ಚಂದನವನದ ನವ ಜೋಡಿ ಸಿಂಹಪ್ರಿಯಾರ ವಿವಾಹಕ್ಕೆ ದಿನಗಣನೆ; ದಿಗ್ಗಜ ನಟರಿಗೆ ಆಮಂತ್ರಣ ಹಂಚುತ್ತಿರುವ ಜೋಡಿ

ಚಂದನವನದ ನವ ಜೋಡಿ ಸಿಂಹಪ್ರಿಯಾರ ವಿವಾಹಕ್ಕೆ ದಿನಗಣನೆ; ದಿಗ್ಗಜ ನಟರಿಗೆ ಆಮಂತ್ರಣ ಹಂಚುತ್ತಿರುವ ಜೋಡಿ

ನ್ಯೂಸ್ ಆ್ಯರೋ : ಸಿನಿಮಾ ನಟ ನಟಿಯರು ಪರಸ್ಪರ ಪ್ರೀತಿಯಲ್ಲಿ ಬಿದ್ದು ವಿವಾಹವಾಗುವುದು ಇದೇ ಮೊದಲೆನಲ್ಲ. ಕನ್ನಡ ಚಿತ್ರರಂಗದಲ್ಲಂತು ಸಾಕಷ್ಟು ನಟ ನಟಿಯರು ಪ್ರೀತಿಸಿ ವಿವಾಹವಾಗಿದ್ದಾರೆ. ಆ ಜೋಡಿಗಳ ಸಾಲಿಗೆ ಸದ್ಯ ಸ್ಯಾಂಡಲ್ ವುಡ್ ತಾರೆಯರಾದ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರ ಹೆಸರು ಸೇರುತ್ತಿದೆ‌.

ಪ್ರೀತಿಯಲ್ಲಿದ್ದರೂ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ ಈ ಜೋಡಿ

ಸಿನಿಮಾ ರಂಗದ ತಾರೆಯರ ಪ್ರೀತಿ ಅಂಗೈಯಲ್ಲಿದ್ದ ಬೆಣ್ಣಯಂತೆ ಯಾವಾಗ ಕರಗುತ್ತೋ ಗೊತ್ತಿಲ್ಲ ಎಂಬ ಮಾತಿದೆ‌. ಈ ಮಾತಿನಂತೆಯೆ ಸಿನಿ ತಾರೆಯರ ಹಲವು ಪ್ರೀತಿ ಪ್ರೇಮ ವರ್ಷಗಳಷ್ಟೊ ಅಥವಾ ತಿಂಗಳುಗಳ ಆಯಸ್ಸಿನೊಂದಿಗೆ ಮುಕ್ತಾಯಗೊಂಡ ನಿದರ್ಶನಗಳು ಸಾಕಷ್ಟಿದೆ‌. ಇದೀಗ ಮದುವೆಗೆ ರೆಡಿ ಆಗಿರುವ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹಲವಾರು ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದ್ದಾರು ಇಬ್ಬರಲ್ಲಿ ಯಾರೂ ಕೂಡ ಇದನ್ನು ಬಹಿರಂಗ ಪಡಿಸಿರಲಿಲ್ಲ ಅಥವಾ ಎಲ್ಲೂ ಹೇಳಿಕೊಂಡಿರಲಿಲ್ಲ. ಈ ವಿಚಾರದ ಬಗ್ಗೆ ಯಾರೇ ಪ್ರಶ್ನೆ ಎತ್ತಿದ್ರೂ ಕೂಡ ನಗು ಮುಖದೊಂದಿಗೆ ಸಿಂಹಪ್ರಯಾ ನಯವಾಗಿ ಜಾರಿಕೊಳ್ತಾ ಇದ್ರು.

ಗಣರಾಜ್ಯೋತ್ಸವಕ್ಕೆ ಸಪ್ತಪದಿ

ಜನವರಿ 26ರ ಗಣರಾಜ್ಯೋತ್ಸವದಂದು ಇಡೀ ದೇಶ ರಾಷ್ಟ್ರೀಯ ಹಬ್ಬದ ಗುಂಗಿನಲ್ಲಿರಲಿದೆ. ಆದರೆ ಸಿಂಹಪ್ರಿಯಾ ಜೋಡಿ ಅದೇ ದಿನ ವಿವಾಹವಾಗಲಿದ್ದಾರೆ. ಸದ್ಯ ಮದುವೆಗೆ ಭರದ ಸಿದ್ಧತೆಗಳು ನಡೆಯುತ್ತಿದೆ. ಇತ್ತೀಚೆಗಷ್ಟೆ ಇವರಿಬ್ಬರು ಪರಸ್ಪರ ಉಂಗುರ ಬದಲಿಸಿಕೊಂಡು ನಿಶ್ಚಿತಾರ್ಥ ಮುಗಿಸಿಕೊಂಡಿದ್ದರು. ಜೊತೆಗೆ ವಸಿಷ್ಠ ಸಿಂಹ ಅವರು ತಮ್ಮ ಪೇಸ್ ಬುಕ್ ಖಾತೆಯಲ್ಲಿ ಸಿಂಹವೊಂದು ಹೆಣ್ಣು ಮಗುವನ್ನು ಲಾಲಿಸುತ್ತಿರುವ ಪೋಟೋ ಪೊಸ್ಟ್ ಮಾಡಿ ನಿಶ್ಚಿತಾರ್ಥದ ವಿಚಾರವನ್ನು‌ ಬಹಿರಂಗಗೊಳಿಸಿದ್ದರು.

ಚಂದನವನದ ಗಣ್ಯರಿಗೆ ಸಿಂಹಪ್ರಿಯಾ ವಿವಾಹ ಆಮಂತ್ರಣ

ಕಂಚಿನ ಕಂಠದ ವಸಿಷ್ಠ ಸಿಂಹ ಹಾಗೂ ಮೋಹಕ‌ ನಟಿ ಹರಿಪ್ರಿಯಾರ ವಿವಾಹಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಜೋಡಿಗಳಿಬ್ಬರು ಆಮಂತ್ರಣ ಪತ್ರಿಕೆ ಹಿಡಿದು ಇಡೀ ಚಂದನವನ ಸುತ್ತುತ್ತಿದ್ದಾರೆ. ಕನ್ನಡ ಚಿತ್ರರಂಗದ ಹೆಸರಾಂತ ನಟ ನಟಿಯರ ಮನೆಗೆ ತೆರಳು ಆಮಂತ್ರಣ ಪತ್ರಿಕೆ ಹಂಚುತ್ತಿದ್ದಾರೆಮ ಸದ್ಯ ಹಿರಿಯ ನಟ ಅನಂತ್ ನಾಗ್, ಕಿಚ್ಚ ಸುದೀಪ್, ನವರಸ ನಾಯಕ ಜಗ್ಗೇಶ್, ಹಿರಿಯ ನಟಿ ಗಿರಿಜಾ ಲೋಕೇಶ್, ಟಾಕಿಂಗ್ ಸ್ಟಾರ್ ಸೃಜನ್‌ ಲೋಕೇಶ್, ಕ್ರೇಜಿ ಸ್ಟಾರ್ ರವಿಚಂದ್ರನ್, ಅಮೂಲ್ಯ, ಮಾಲಾಶ್ರೀ, ಡಿವೈನ್ ಸ್ಟಾರ್ ರಿಶಬ್ ಶೆಟ್ಟಿ, ರೀಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ದಿಗ್ಗಜ ನಟರ ಮನೆಗಳಿಗೆ ತೆರಳಿ ಸಿಂಹಪ್ರಿಯಾ ಜೋಡಿ ಮದುವೆಗೆ ಬರುವಂತೆ ಆಹ್ವಾನ‌ ನೀಡುತ್ತಿದ್ದಾರೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *