ಎನ್’ಟಾರ್ಕ್ ಮಾರಾಟದಲ್ಲಿ ಹೊಸ ದಾಖಲೆ ಬರೆದ ಟಿವಿಎಸ್‌ – ಭಾರತದ ಮಾರುಕಟ್ಟೆಯಲ್ಲಿ ಹೊಸ ಮೈಲಿಗಲ್ಲು‌

ಎನ್’ಟಾರ್ಕ್ ಮಾರಾಟದಲ್ಲಿ ಹೊಸ ದಾಖಲೆ ಬರೆದ ಟಿವಿಎಸ್‌ – ಭಾರತದ ಮಾರುಕಟ್ಟೆಯಲ್ಲಿ ಹೊಸ ಮೈಲಿಗಲ್ಲು‌

ನ್ಯೂಸ್ ಆ್ಯರೋ‌ : ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ ಸ್ಕೂಟರ್ ಗಳ ಪಟ್ಟಿಯಲ್ಲಿ ಟಿವಿಎಸ್ ಎನ್‍ಟಾರ್ಕ್ ನಾಲ್ಕನೇ ಸ್ಥಾನದಲ್ಲಿದೆ. ಭಾರತದಲ್ಲಿ ಟಿವಿಎಸ್ ಗ್ರಾಹಕರ ಮನೆ ಗೆದ್ದ ಕಂಪೆನಿಯಾಗಿದ್ದು, ಬೈಕ್, ಸ್ಕೂಟರ್, ಮೊಪೆಡ್ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತದೆ.

ಈಗಾಗಲೇ ಟಿವಿಎಸ್ ಜುಪಿಟರ್ ಸ್ಕೂಟರ್ ಮೂಲಕ ಜನಪ್ರಿಯವಾಗಿದೆ. ಇದೀಗ ಎನ್‍ಟಾರ್ಕ್ ಮೂಲಕ ಮತ್ತೊಮ್ಮೆ ಹೊಸ ಮೈಲಿಗಲ್ಲು ಸೃಷ್ಟಿಸಿದೆ. 2018ರಲ್ಲಿ ಎನ್‍ಟಾರ್ಕ್ ಬಿಡುಗಡೆಯಾಗಿತ್ತು. ಅಂದಿನಿಂದ ಇಲ್ಲಿಯವರೆಗೆ 1.45 ಮಿಲಿಯನ್ ಮಾರಾಟವಾಗಿದೆ. 2022ರ ಎಪ್ರಿಲ್ ನಲ್ಲಿ 10 ಲಕ್ಷ ಮರಾಟದ ಗಡಿ ತಲುಪಿತು. 2023ರ ಮಾರ್ಚ್‌ನಲ್ಲಿ ಭಾರತದಲ್ಲಿ 12,89,171 ಎನ್‍ಟಾರ್ಕ್ ಸ್ಕೂಟರ್ ಗಳನ್ನು ಗ್ರಾಹಕರು ಖರೀದಿಸಿದ್ದಾರೆ.

ಟಾಪ್ ಸ್ಕೂಟರ್ ಗಳು

ಭಾರತದ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಮಾರಾಟವಾದ ಸ್ಕೂಟರ್ ಗಳ ಪೈಕಿ ಹೋಂಡಾ ಆಕ್ಟಿವಾ ಮೊದಲ ಸ್ಥಾನದಲ್ಲಿ, ಟಿವಿಎಸ್ ಜುಪಿಟರ್ ಎರಡನೇ ಸ್ಥಾನದಲ್ಲಿದ್ದರೆ ಮೂರನೇ ಸ್ಥಾನದಲ್ಲಿ ಸುಜುಕಿ ಆಕ್ಸೆಸ್ ಇದೆ. ನಾಲ್ಕನೇ ಸ್ಥಾನದಲ್ಲಿ ಎನ್‍ಟಾರ್ಕ್ ಭದ್ರವಾಗಿದೆ.

ರೂಪ, ಬಣ್ಣ, ವೈಶಿಷ್ಟ್ಯದಲ್ಲಿ ಬದಲಾವಣೆಯೊಂದಿಗೆ ಎನ್‍ಟಾರ್ಕ್ ಹಲವು ವರ್ಷಗಳಿಂದ ಗ್ರಾಹಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತಿದೆ. ಇದು ಸ್ಮಾರ್ಟ್ ಫೋನ್ ಗೆ ಬ್ಲೂಟೂತ್ ಸಂಪರ್ಕ ನೀಡುತ್ತದೆ. ಇದರಲ್ಲಿನ ಡಿಜಿಟಲ್ ಇನ್ಟ್ರುಮೆಂಟ್ ಕನ್ಸೋಲ್, ಎಲ್‍ಇಡಿ ದೀಪಗಳಂತಹ ಸುಧಾರಿತ ಕ್ರಮಗಳು ಆಕರ್ಷಕವಾಗಿವೆ.

Related post

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ – ಅತೃಪ್ತ ಬಿಲ್ಲವರ ವೋಟ್ ಬ್ಯಾಂಕ್ ಸೆಳೆಯಲು ಚಿಂತನೆ

ದ.ಕ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಭರ್ಜರಿ ಪ್ರಚಾರ…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪರ ಚುನಾವಣಾ ಪ್ರಚಾರ ಆರಂಭಕ್ಕೂ‌ ಮೊದಲೇ ಬಿರುಸುಗೊಂಡಿದ್ದು, ಬಿಲ್ಲವ ಸಮಯದಾಯವನ್ನು ಒಗ್ಗೂಡಿಸುವ…
ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 27-03-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇಂದು ನಿಮ್ಮ ಹಣವನ್ನು ಅನೇಕ ವಿಷಯಗಳಿಗೆ ಖರ್ಚು ಮಾಡಬಹುದು, ನೀವು ಇಂದು ಉತ್ತಮ ಬಜೆಟ್ ಅನ್ನು ಯೋಜಿಸಬೇಕಾಗಿದೆ,…
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ – ದಕ್ಷಿಣ ಕನ್ನಡ ಜಿಲ್ಲಾದ್ಯಂತ ಈ‌ ದಿನಗಳಲ್ಲಿ ಮದ್ಯ ಮಾರಾಟ ಇಲ್ಲ..!

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ –…

ನ್ಯೂಸ್ ಆ್ಯರೋ ‌: ಈ ಬಾರಿಯ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸಂಬಂಧಿಸಿದಂತೆ ಏಪ್ರಿಲ್ 24ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಜಿಲ್ಲಾಡಳಿತ ನಿಷೇಧ ಹೇರಿ…

Leave a Reply

Your email address will not be published. Required fields are marked *