗ್ ಅವಧಿಯನ್ನು ವಿಸ್ತರಿಸಿದೆ.

ರೆಪೋ ದರ ಎಂದರೇನು:

ರೆಪೋ ದರ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ.

ಈ ಹಿಂದೆ ಏಪ್ರಿಲ್ 7, 2020ರಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ದೇಶದಲ್ಲಿ ಅಧಿಕವಾದ ಸಂದರ್ಭದಲ್ಲಿ ಮಾರುಕಟ್ಟೆ ಅವಧಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬದಲಾವಣೆ ಮಾಡಿತ್ತು. ಆದರೆ ಬಳಿಕ ನವೆಂಬರ್ 9, 2020ರಲ್ಲಿ ಕೋವಿಡ್ ನಿರ್ಬಂಧಗಳನ್ನು ಸರ್ಕಾರ ಹಿಂಪಡೆದ ಬಳಿಕ ಮಾರುಕಟ್ಟೆ ಅವಧಿಯನ್ನು ಈ ಹಿಂದಿನಂತೆ ನಿಗದಿಪಡಿಸಲು ಆರಂಭಿಸಲಾಯಿತು.

ಇಲ್ಲಿದೆ ರೆಪೋ ಏರಿಕೆ, ಮಾರುಕಟ್ಟೆ ಸಮಯ, ಸೆನ್ಸೆಕ್ಸ್-ನಿಫ್ಟಿ ಬಗ್ಗೆ ಮಾಹಿತಿ

ಏಪ್ರಿಲ್ 18, 2022ರಲ್ಲಿ ಮಾರುಕಟ್ಟೆ ಅವಧಿಯನ್ನು ಮತ್ತೆ ಈ ಹಿಂದಿನಂತೆ ಪರಿವರ್ತನೆ ಮಾಡಲಾಯಿತು. ಕೋವಿಡ್ ಪೂರ್ವದ ಅವಧಿಯಲ್ಲೇ ಮಾರುಕಟ್ಟೆ ಆರಂಭಿಕ ವಹಿವಾಟು ಶುರುವಾಗಿತ್ತು. ಈಗ ಆರ್‌ಬಿಐ ಮತ್ತೆ ವಹಿವಾಟು ಅವಧಿಯಲ್ಲಿ ಬದಲಾವಣೆಯನ್ನು ತಂದಿದೆ. ಡಿಸೆಂಬರ್ 12, 2022ರಿಂದ ವಹಿವಾಟು ಅವಧಿ ವಿಸ್ತರಣೆಯಾಗಲಿದೆ. ನೂತನ ವಹಿವಾಟು ಅವಧಿ ಸಂಪೂರ್ಣ ಪಟ್ಟಿ ಇಲ್ಲಿದೆ ಮುಂದೆ ಓದಿ…

ಮಾರುಕಟ್ಟೆ, ಈ ಹಿಂದಿನ ಅವಧಿ, ನೂತನ ಅವಧಿ

  • ಕಾಲ್/ನೋಟಿಸ್/ಟರ್ಮ್ ಮನಿ , ಈ ಹಿಂದಿನ ಅವಧಿ ಬೆಳಿಗ್ಗೆ 9:00 ರಿಂದ ಸಂಜೆ 3:30, ವಿಸ್ತರಿತ ಅವಧಿ ಬೆಳಿಗ್ಗೆ 9:00ರಿಂದ ಸಂಜೆ 5:00
  • ಮಾರುಕಟ್ಟೆ ರೆಪೋ, ಈ ಹಿಂದಿನ ಅವಧಿ ಬೆಳಿಗ್ಗೆ 9:00 ರಿಂದ ಸಂಜೆ 2:30, ನೂತನ ಅವಧಿ ಬೆಳಿಗ್ಗೆ 9:00ರಿಂದ ಸಂಜೆ 2:30
  • ಟ್ರೀ-ಪಾರ್ಟಿ ರೆಪೋ, ಈ ಹಿಂದಿನ ಅವಧಿ ಬೆಳಿಗ್ಗೆ 9:00 ರಿಂದ ಸಂಜೆ 3:00, ನೂತನ ಅವಧಿ ಬೆಳಿಗ್ಗೆ 9:00ರಿಂದ ಸಂಜೆ 3:00
  • ವಾಣಿಜ್ಯ ದಾಖಲೆ, ಡೆಪಾಸಿಟ್‌ ಪ್ರಮಾಣಪತ್ರ, ಈ ಹಿಂದಿನ ಅವಧಿ ಬೆಳಿಗ್ಗೆ 9:00 ರಿಂದ ಸಂಜೆ 3:30, ನೂತನ ಅವಧಿ ಬೆಳಿಗ್ಗೆ 9:00ರಿಂದ ಸಂಜೆ 5:00
  • ಕಾರ್ಪೋರೇಟ್ ಬಾಂಡ್ಸ್ ರೆಪೋ, ಈ ಹಿಂದಿನ ಅವಧಿ ಬೆಳಿಗ್ಗೆ 9:00 ರಿಂದ ಸಂಜೆ 3:30, ನೂತನ ಅವಧಿ ಬೆಳಿಗ್ಗೆ 9:00ರಿಂದ ಸಂಜೆ 5:00
  • ಸರ್ಕಾರಿ ಸೆಕ್ಯೂರಿಟಿಗಳು , ಈ ಹಿಂದಿನ ಅವಧಿ ಬೆಳಿಗ್ಗೆ 9:00 ರಿಂದ ಸಂಜೆ 3:30, ನೂತನ ಅವಧಿ ಬೆಳಿಗ್ಗೆ 9:00ರಿಂದ ಸಂಜೆ 3:30
  • ವಿದೇಶಿ ಕರೆನ್ಸಿ, ಈ ಹಿಂದಿನ ಅವಧಿ ಬೆಳಿಗ್ಗೆ 9:00 ರಿಂದ ಸಂಜೆ 3:30, ನೂತನ ಅವಧಿ ಬೆಳಿಗ್ಗೆ 9:00ರಿಂದ ಸಂಜೆ 3:30
  • ರೂಪಾಯಿ ಬಡ್ಡಿದರ, ಈ ಹಿಂದಿನ ಅವಧಿ ಬೆಳಿಗ್ಗೆ 9:00 ರಿಂದ ಸಂಜೆ 3:30, ನೂತನ ಅವಧಿ ಬೆಳಿಗ್ಗೆ 9:00ರಿಂದ ಸಂಜೆ 5:00

ಇಂದಿನ ಷೇರುಪೇಟೆ ವಹಿವಾಟು

ಆರಂಭಿಕ ವಹಿವಾಟಿನಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 44.54 ಅಂಕ ಅಥವಾ ಶೇಕಡ 0.07ರಷ್ಟು ಇಳಿಕೆಯಾಗಿ 62366.14ಕ್ಕೆ ತಲುಪಿದೆ. ಇನ್ನು ನಿಫ್ಟಿ 12.70 ಅಂಕ ಅಥವಾ ಶೇಕಡ 0.07ರಷ್ಟು ಕುಸಿದು 18547.80ಕ್ಕೆ ವಹಿವಾಟು ಆರಂಭ ಮಾಡಿದೆ. ಇನ್ನು 1390 ಷೇರುಗಳು ಏರಿಕೆಯಾಗಿದ್ದರೆ, 631 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 123 ಷೇರುಗಳು ಯಥಾಸ್ಥಿತಿತ್ತು.

ರೆಪೊ ದರ ತಗ್ಗಿಸಿದರೆ ಬ್ಯಾಂಕುಗಳು ಆರ್‌ಬಿಐನಿಂದ ಕಡಿಮೆ ಬಡ್ಡಿದರಕ್ಕೆ ಸಾಲ ಪಡೆಯಬಹುದಾಗಿದೆ. ದೇಶದ ಒಟ್ಟಾರೆ ಬ್ಯಾಂಕಿಂಗ್ ಕ್ಷೇತ್ರದ ಹೃದಯದ ಬಡಿತವು ರೆಪೊ ದರದ ಜೊತೆ ಮಿಡಿಯುತ್ತದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *