
ಪ್ರೇಯಸಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾಳಾ? – ಈ ತಪ್ಪುಗಳು ನಿಮ್ಮಲ್ಲೂ ಇರಬಹುದು ಗಮನಿಸಿ…
- ಸಂಬಂಧ
- May 31, 2023
- No Comment
- 430
ನ್ಯೂಸ್ ಆ್ಯರೋ : ನಾವು ಪ್ರೀತಿಸುವ ಜೀವಗಳು ನಮ್ಮನ್ನು ದೂರ ಮಾಡಿದರೆ, ನಮ್ಮನ್ನು ನಿರ್ಲಕ್ಷ್ಯ ಮಾಡಿದರೆ ಅದರಿಂದಾಗುವ ನೋವು ಅಪಾರ. ಅದರಲ್ಲೂ ಪ್ರೇಯಸಿ ದೂರ ಮಾಡುತ್ತಿದ್ದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಆದರೆ ಎಂದಾದರೂ ಆಲೋಚಿಸಿದ್ದೀರಾ? ಆಕೆ ದೂರ ಮಾಡಲು ನಿಮ್ಮ ಕೆಲವು ವರ್ತನೆಯೂ ಕಾರಣವಿರಬಹುದು ಅಲ್ವಾ? ಅದರ ಕುರಿತಾದ ವಿವರ ಇಲ್ಲಿದೆ.
ಅತಿಯಾದ ನಿರೀಕ್ಷೆ
ನೀವು ಅತಿಯಾದ ನಿರೀಕ್ಷೆ ಮಾಡುತ್ತಾ ಅವರನ್ನು ಗೋಳು ಹೊಯ್ದುಕೊಳ್ಳುವುದು ಅವರಿಗೆ ಕಿರಿಕಿರಿ ಎನಿಸಬಹುದು. ಅವರಿಗೆ ಬೇರೆ ಏನೂ ಮಾಡಲು ಸಾಧ್ಯವಿಲ್ಲದಂತೆ ಮಾಡುವ ನಿಮ್ಮ ವರ್ತನೆ ಒತ್ತಡಕ್ಕೀಡು ಮಾಡುತ್ತದೆ. ಜೊತೆಗೆ ನಿಮ್ಮ ತರ್ಕರಹಿತ ಬೇಡಿಕೆಯಿಂದ ಆಕೆಯ ಮನಸ್ಸು ಮುರಿದಿರುವ ಸಾಧ್ಯತೆ ಇದೆ.
ನಿಮ್ಮ ಮೇಲಿನ ಮುನಿಸು
ಯಾವುದೋ ಒಂದು ಘಟನೆ ಆಕೆಗೆ ನಿಮ್ಮ ಮೇಲೆ ಕೋಪ ಬರಲು ಕಾರಣವಾಗಿರಬಹುದು. ಆದರೆ ಅದನ್ನು ಹೇಳದೆ ಆಕೆ ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿರಬಹುದು. ಇಂಥ ಘಟನೆ ನಡೆದಿದ್ದರೆ ನೀವೇ ಮೊದಲಾಗಿ ಸಾರಿ ಕೇಳಿಬಿಡಿ. ಒಂದು ವೇಳೆ ನೀವು ತಪ್ಪು ಮಾಡಿದ್ದರೆ ಇನ್ನು ಮುಂದೆ ಅದನ್ನು ಪುನರಾವರ್ತಿಸುವುದಿಲ್ಲ ಎಂದು ಹೇಳಿ. ನೀವು ಮುಗ್ಧರಾಗಿದ್ದರೆ ಅವರಿಗೆ ವಿಷಯ ಮನದಟ್ಟು ಮಾಡಿಕೊಡಿ. ತಪ್ಪು ತಿಳುವಳಿಕೆಯಿದ್ದರೆ ಸರಿಪಡಿಸಿ.
ಅಭದ್ರ ಭಾವನೆ
ಸಾಮಾನ್ಯವಾಗಿ ಹುಡುಗಿಯರು ಕೆಲ ವಿಚಾರಗಳ ಬಗ್ಗೆ ಅತಿಯಾಗಿ ಯೋಚಿಸುತ್ತಾರೆ. ಹೀಗಾಗಿ ಪದೇ ಪದೆ ಏನಾದರೂ ಪ್ರಶ್ನಿಸುತ್ತಾರೆ. ಅವುಗಳ ಬಗ್ಗೆ ಸರಿಯಾಗಿ ಉತ್ತರ ನೀಡದೆ ತಪ್ಪಿಸಿಕೊಳ್ಳುತ್ತಿದ್ದರೆ ಅವರಲ್ಲಿ ಅನುಮಾನ ಮೂಡುತ್ತದೆ. ಇದರಿಂದ ಅಸುರಕ್ಷಿತ ಭಾವನೆ ಹೆಚ್ಚುತ್ತದೆ. ಇದರಿಂದ ನಿಮ್ಮಿಂದ ದೂರ ಹೋಗಲು ಯತ್ನಿಸುತ್ತಿರಬಹುದು. ಆದ್ದರಿಂದ ಮನ ಬಿಚ್ಚಿ ಮಾತನಾಡಿ.
ಸೂಕ್ತ ಬೆಂಬಲ ನೀಡುತ್ತಿಲ್ಲವೇ?
ನಿಮ್ಮ ಪ್ರೇಯಸಿ ಕಷ್ಟದ ಸಮಯದಲ್ಲಿ, ಆಕೆಗೆ ತುಂಬಾ ಅಗತ್ಯವಿರುವ ಸಮಯದಲ್ಲಿ ಆಕೆಗೆ ನೀವು ಬೆಂಬಲ ನೀಡದೆ ನಿಮ್ಮ ಪಾಡಿಗೆ ನೀವಿದ್ದು ಬಿಟ್ಟರೆ ಈ ಗುಣ ಹುಡುಗಿಯರಿಗೆ ಭಾರೀ ಬೇಸರವನ್ನು ಉಂಟುಮಾಡುತ್ತದೆ. ಪದೇ ಪದೆ ಇಂಥ ಘಟನೆ ನಡೆಯುತ್ತಿದ್ದರೆ ಆಕೆ ನಿಮ್ಮ ಬಗ್ಗೆ ನಂಬಿಕೆ ಕಳೆದುಕೊಂಡು ದೂರ ಸರಿಯುತ್ತಾರೆ.
ಸ್ವಾತಂತ್ರ್ಯ ನೀಡಿ
ಪ್ರೀತಿಪಾತ್ರರೊಂದಿಗೆ ಎಷ್ಟೇ ನಿಕಟವಾಗಿದ್ದರೂ ಒಬ್ಬರಿಗೊಬ್ಬರ ಸ್ವಾತಂತ್ರ್ಯ ನೀಡುವುದು ಅಗತ್ಯ. ಇಬ್ಬರ ನಡುವೆ ಒಂದಿಷ್ಟು ಸ್ಪೇಸ್ ಇರುವುದು ಬಹಳ ಮುಖ್ಯ. ನೀವು ಇಂತಹ ಗಡಿರೇಖೆ ಉಲ್ಲಂಘನೆ ಮಾಡುವ ಅಭ್ಯಾಸ ಹೊಂದಿದ್ದರೆ ಹುಡುಗಿಯರು ಬಹಳ ನಿರಾಶರಾಗುತ್ತಾರೆ. ಅವರು ಅದನ್ನು ತಮ್ಮನ್ನು ನಿಯಂತ್ರಿಸುವ ಗುಣ ಎಂಬುದಾಗಿ ಭಾವಿಸಿ ನಿಮ್ಮನ್ನು ನಿರ್ಲಕ್ಷಿಸಲು ಆರಂಭಿಸುತ್ತಾರೆ.