ಶ್ರೀದೇವಿ ಪುತ್ರಿಯ ಸಂಭಾವನೆ ಕೇಳಿದ್ರೆ ತಲೆ ತಿರುಗುತ್ತೆ, ಜಾಹ್ನವಿ ಕಪೂರ್ ಸಂಭಾವನೆ ರಶ್ಮಿಕಾಗಿಂತ ಎಷ್ಟು ದುಬಾರಿ ಗೊತ್ತಾ

ಶ್ರೀದೇವಿ ಪುತ್ರಿಯ ಸಂಭಾವನೆ ಕೇಳಿದ್ರೆ ತಲೆ ತಿರುಗುತ್ತೆ, ಜಾಹ್ನವಿ ಕಪೂರ್ ಸಂಭಾವನೆ ರಶ್ಮಿಕಾಗಿಂತ ಎಷ್ಟು ದುಬಾರಿ ಗೊತ್ತಾ

ನ್ಯೂಸ್ ಆ್ಯರೋ : 70ರ ದಶಕದ ಸಿನಿ ಪ್ರೀಯರ ಹೃದಯ ಕದ್ದಿದ್ದ ಚೆಲುವೆ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಕೂಡ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ ಅನ್ನೊದು ಹಳೆತ ವಿಚಾರ. ಜಾಹ್ನವಿ ಬಾಲಿವುಡ್‌ನಲ್ಲೆ ಸಿನಿ ಜೀವನ ಆರಂಭಿಸಿದ್ರು, ಆದ್ರೆ ಅಲ್ಲಿ ಮಾಡಿದ ಸಿನಿಮಾಗಳಲ್ಲಿ ಯಾವುದು ಕೂಡ ಅವರ ಕೈ ಹಿಡಿದಿಲ್ಲ. ಸದ್ಯ ಇದರಿಂದಾಗಿ ದಕ್ಷಿಣ ಭಾರತದ ಕಡೆ ಈಕೆ ಮು ಖ ಮಾಡಿದ್ದಾರೆ. ತೆಲುಗು ನಟ ಜೂನಿಯರ್ ಎನ್.ಟಿ.ಆರ್ ಅವರ ಮುಂದಿನ ಸಿನಿಮಾದ ಮೂಲಕ ಜಾಹ್ನವಿ ದಕ್ಷಿಣದ ಸಿನಿಮಾಕ್ಕೆ ಕಾಲಿಡಲಿದ್ದಾರೆ ಅನ್ನುವ ಸುದ್ದಿ ಸದ್ಯ ಟ್ರೆಂಡಿಂಗ್ ನಲ್ಲಿದೆ. ಆದರೆ ಈ ನಡುವೆ ಈಕೆಯ ಸಂಭಾವನೆ ಕೇಳಿದ ಜನರ ತಲೆ ತಿರುಗುತ್ತಿರುವುದಂತು ಗ್ಯಾರಂಟಿ!

ಜೂನಿಯರ್ ಟನ್.ಟಿ.ಆರ್ ಸದ್ಯ ರಾಜಮೌಳಿ ನಿರ್ದೇಶನದ RRR ಸಿನಿಮಾ ಮೂಲಕ ತಮ್ಮ ಸಿನಿಜೀವನದ ಉತ್ತುಂಗದಲ್ಲಿದ್ದಾರೆ. ಫ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿದ್ದಾರೆ. ಹಾಗಾಗಿಯೇ ಜೂ. ಎನ್.ಟಿ.ಆರ್ ಮುಂದಿನ ಸಿನಿಮಾಕ್ಕಾಗಿ ಜಾಗರೂಕ ಹೆಜ್ಜೆಗಳನ್ನಿಡುತ್ತಿದ್ದಾರೆ. ಇವರ ಮುಂದಿನ ಸಿನಿಮಾವನ್ನು ಟಾಲಿವುಡ್ ನಿರ್ದೇಶಕ ಕೊರಟಾಲ ಶಿವ ನಿರ್ದೇಶನ‌ ಮಾಡುತ್ತಿದ್ದು, ಇದೇ ಸಿನಿಮಾಗೆ ಜಾಹ್ನವಿ ನಾಯಕಿಯಾಗುತ್ತಿದ್ದಾರೆ ಎಂಬ ಸುದ್ದಿಯಿದೆ. ಆದರೆ ಅವರ ಸಂಭಾವನೆ ಮಾತ್ರ ಬಹು ಭಾಷಾ ನಟಿ ಕನ್ನಡತಿ ರಶ್ಮಿಕಾ ಮಂದಣ್ಣ ಅವರಿಗಿಂತಲೂ ಹೆಚ್ಚು ಎಂಬ ಮಾತು ಟಾಲಿವುಡ್ ಸುತ್ತಮುತ್ತ ಕೇಳಿ ಬರುತ್ತಿದೆ.

ಮೊದಲ ಸಿನಿಮಾಗೆ ದುಬಾರಿ ಸಂಭಾವನೆ

ಒಂದು ವೇಳೆ ಜಾಹ್ನವಿ ಕಪೂರ್ ಜ್ಯೂನಿಯರ್ ಎನ್‌ಟಿಆರ್ ಅವರ ಮುಂದಿನ ಸಿನಿಮಾದಲ್ಲಿ ನಾಯಕಿಯಾದ್ರೆ. ಅದು ಜಾಹ್ನವಿ ಅವರ ಮೊದಲ ದಕ್ಷಿಣ ಭಾರತದ ಸಿನಿಮಾವಾಗಲಿದೆ. ಇತ್ತೀಚೆಗೆ ದಕ್ಷಿಣದ ಸಿನಿಮಾಗಳು ಗಡಿಯಾಚೆಗೂ ಸದ್ದು ಮಾಡುತ್ತಿದ್ದು. ತಮ್ಮ ಅದೃಷ್ಟ ಪರೀಕ್ಷೆಗೆ ಬಾಲಿವುಡ್ ಯುವರಾಣಿ ದಕ್ಷಿದತ್ತ ಬಂದಿದ್ದಾರೆ. ಬಹುತೇಕ ಜೂ.ಎನ್ ಟಿ ಆರ್ ಸಿನಿಮಾದಲ್ಲಿ ಜಾಹ್ನವಿ ನಟಿಸೊದ ಪಕ್ಕಾ ಆಗಿದೆ. ಆದರೆ ಈಕೆ ರಶ್ಮಿಕಾಗಿಂತ ಹೆಚ್ಚಿನ ಸಂಭಾವನೆ ಕೇಳುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ರಶ್ಮಿಕಾ ಮಂದಣ್ಣ ‘ಪುಷ್ಪಾ’ ಸಿನಿಮಾಗೆ 5ಕೋಟಿ ಸಂಭಾವನೆ ಪಡೆದಿದ್ದರು ಇದೀಗ ಜಾಹ್ನವಿ ಅದಕ್ಕಿಂತ ಹೆಚ್ಚಿನ ಸಂಭಾವನೆಯ ಬೇಡಿಕೆ ಇಟ್ಟಿದ್ದಾರಂತೆ.

ಜಾಹ್ನವಿ ಕಪೂರ್ ಕೈಯಲ್ಲಿ ಬಾಲಿವುಡ್‌ನ ಎರಡು ಸಿನಿಮಾಗಳಿವೆ. ‘ಮಿಲ್ಲಿ’ ಸಿನಿಮಾ ಮೂಲಕ ಮೆಚ್ಚುಗೆ ಗಳಿಸಿದ್ದ ನಟಿ, ‘ಬವಾಲ್’ ಹಾಗೂ ‘ಮಿಸ್ಟರ್ ಹಾಗೂ ಮಿಸ್ಸಸ್ ಮಹಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಜೊತೆ ಟಾಲಿವುಡ್‌ಗೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಒಂದು ವೇಳೆ ತೆಲುಗು ಸಿನಿಮಾಗಳಲ್ಲಿ ಯಶಸ್ಸು ಕಂಡರೆ, ಜಾಹ್ನವಿ ಕಪೂರ್‌ಗೆ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗುವ ಸಾದ್ಯತೆ ಇದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *