ಆಟೋ ಎಕ್ಸಪೋದಲ್ಲಿ ಪ್ರದರ್ಶನ ಕಂಡಿದೆ ಕಿಯಾ ಪೊಲೀಸ್ ಕಾರು ಮತ್ತು ಆಂಬಯಲೆನ್ಸ್; ಸೂಪರ್ ವಾಹನಗಳಿವು

ಆಟೋ ಎಕ್ಸಪೋದಲ್ಲಿ ಪ್ರದರ್ಶನ ಕಂಡಿದೆ ಕಿಯಾ ಪೊಲೀಸ್ ಕಾರು ಮತ್ತು ಆಂಬಯಲೆನ್ಸ್; ಸೂಪರ್ ವಾಹನಗಳಿವು

ನ್ಯೂಸ್ ಆ್ಯರೋ : ಪ್ರಸ್ತುವ ಭಾರತದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಆಟೋ ಎಕ್ಸಪೋ ಹೊಸದಾಗಿ ಮಾರುಕಟ್ಟೆಗೆ ಲಗ್ಗೆ ಇಡಲು ತಯಾರಾಗಿರುವ ಎಲ್ಲಾ ಮಾದರಿಯ ವಾಹನಗಳಿಗೂ ಸೂಕ್ತ ವೇದಿಕೆಯಾಗಿದೆ. ಕಾರು,ಬೈಕ್, ಸ್ಕೂಟರ್, ಆಂಬ್ಯಲನ್ಸ್ ಹೀಗೆ ನೂತನ ತಂತ್ರಜ್ಞಾನಗಳನ್ನ ಅಳವಡಿಸಿಕೊಂಡಿರುವ ನೂರಾರು ವಾಹನಗಳು ಪ್ರದರ್ಶನ ಕಾಣುತ್ತಿವೆ. ಇದೀಗ ಕಿಯಾ ಪೊಲೀಸ್ ಕಾರು ಮತ್ತು ಆಂಬ್ಯಲೆನ್ಸ್ ಪ್ರದರ್ಶನ‌ ಕಂಡು ಎಲ್ಲರ ಗಮನ ಸೆಳೆಯುತ್ತಿದೆ.

ದಕ್ಷಿಣ ಕೊರಿಯಾಕೆ‌ ಸೇರಿದ ಕಿಯಾ ಮೋಟಾರ್ಸ್ ಈಗಾಗಲೇ ಭಾರತೀಯ ವಾಹನ ಪ್ರೀಯರಿಗೆ ಪರಿಚಯವಾಗಿದೆ‌. ಇದೀಗ ಇದೇ ಕಂಪೆನಿ ಆಟೋ ಎಕ್ಸಪೋದಲ್ಲಿ ಕ್ಯಾರೆನ್ಸ್ನ ಆಂಬ್ಯಲೆನ್ಸ್ ಹಾಗೂ ಪೊಲೀಸ್ ಕಾರು ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಈ ಎರಡೂ ವಾಹನಗಳನ್ನು ಕಸ್ಟಮೈಸ್ ಮಾಡಲಾಗಿದೆ ಎನ್ನಲಾಗಿದೆ.ಆಂಬ್ಯಲೆನ್ಸ್ ಹಳದಿ ಮತ್ತು ಕೆಂಪು ಬಣ್ಣದಲ್ಲಿ ಕಂಗೊಳಿಸುತ್ತಿದ್ದರೆ. ಪೊಲೀಸ್ ಕಾರು ರೆಡ್ ಮತ್ತು ಬ್ಲೂ ಬಣ್ಣದಲ್ಲಿ ಮಿಂಚುತ್ತಿದೆ.

ಪೊಲೀಸ್ ಕಾರಿನ ಹಿಂದೆ Police ಮತ್ತು ಆಂಬ್ಯಲೆನ್ಸ್ ವಾಹದಲ್ಲಿ Ambulance ಎಂದು ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದ್ದ, ಕಿಯಾ ಕ್ಯಾರೆನ್ಸ್ ಅಂಬ್ಯಲೆನ್ಸ್ ನಲ್ಲಿ 7 ಸೀಟುಗಳಿವೆ. ಆದರೆ ಹಿಂಬಾಗದ ಸೀಟುಗಳನ್ನು ತೆಗೆದು ಅಲ್ಲಿ ರೋಗಿಗಳು ಮಲಗುವ ಸ್ಟ್ರೆಚ್ಚರ್ ಅಳವಡಿಸಲಾಗಿದೆ.ರೋಗಿಯ‌ ಪಕ್ಕದಲ್ಲಿ ಕುಳಿತುಕೊಳ್ಳಲು ಸೀಟ್ ಇದೆ ಜೊತೆಗೆ ಅಗತ್ಯವಾಗಿ ಬೇಕಾದ ಆಕ್ಸಿಜನ್ ಸಿಲಿಂಡರ್ ಅಳವಡಿಸಲಾಗಿದೆ. ಜೊತೆಗೆ ಎಮರ್ಜೆನ್ಸಿ ಲೈಟ್ಸ್ ಬಾರ್ ಹಾಗೂ ದೊಡ್ಡ ಸೈರನ್ ಕೂಡ ಕಾಣಬಹುದಾಗಿದೆ. ಒಟ್ಟಾರೆಯಾಗಿ ಈ ಒಂದು ಕ್ಯಾರನ್ಸ್ ಆಂಬ್ಯಲನ್ಸ್ ನಲ್ಲಿರುವ ವೈವಿದ್ಯಮಯ ವೈಶಿಷ್ಟ್ಯಗಳನ್ನು ಕಂಡವರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಇನ್ನು ಕ್ಯಾರನ್ಸ್ ಪೊಲೀಸ್ ವಾಹನವನ್ನು ನೋಡುವುದಾದರೆ, ಈ ವಾಹನವು ರೆಡ್ ಮತ್ತು ಬ್ಲೂ ಬಣ್ಣದಲ್ಲಿದೆ‌. ಇದರಲ್ಲೂ ಕೂಡ ನೂತನ ಸೈರನ್ ಅಳವಡಿಸಲಾಗಿದೆ. ಇದರಲ್ಲಿರುವ ಲೈಟ್ ಬಾರ್ ಅದ್ಭುತವಾಗಿದ್ದು ವಾಹನದ ಒಳ ಭಾಗದಲ್ಲಿ ತುರ್ತು ಕರೆಗಳನ್ನು ಸ್ವೀಕರಿಸಲು ವಾಕಿ ಟಾಕಿಗಳನ್ನು ಕೂಡ ಅಳವಡಿಸಲಾಗಿದೆ.

ಕಿಯಾ ಕ್ಯಾರೆನ್ಸ್ ಪೊಲೀಸ್ ಕಾರ್ ಮತ್ತು ಆಂಬ್ಯುಲೆನ್ಸ್‌ನ ಒಳಭಾಗದಲ್ಲಿ ಕೆಲವು ಮುಖ್ಯ ಬದಲಾವಣೆಗಳನ್ನು ಮಾಡಲಾಗಿದ್ದು, ಒಂದೇ ಹೆಡ್‌ಲೈಟ್‌ಗಳು, ಟೈಲ್ ಲೈಟ್‌ಗಳನ್ನು ಹೊಂದಿವೆ. ಕಿಯಾ ಕ್ಯಾರೆನ್ಸ್ ಆಂಬ್ಯುಲೆನ್ಸ್ ವಾಹನಕ್ಕೆ ಹೋಲಿಸಿದರೆ, ಪೊಲೀಸ್ ವಾಹನದ ಒಳಭಾಗವು ಹೆಚ್ಚು ಬದಲಾಗಿಲ್ಲ ಎಂಬುದು ತಿಳಿಯುತ್ತದೆ. ಕಂಪನಿಯು ಅದರ ಎಂಜಿನ್ ಕಾರ್ಯಕ್ಷ್ಮತೆಯ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಇದು ಕಿಯಾ ಕ್ಯಾರೆನ್ಸ್‌ನಲ್ಲಿ ಬಳಕೆ ಮಾಡುವ ಅದೇ ಎಂಜಿನ್ ಅನ್ನು ಹೊಂದಿರಲಿದೆ. ಕಂಪನಿಯು ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸುತ್ತದೆ ಎಂದು ಅಂದಾಜಿಸಲಾಗಿದೆ.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *