ಯೂಟ್ಯೂಬ್ ಬಳಸುವಾಗ ಸಿಂಪಲ್ ಟಿಪ್ಸ್‌ ಉಪಯೋಗಿಸಿ ಭರ್ಜರಿ ಡೇಟಾ ಉಳಿಸಿ – ಯೂಟ್ಯೂಬ್‌ನಲ್ಲಿದೆ ಹಲವು ವಿಶೇಷ ಫೀಚರ್ಸ್‌ಗಳು, ಇಲ್ಲಿವೆ ಮಾಹಿತಿ…

ಯೂಟ್ಯೂಬ್ ಬಳಸುವಾಗ ಸಿಂಪಲ್ ಟಿಪ್ಸ್‌ ಉಪಯೋಗಿಸಿ ಭರ್ಜರಿ ಡೇಟಾ ಉಳಿಸಿ – ಯೂಟ್ಯೂಬ್‌ನಲ್ಲಿದೆ ಹಲವು ವಿಶೇಷ ಫೀಚರ್ಸ್‌ಗಳು, ಇಲ್ಲಿವೆ ಮಾಹಿತಿ…

ನ್ಯೂಸ್ ಆ್ಯರೋ : ಮನರಂಜನೆಗಾಗಿ ಇಂದು ಪ್ರತಿಯೊಬ್ಬರು ಯೂಟ್ಯೂಬ್‌ನಲ್ಲಿ ಒಂದಲ್ಲ ಒಂದು ವಿಷಯವನ್ನು ಹುಡುಕಾಡುತ್ತಲೇ ಇರುತ್ತಾರೆ. ಸ್ಮಾರ್ಟ್‌ಫೋನ್‌ನಲ್ಲಿ ಯೂಟ್ಯೂಬ್‌ ಬಹು ಬೇಡಿಕೆಯನ್ನು ಪಡೆದುಕೊಂಡಿದೆ. ಬಳಕೆದಾರರಿಗೆ ಅನುಕೂಲವಾಗಲೆಂದು ಯೂಟ್ಯೂನ್‌ನಲ್ಲಿ ಕೆಲವು ಅತ್ಯುತ್ತಮ ಫೀಚರ್ಸ್‌ಗಳ ಆಯ್ಕೆಗಳಿವೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಅವರಿಗೆ ತಿಳಿದಿರುವುದಿಲ್ಲ.

ಕೆಲವು ಅನುಕೂಲಕರ ಫೀಚರ್ಸ್‌ಗಳನ್ನು ಯೂಟ್ಯೂಬ್‌ ತಾಣ ಪಡೆದುಕೊಂಡಿದೆ. ಅವುಗಳಲ್ಲಿ ಡಾರ್ಕ್‌ಮೋಡ್ ಸೌಲಭ್ಯ, ವಿಡಿಯೋ ವೀಕ್ಷಣೆಗೆ ಹಲವು ಕೆಟಗೇರಿ ಆಯ್ಕೆ, ಹಿಸ್ಟರ್ ಕ್ಲಿಯರ್‌ ಮಾಡುವ ಆಯ್ಕೆ ಹೀಗೆ ಬಳಕೆದಾರಿಗೆ ಹಲವು ಫೀಚರ್ಸ್‌ಗಳನ್ನು ನೀಡಿದ್ದು, ಜೊತೆಗೆ ಸುರಕ್ಷತೆಯನ್ನು ಕಾಯ್ದುಕೊಂಡಿದೆ. ಕೆಲವು ಫೀಚರ್ಸ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

ಸುಲಭವಾಗಿ ಕ್ಲಿಯರ್ ಮಾಡಿ ಯೂಟ್ಯೂಬ್‌ ಸರ್ಚ್ ಹಿಸ್ಟರಿ

ಯೂಟ್ಯೂಬ್‌ನಲ್ಲಿ ನೀವೂ ಏನೇ ಹುಡುಕಿದರೂ ಮತ್ತೊಮ್ಮೆ ಯಾರಾದರೂ ನಿಮ್ಮ ಮೊಬೈಲ್‌ನಲ್ಲಿ ನೀವು ಹುಡುಕಿದ ವಿಷಯ ಕಾಣದಂತೆ ಮಾಡಲು ಹಿಸ್ಟರಿ ಕ್ಲಿಯರ್ ಮಾಡುತ್ತಿರಿ. ಅದಕ್ಕಾಗಿ ಇಲ್ಲಿದೆ ಸರಳ ವಿಧಾನ– ಪ್ರೊಫೈಲ್ ಚಿತ್ರ > ಸೆಟ್ಟಿಂಗ್‌ಗಳು > ಹಿಸ್ಟರಿ ಮತ್ತು ಗೌಪ್ಯತೆ > ಮತ್ತು ವಾಚ್ ಹಿಸ್ಟರಿ ಕ್ಲಿಯರ್ ನ್ಯಾವಿಗೇಟ್ ಮಾಡುವ ಮೂಲಕ ಹುಡುಕಾಟ ಹಿಸ್ಟರಿ ಡಿಲೀಟ್ ಮಾಡಬಹುದಾಗಿದೆ.

ಡಬಲ್-ಟ್ಯಾಪ್ ಟೈಮರ್

ಯೂಟ್ಯೂಬ್‌ನಲ್ಲಿ ವಿಡಿಯೊ ವೀಕ್ಷಿಸುವಾಗ ವಿಡಿಯೊ ಫಾರ್ವರ್ಡ್ ಮಾಡಲು/ ಮುಂದಕ್ಕೆ ಹೋಗಲು ಈ ಆಯ್ಕೆ ಬಳಕೆ ಮಾಡಬಹುದಾಗಿದೆ. ಬಳಕೆದಾರರು 10 ಸೆಕೆಂಡುಗಳವರೆಗೆ ಫಾರ್ವರ್ಡ್‌ ಅಥವಾ ಬ್ಯಾಕ್‌ವರ್ಡ್ ಮಾಡಬಹುದಾಗಿದೆ. ಎರಡು ಬಾರಿ ಟ್ಯಾಪ್ ಮಾಡಬೇಕಿರುತ್ತದೆ. ಈ ಆಯ್ಕೆಯನ್ನು ಬೇಕಿದ್ದರೆ 5, 15, 20, 30 ಅಥವಾ 60 ಸೆಕೆಂಡುಗಳಿಗೆ ಬದಲಾಯಿಸಬಹುದು.

ವಿಡಿಯೊ ಲಿಂಕ್‌ನ್ನು ಶೇರ್ ಮಾಡಬಹುದು..

ಯೂಟ್ಯೂಬ್‌ ನಲ್ಲಿನ ವಿಡಿಯೊ ಲಿಂಕ್‌ಗಳನ್ನು ಬಳಕೆದಾರರು ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಸ್ನೇಹಿತರಿಗೆ ಶೇರ್ ಮಾಡುವ ಆಯ್ಕೆ ಇದೆ. ಹಾಗೆಯೇ ವಿಡಿಯೊದಲ್ಲಿ ನಿರ್ದಿಷ್ಟ ಭಾಗವನ್ನು ವೀಕ್ಷಿಸಲು ಅನುವು ಮಾಡಲು URL ನಲ್ಲಿ ಸೆಟ್ ಮಾಡಬಹುದಾದ ಆಯ್ಕೆ ಇದೆ. ಉದಾಹರಣೆ: URL ಕೊನೆಯಲ್ಲಿ t = 1m45s (ವಿಡಿಯೊದ ನಿರ್ದಿಷ್ಟ ಭಾಗದ ಸಮಯ/ ಸೆಕೆಂಡ) ನಮೂದಿಸುವುದು.

ಹುಡುಕಾಡಿದ ಪದವನ್ನು ಗೌಪ್ಯವಾಗಿ ಇಡಬಹುದು:

ನೀವು ಯೂಟ್ಯೂಬ್‌ನಲ್ಲಿ ಹುಡುಕಾಡಿದ ಪದಗಳು ಮತ್ತೆ ಕಾಣಿಸದಂತೆ ಮಾಡಲು ಗೌಪ್ಯ ಇಡಬಹುದು. ಪ್ರೊಫೈಲ್ ಫೋಟೊ ಕ್ಲಿಕ್ ಮಾಡಿ ಅಲ್ಲಿ ಕಾಣಿಸುವ ಆಯ್ಕೆಗಳಲ್ಲಿ incognito mode ಆಯ್ಕೆ ಮಾಡಿಕೊಳ್ಳಿರಿ. ಇದು ಗೌಪ್ಯತೆಯನ್ನು ಕಾಪಾಡುತ್ತದೆ.

ಸುಲಭವಾಗಿ ಡೇಟಾವನ್ನು ಉಳಿತಾಯ ಮಾಡಬಹುದು

ವಿಡಿಯೊಗಳನ್ನು ನೋಡುತ್ತಿರುವಾಗ ಬಹುಬೇಗನೇ ಡೇಟಾ ಖಾಲಿಯಾಗುತ್ತಿರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಾಗಿದ್ದರೆ ಮೊಬೈಲ್‌ನಲ್ಲಿ ಯೂಟ್ಯೂಬ್ ವಿಡಿಯೊ ವೀಕ್ಷಿಸುವಾಗ ಬಳಕೆ ಮಿತಿಗೊಳಿಸುವ ಆಯ್ಕೆಯನ್ನು ಬಳಸಬಹುದಾಗಿದೆ. ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡುವುದು > ಸೆಟ್ಟಿಂಗ್‌ಗಳು> ಸಾಮಾನ್ಯ > ಮೊಬೈಲ್ ಡೇಟಾ ಬಳಕೆಯನ್ನು ಮಿತಿಗೊಳಿಸಿ. ಇದು Wi-Fi ಗೆ ಸಂಪರ್ಕಗೊಂಡಾಗ ಮಾತ್ರ HD ವೀಡಿಯೊವನ್ನು ಸ್ಟ್ರೀಮ್ ಮಾಡುತ್ತದೆ. ಇದರಿಂದ ನಿಮ್ಮ ಡೇಟಾ ಉಳಿತಾಯವಾಗುತ್ತದೆ.

Related post

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ ಪತ್ರ

ಹಾಸನ ಪೆನ್‌ಡ್ರೈವ್ ಪ್ರಕರಣ; 16 ಬೇಡಿಕೆಗಳನ್ನು ಮುಂದಿಟ್ಟು ಸಿಎಂಗೆ ಬಂತು ಬಹಿರಂಗ…

ನ್ಯೂಸ್ ಆರೋ: ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಜ್ಞಾವಂತ ನಾಗರೀಕರು ಎಂಬ ಹೆಸರಿನಲ್ಲಿ…
ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ಯಶ್ ಮೂವಿಯಲ್ಲಿ ಶೂರ್ಪನಖಿಯಾಗಿ ಮಿಂಚಲಿದ್ದಾರೆ ರಾಕುಲ್!

ನ್ಯೂಸ್ ಆರೋ: ಕೆಜಿಎಫ್ ನಂತರ ಹಿಟ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಯಶ್ ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ಶೂರ್ಪನಖಿಯಾಗಿ ರಕುಲ್ ಕಾಣಿಸಿಕೊಳ್ಳಲಿದ್ದಾರೆ. ಹೌದು,ಶೂರ್ಪನಕಿಯಾಗಿ…
ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌ ದರ ಇಳಿಕೆ ಮಾಡಿದ ಪಾಕ್‌ ಸರ್ಕಾರ

ಪಾಕ್ ಆಕ್ರಮಿತ ಕಾಶ್ಮೀರ ಜನರಿಗೆ ಬಂಪರ್ ಪ್ಯಾಕೇಜ್; ಆಹಾರ ಉತ್ಪನ್ನಗಳ- ವಿದ್ಯುತ್‌…

ನ್ಯೂಸ್ ಆರೋ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ಭಾರತಕ್ಕೆ ಸೇರುತ್ತೇವೆ ಎಂದು ನಡೆಸುತ್ತಿದ್ದ ಪ್ರತಿಭಟನೆಗೆ ಪಾಕಿಸ್ತಾನದ ಸರ್ಕಾರ ಮಣಿದಿದೆ. ಹೌದು, ಜನರ ಪ್ರತಿಭಟನೆ ಬೆನ್ನಲ್ಲೇ ಪಾಕ್‌ ಆಕ್ರಮಿತ ಕಾಶ್ಮೀರದ…

Leave a Reply

Your email address will not be published. Required fields are marked *