ಗಮನಿಸಿ, ನಾಳೆಯಿಂದ ಈ ಎಲ್ಲಾ ವ್ಯವಸ್ಥೆಗಳಲ್ಲಿ ಬದಲಾವಣೆ – ಯಾವುದೆಲ್ಲ‌ ದುಬಾರಿ? ಏನೆಲ್ಲ ನಿಯಮ ಬದಲಾಗುತ್ತೆ ನೋಡಿ..

ಗಮನಿಸಿ, ನಾಳೆಯಿಂದ ಈ ಎಲ್ಲಾ ವ್ಯವಸ್ಥೆಗಳಲ್ಲಿ ಬದಲಾವಣೆ – ಯಾವುದೆಲ್ಲ‌ ದುಬಾರಿ? ಏನೆಲ್ಲ ನಿಯಮ ಬದಲಾಗುತ್ತೆ ನೋಡಿ..

ನ್ಯೂಸ್ ಆ್ಯರೋ‌ : ನಾಳೆ ಜೂ. 1. ದೇಶಾದ್ಯಂತ ಕೆಲವು ವ್ಯವಸ್ಥೆ, ನಿಯಮಗಳಲ್ಲಿ ಬದಲಾವಣೆ ಕಂಡು ಬರುತ್ತದೆ. ಅವುಗಳು ಯಾವೆಲ್ಲ? ಬದಲಾವಣೆಗಳೇನು? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಳ

ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಕಡಿತಗೊಳಿಸಿ ಮೇ 21ರಂದೇ ಕೇಂದ್ರ ಭಾರೀ ಕೈಗಾರಿಕಾ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಜೂ. 1ರಿಂದ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು ದುಬಾರಿಯಾಗಲಿವೆ. ಇವುಗಳ ಬೆಲೆ 25 ಸಾವಿರ ರೂ.ಗಳಿಂದ 30 ಸಾವಿರ ರೂ.ವರೆಗೆ ಹೆಚ್ಚಳವಾಗಲಿದೆ.


100 ದಿನ, 100 ಪಾವತಿ

ವಾರಸುದಾರರಿಲ್ಲದ ಠೇವಣಿ ಮೊತ್ತವನ್ನು ಸೂಕ್ತ ವಾರಸುದಾರರಿಗೆ ಪಾವತಿಸುವ ನಿಟ್ಟಿನಲ್ಲಿ ಪ್ರತೀ ಜಿಲ್ಲೆಯ ಪ್ರತಿ ಬ್ಯಾಂಕ್‌ಗಳು ಜೂ. 1ರಿಂದಲೇ ‘100 ದಿನಗಳು, 100 ಪಾವತಿ’ ಎಂಬ ಅಭಿಯಾನ ಆರಂಭಿಸಲಿವೆ. ಬ್ಯಾಂಕ್‌ನಲ್ಲಿ ವಿತ್‌ಡ್ರಾ ಮಾಡದೇ ಉಳಿದಿರುವ ಠೇವಣಿಯ ಮೊತ್ತವನ್ನು ಸೂಕ್ತ ವಾರಸುದಾರರಿಗೆ ಪಾವತಿಸಲಾಗುತ್ತದೆ.

ಕಫ್ ಸಿರಪ್‌ ಪರೀಕ್ಷೆ ಕಡ್ಡಾಯ

ಇನ್ನು ಮುಂದೆ ಕೆಮ್ಮಿನ ಔಷಧ ತಯಾರಿಸುವ ಎಲ್ಲ ಕಂಪೆನಿಗಳೂ ಔಷಧ ರಫ್ತು ಮಾಡುವ ಮುನ್ನ ಅವುಗಳನ್ನು ಪರೀಕ್ಷಿಸಬೇಕಾದದ್ದು ಕಡ್ಡಾಯ. ಜೂ.1ರಿಂದಲೇ ಈ ನಿಯಮ ಜಾರಿಯಾಗಲಿದೆ. ಸರಕಾರಿ ಪ್ರಯೋಗಾಲಯದಲ್ಲಿ ಕಫ್ ಸಿರಪ್‌ ಪರೀಕ್ಷೆಗೊಳಗಾದ ಅನಂತರವೇ ರಫ್ತಿಗೆ ಅನುಮತಿ ಸಿಗಲಿದೆ.

ಎಲ್‌ಪಿಜಿ ಬೆಲೆ ಪರಿಷ್ಕರಣೆ

ಪ್ರತೀ ತಿಂಗಳ ಆರಂಭದಂದು ಎಲ್‌ಪಿಜಿ ಬೆಲೆ ಪರಿಷ್ಕರಣೆಯಾಗುತ್ತದೆ. ಅದರಂತೆ ಬೆಲೆ ಹೆಚ್ಚಳವಾಗಲಿದೆಯೇ ಅಥವಾ ಕಡಿಮೆಯಾಗಲಿದೆಯೇ ಎನ್ನುವುದು ನಾಳೆ ತಿಳಿಯಲಿದೆ. ಎಪ್ರಿಲ್‌ ಮತ್ತು ಮೇ ಆರಂಭದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಲಾಗಿತ್ತು. ಅದೇ ರೀತಿ ಸಿಎನ್‌ಜಿ- ಪಿಎನ್‌ಜಿ ಬೆಲೆಯೂ ಪರಿಷ್ಕರಣೆಯಾಗುವ ಸಾಧ್ಯತೆಯಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *