Sunny Leone : ಸನ್ನಿ ಲಿಯೋನ್ ನೀಲಿಚಿತ್ರ ಲೋಕಕ್ಕೆ ಬಂದಿದ್ದು ಏಕೆ? – ಎಲ್ಲರಿಗೂ ಗೊತ್ತಿಲ್ಲದ ಅವರ ಕಹಿ ಬದುಕಿನ ಪಯಣದ ಕಥೆ ಇಲ್ಲಿದೆ‌‌..

Sunny Leone : ಸನ್ನಿ ಲಿಯೋನ್ ನೀಲಿಚಿತ್ರ ಲೋಕಕ್ಕೆ ಬಂದಿದ್ದು ಏಕೆ? – ಎಲ್ಲರಿಗೂ ಗೊತ್ತಿಲ್ಲದ ಅವರ ಕಹಿ ಬದುಕಿನ ಪಯಣದ ಕಥೆ ಇಲ್ಲಿದೆ‌‌..

ನ್ಯೂಸ್ ಆ್ಯರೋ‌ : ಸನ್ನಿ ಲಿಯೋನ್ ಸದ್ಯ ಬಾಲಿವುಡ್ ನ ಬೇಡಿಕೆಯ ನಟಿಯರಲ್ಲಿ ಒಬ್ಬರು. ಕನ್ನಡ ಚಿತ್ರಗಳ ವಿಶೇಷ ಹಾಡಿನಲ್ಲೂ ಹೆಜ್ಜೆ ಹಾಕಿರುವ ಅವರಿಗೆ ಅನೇಕ ಅಭಿಮಾನಿಗಳಿದ್ದಾರೆ. ಕೆನಡಾದಲ್ಲಿ ಜನಿಸಿದ ಅವರ ಜೀವನ ಪಯಣವೇ ಒಂದು ಸಿನಿಮಾ ಕಥೆಯಂತಿದೆ.

ಸನ್ನಿ ಲಿಯೋನ್ ಕೆನಡಾದ ಸಿಖ್ ಕುಟುಂಬದಲ್ಲಿ ಮೇ 13, 1981ರಂದು ಜನಿಸಿದರು. ಅವರ ನಿಜವಾದ ಹೆಸರು ಕರಂಜೀತ್ ಸಿಂಗ್ ಕೌರ್. ಅವರಿಗೆ 15 ವರ್ಷ ಇದ್ದಾಗ ಕುಟುಂಬ ಕ್ಯಾಲಿಫೋರ್ನಿಯಾಗೆ ಶಿಫ್ಟ್ ಆಯಿತು. ಆಗ ಅವರ ಕುಟುಂಬಕ್ಕೆ ಹಣದ ಕೊರತೆ ಎದುರಾಗಿತ್ತು. ಈ ವೇಳೆ ಅವರಿಗೆ ಮ್ಯಾಗಜಿನ್ ಒಂದರಲ್ಲಿ ಮಾಡೆಲ್ ಆಗಲು ಅವಕಾಶ ಸಿಕ್ಕಿತು. ಅದು ಅಡಲ್ಟ್ ಮ್ಯಾಗಜಿನ್ ಎನ್ನುವ ಮಾಹಿತಿ ಇಲ್ಲದ ಸನ್ನಿ ಲಿಯೋನ್ ಕಾಣಿಸಿಕೊಳ್ಳಲು ಒಪ್ಪಿದರು.

ಆ ಬಳಿಕ ಅವರು ಪೋರ್ನ್ ಇಂಡಸ್ಟ್ರಿಗೆ ತೆರೆದುಕೊಂಡರು. ಈ ವಿಚಾರ ಸಹೋದರನಿಗೆ ಗೊತ್ತಿತ್ತು. ಆತ ಸನ್ನಿಯನ್ನು ಬೆಂಬಲಿಸಿದ. ಕುಟುಂಬದವರಿಗೆ ಈ ವಿಚಾರ ಗೊತ್ತಾದಾಗ ಇದನ್ನು ಸಹಿಸಿಕೊಳ್ಳಲು ಆಗಲೇ ಇಲ್ಲ. ಸನ್ನಿ ಅಮ್ಮ ಖಿನ್ನತೆಗೆ ಒಳಗಾದರು. ಕರಂಜೀತ್ ಎಂದಿದ್ದ ಹೆಸರು ಸನ್ನಿ ಎಂದು ಬದಲಾಯಿತು.

ಅಡಲ್ಟ್ ಸ್ಟಾರ್ ಆಗಿದ್ದ ಡ್ಯಾನಿಯಲ್ ವೇಬರ್ ಜೊತೆ ಮಾತ್ರ ಸನ್ನಿ ಲಿಯೋನ್ ತೆರೆ ಹಂಚಿಕೊಂಡಿದ್ದರು ಎನ್ನುವುದು ವಿಶೇಷ. ಇಬ್ಬರ ಮಧ್ಯೆ ಪ್ರೀತಿ ಹುಟ್ಟಿದ್ದರಿಂದ ಇಬ್ಬರೂ ಮದುವೆಯಾದರು. ಬಳಿಕ ಸನ್ನಿ ನೀಲಿ ಚಿತ್ರದಿಂದ ಹೊರ ಬಂದರು. 2012ರಲ್ಲಿ ‘ಜಿಸ್ಮ್ 2’ ಮೂಲಕ ಬಾಲಿವುಡ್ ಪ್ರವೇಶಿಸಿದರು. ಬಿಗ್ ಬಾಸ್ ರಿಯಾಲಿಟಿ ಷೋನಲ್ಲೂ ಸ್ಪರ್ಧಿಸಿದರು. ಹಿಂದಿ ಜೊತೆಗೆ ಕನ್ನಡ, ತಮಿಳು, ತೆಲುಗು ಚಿತ್ರಗಳಲ್ಲೂ ಕಾಣಿಸಿಕೊಂಡು ಈಗ ಭಾರತದ ಬೇಡಿಕೆಯ ನಟಿಯಾಗಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *