ಭೀಕರ ವಿಮಾನ ದುರಂತವನ್ನು ಸೆರೆಹಿಡಿದ ಪೇಸ್ ಬುಕ್ ಲೈವ್ ; ದುರಂತದಲ್ಲಿ ಮಡಿದ ಆ ಐವರು ಭಾರತೀಯರು ಯಾರು ಗೊತ್ತಾ?

ಭೀಕರ ವಿಮಾನ ದುರಂತವನ್ನು ಸೆರೆಹಿಡಿದ ಪೇಸ್ ಬುಕ್ ಲೈವ್ ; ದುರಂತದಲ್ಲಿ ಮಡಿದ ಆ ಐವರು ಭಾರತೀಯರು ಯಾರು ಗೊತ್ತಾ?

ನ್ಯೂಸ್ ಆ್ಯರೋ : ಇಡೀ ದೇಶ ಸಂಕ್ರಾಂತಿ ಹಬ್ಬದ ಗುಂಗಿನಲ್ಲಿತ್ತು. ಆದರೆ ನೆರೆಯ ರಾಷ್ಟ್ರದ ನೇಪಾಳದಲ್ಲಿ ಮಾತ್ರ ಅಕ್ಷರಶಃ ಭೀಕರ ಮೌನ ಆವರಿಸಿತ್ತು, ಪ್ರತಿ ಮನೆಯೂ ಸಾವಿನ ಮನೆಯಂತಾಗಿತ್ತು. ವಿಮಾನ ದುರಂತ ಸಂಭವಿಸಿದ ಆ ಘನಘೋರ ವಿಡಿಯೋ ಯುವಕನೊಬ್ಬನ ಪೇಸ್ ಬುಕ್ ಲೈವ ನಲ್ಲಿ ಸೆರೆಯಾಗಿತ್ತು.

ಹೌದು, ನಿನ್ನೆ ನೆರೆಯ ರಾಷ್ಟ್ರ ನೇಪಾಳದಲ್ಲಿ ಬೆಳಗ್ಗೆ 10.30ರ‌ ಹೊತ್ತಿಗೆ ನೇಪಾಳದ ತ್ರಿಭುವನ ವಿಮಾನ ನಿಲ್ದಾಣದಿಂದ 72 ಜನ ಪ್ರಯಾಣಿಕರನ್ನು ಹೊತ್ತೊಯ್ದ ವಿಮಾನವೊಂದು ಇನ್ನೇನು ಕೆಲವು ಕ್ಷಣಗಳಲ್ಲಿ ಪೋಖಾರ ನಿಲ್ದಾಣದಲ್ಲಿ ಲ್ಯಾಂಡ್ ಆಗುವುದಲ್ಲಿರುವಾಗಲೆ ಅಪಘಾತಕ್ಕೆ ತುತ್ತಾಯಿತು. ವಿಮಾನದಲ್ಲಿದ್ದ ಅಷ್ಟೂ ಜನ ಸಜಿವ ದಹನವಾಗಿ ಹೋದರು. ಕನಸುಗಳು, ಹೊಸ ನಿರೀಕ್ಷೆಗಳೊಂದಿಗೆ ವಿಮಾನ ಏರಿದ್ದ ಪ್ರಯಾಣಿಕರಿಗೆಲ್ಲ ನಿನ್ನೆಯ ವಿಮಾನ ಯಾನವೆ ಕೊನೆಯಾಗಿ ಹೋಯಿತು. ಇದರೊಂದಿಗೆ ನಿನ್ನೆಯ ವಿಮಾನ ದುರಂತ ದೇಶದಲ್ಲಿ ನಡೆದ ಅತ್ಯಂತ ದೊಡ್ಡ ದುರಂತ ಎಂಬ ಕುಖ್ಯಾತಿಗೆ ಪಾತ್ರವಾಯಿತು.

ದುರಂತಕ್ಕೆ ಕಾರಣವೇನು?

ಪೋಖರಾ ವಿಮಾನ ನಿಲ್ದಾಣದ ಕಾಮಗಾರಿ ಇನ್ನೂ ಪೂರ್ಣಗೊಂಡಿರಲಿಲ್ಲ. ಇತ್ತೀಚೆಗೆ ಗಡಿಬಿಡಿಯಲ್ಲಿ ಈ ವಿಮಾನ ನಿಲ್ದಾಣದ ಉದ್ಘಾಟನೆ ನೆರವೇರಿಸಲಾಗಿತ್ತು. ಇದರೊಂದಿಗೆ ಗಿರಿ ಶಿಖರಗಳೆ ಹೆಚ್ಚಾಗಿರುವ ನೇಪಾಳ ವಿಮಾನಯಾನಕ್ಕೆ ಯೋಗ್ಯವಾದ ಸ್ಥಳವಲ್ಲ. ಜೊತೆಗೆ ಇಲ್ಲಿನ ಹವಮಾನ ವೈಪರೀತ್ಯಗಳಿಂದಾಗಿ ವಿಮಾನದ ಟೇಕ್ ಆಫ್ ಹಾಗೂ ಲ್ಯಾಂಡಿಗ್ ಸವಾಲಿನ‌ ಕೆಲಸವಾಗಿದೆ. ಕೆಲವರ ಪ್ರಕಾರ ನಿನ್ನೆ‌ನಡೆದ ದುರಂತಕ್ಕೆ ಅವೈಜ್ಞಾನಿಕ ಕಾಮಗಾರಿ, ನೇಪಾಳದ ಬೃಹತ್ ಗಿರಿ ಶಿಖರಗಳು ಮತ್ತು ನಿರಂತರ ಹವಾಮಾನ ವೈಪರೀತ್ಯವೇ ಕಾರಣ ಎನ್ನಲಾಗುತ್ತಿದೆ.

ದುರಂತದಲ್ಲಿ15 ವಿದೇಶಿಗರ‌ ಸಾವು

ನೇಪಾಳದ ಭೀಕರ‌ ವಿಮಾನ ದುರಂತದಲ್ಲಿ ಐವರು ಭಾರತೀಯರು ಸೇರಿದಂತೆ ನಾಲ್ವರು ರಷ್ಯಾ ಪ್ರಜೆಗಳು, ಇಬ್ಬರು ಕೊರಿಯನ್ನರು, ಅರ್ಜೆಂಟೀನಾದ ಇಬ್ಬರು ಹಾಗೂ ಪ್ರಾನ್ಸ್ ಮತ್ತು ಐರ್ಲ್ಯಾಂಡಿನ ತಲಾ ಒಬ್ಬೊಬ್ಬ ಪ್ರಜೆಗಳು ಸಾವನಪ್ಪಿದ್ದಾರೆ ಎಂಬ ಮಾಹಿತಿಯನ್ನು ನೇಪಾಳ ಮಾದ್ಯಮ ವರದಿ ಮಾಡಿದೆ.

ದುರಂತದ ಮಡಿದ ಐವರು ಭಾರತೀಯರು ಯಾರು?

ದುರಂತಕ್ಕೆ ಒಳಗಾದ ನೇಪಾಳದ ಈ ವಿಮಾನದಲ್ಲಿ ಕೇವಲ ವಿದೇಶಿಯರಷ್ಟೇ ಅಲ್ಲದೆ ಐದು ಜನ ಭಾರತೀಯರು ಕೂಡ ಇದ್ದರು.‌ಮೃತ ಭಾರತೀಯರನ್ನು ಅಭಿಷೇಕ್ ಖುಶ್ವಾಹ, ಬಿಶಾಲ್ ಶರ್ಮ, ಅನಿಲ್ ಕುಮಾರ್, ರಾಜ್ ಬರ್, ಸೋನು ಜೈಸ್ವಾಲ್ ಹಾಗೂ ಸಂಜು ಜೈಸ್ವಾಲ್ ಎಂದು ಗುರುತಿಸಲಾಗಿದ್ದು, ಮೃತ ದೇಹಗಳನ್ನು ಸದ್ಯ ಕುಟುಂಬಸ್ಥರಿಗೆ ತಲುಪಿಸುವ ಕೆಲಸಗಳಾಗುತ್ತಿವೆ ಎನ್ನಲಾಗಿದೆ.

ನೇಪಾಳದ ಇತ್ತೀಚಿನ ವಿಮಾನ ದುರಂತಗಳು.

ನೇಪಾಳ ರಾಷ್ಟ್ರವನ್ನು ವಿಮಾನ ದುರಂತಗಳ ತವರು ಎಂದು ಕರೆಯಲಾಗುತ್ತದೆ. ನೇಪಾಳದಲ್ಲಿ ವಿಮಾನ ದುರಂತ ಇದೇ ಮೊದಲೇನಲ್ಲ ಈ ಹಿಂದೆಯೂ ಕೂಡ ಇಂತಹ ಭೀಕರ ದುರಂತಗಳಿಗೆ ಈ ದೇಶ ಸಾಕ್ಷಿಯಾಗಿದೆ.2018ರಲ್ಲಿ ಕಾಠ್ಮಂಡು ವಿಮಾನ ನಿಲ್ದಾಣದ ಬಳಿ ಬಾಂಗ್ಲಾದೇಶದ ಯುಎಸ್-ಬಾಂಗ್ಲಾ ಏರ್ ಲೈನ್ಸ್ ವಿಮಾನ‌ಪತನಗೊಂಡು 51 ಪ್ರಯಾಣಿಕರನ್ನು ಬಲಿ‌ ಪಡೆದಿತ್ತು. 2021ರಲ್ಲಿ ನೇಪಾಳದ ತಾರಾ ಏರ್ ಸಂಸ್ಥೆಯ ವಿಮಾನವು ಮುಸ್ತಾಂಗ್ ಜಿಲ್ಲೆಯ ಹವಾಮಾನ ವೈಪರೀತ್ಯದಿಂದಾಗಿ ಪತನಗೊಂಡು ಇದರಲ್ಲಿ ಸುಮಾರು 22 ಜನ ಸಾವನಪ್ಪಿದ್ದರು.

ಪ್ರಸಿದ್ಧ ನೇಪಾಳಿ ಗಾಯಕಿ ದುರಂತದಲ್ಲಿ ಸಾವು

ನೂರಾರು ಕನಸುಗಳನ್ನು‌ ಹೊತ್ತ ಪ್ರಯಾಣಿಕರನ್ನು ನಿನ್ನೆಯ ದುರಂತ ಬಲಿ‌ ಪಡೆದಿದೆ. ಮಕ್ಕಳು, ಯುವಕರು, ಹಿರಿಯರು, ಕಲಾವಿದರು ಸೇರಿ 71 ಜನ ಸಾವನಪ್ಪಿದ್ದಾರೆ. ಈ ದುರಂತದಲ್ಲಿ ನೇಪಾಳದ ಪ್ರಸಿದ್ಧ ಜಾನಪದ ಗಾಯಕಿಯಾದ ನೀರಾ ಚಂತ್ಯಾಲ್ ಕೂಡ ಮರಣ ಹೊಂದಿದ್ದಾರೆ. ದುರಂತಕ್ಕೂ ಮುನ್ನ ತಮ್ಮ ಪೇಸ್ ಬುಕ್ ಪೇಜ್ ನಲ್ಲಿ ‘ ನಾನು‌‌ ನಾಳೆ ಪೋಖರದಲ್ಲಿ ಸಂಭ್ರಮಿಸಬೇಕು’ ಎಂದು ಬರೆದುಕೊಂಡಿದ್ದರು ಆದರೆ ವಿಧಿಯ ಆಟವೆ ಬೇರೆಯಾಗಿತ್ತು. ವಿಮಾನ ಲ್ಯಾಂಡ್ ಆಗುವ ಮುನ್ನವೇ ದುರಂತದಿಂದ ಗಾಯಕಿ ಅಸುನೀಗಿದರು.

ದುರಂತಕ್ಕೆ ಗಣ್ಯರ ಸಂತಾಪ

ನೇಪಾಳದಲ್ಲಿ ನಡೆದ ಈ‌ ಭೀಕರ ವಿಮಾನ‌ ದುರಂತಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿಶ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಇತರೆ ದೇಶದ ಗಣ್ಯರು ಕೂಡ ಸಂತಾಪ ವ್ಯಕ್ತ ಪಡಿಸಿದ್ದಾರೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *