ಕುತೂಹಲ ಹೆಚ್ಚಿಸಿದೆ ದಳಪತಿ ವಿಜಯ್ ಒಟ್ಟು ಆಸ್ತಿ – ವಾರಿಸು ಚಿತ್ರಕ್ಕೆ ಪಡೆದ ಸಂಭಾವನೆ ಗೊತ್ತಾದರೆ ಶಾಕ್ ಆಗ್ತೀರಾ..!!

ಕುತೂಹಲ ಹೆಚ್ಚಿಸಿದೆ ದಳಪತಿ ವಿಜಯ್ ಒಟ್ಟು ಆಸ್ತಿ – ವಾರಿಸು ಚಿತ್ರಕ್ಕೆ ಪಡೆದ ಸಂಭಾವನೆ ಗೊತ್ತಾದರೆ ಶಾಕ್ ಆಗ್ತೀರಾ..!!

ನ್ಯೂಸ್ ಆ್ಯರೋ : ವಾರಿಸು ಚಿತ್ರದಲ್ಲಿ ಅಭಿನಯಿಸಲು ನಟ ವಿಜಯ್ ಪಡೆದ ಸಂಭಾವನೆ ಈಚೆಗೆ ಭಾರೀ ಸುದ್ದಿಯಾಗಿದೆ. ವಾರಿಸು ಚಿತ್ರದ ಒಟ್ಟು ಬಜೆಟ್ 225 ಕೋಟಿ. ಆದರೆ ಚಿತ್ರದಲ್ಲಿ ನಟಿಸಲು ನಾಯಕ ವಿಜಯ್‌ಗೆ ಅರ್ಧದಷ್ಟು ಹಣವನ್ನು ನೀಡಲಾಗಿದೆ ಎನ್ನಲಾಗಿದೆ.

ಈ ಸುದ್ದಿಯ ಬಳಿಕ ನಟ ವಿಜಯ್ ಅವರ ಆಸ್ತಿ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ಇದೀಗ ವಿಜಯ್ ಆಸ್ತಿ ಎಷ್ಟು ಕೋಟಿ ಎಂಬ ಕುತೂಹಲ ಮೂಡಿದೆ.

ಕಾಲಿವುಡ್‌ನಲ್ಲಿ ನಂಬರ್‌ ವನ್ ಹೀರೋಗಳ ಪಟ್ಟಿಯಲ್ಲಿ ವಿಜಯ್ ಕೂಡಾ ಒಬ್ಬರು. ಪ್ರತಿ ಸಿನಿಮಾಗೂ ವಿಜಯ್ 100 ಕೋಟಿಗೂ ಹೆಚ್ಚು ಸಂಭಾವನೆಯನ್ನು ಪಡೆಯುತ್ತಿದ್ದು, ಅವರ ಆಸ್ತಿ 445 ಕೋಟಿ ರೂಪಾಯಿ ಎಂದು ವರದಿಯಾಗಿದೆ.

ವಾರಿಸು ಚಿತ್ರದ ಯಶಸ್ಸಿನ ಬಳಿಕ ಮುಂದಿನ ದಿನಗಳಲ್ಲಿ ವಿಜಯ್ ಅವರ ಸಂಭಾವನೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ತಮಿಳುನಾಡು ಅಷ್ಟೇ ಅಲ್ಲದೇ ಬೇರೆ ಬೇರೆ ರಾಜ್ಯಗಳಲ್ಲೂ ನಟ ದಳಪತಿ ವಿಜಯ್​ ಅಭಿಮಾನಿಗಳಿದ್ದಾರೆ. ವಿಜಯ್​ ಸಿನಿಮಾ ನೋಡಲು ಕಾಯ್ತಿರುತ್ತಾರೆ. ಮಹಿಳಾ ಅಭಿಮಾನಿಗಳು ಕೂಡ ಹೆಚ್ಚಾಗಿದ್ದಾರೆ.

ಈಚೆಗೆ ವಿಜಯ್ ಹಾಗೂ ಪತ್ನಿ ಮಧ್ಯೆ ಎಲ್ಲವೂ ಸರಿಯಿಲ್ಲ. ಸುದೀರ್ಘ ವೈವಾಹಿಕ ಬದುಕಿನ ಬಳಿಕ ಈ ಜೋಡಿ ಡಿವೋರ್ಸ್ ಪಡೆಯಲಿದೆ ಎಂದು ಸುದ್ದಿಯಾಗಿತ್ತು. ಆದರೆ ವಾರಿಸು ಚಿತ್ರ ನೋಡಲು ಪತ್ನಿ ಜತೆ ವಿಜಯ್ ಸಿನಿಮಾ ಮಂದಿರಕ್ಕೆ ಬಂದು ಎಲ್ಲ ಗಾಸಿಪ್‌ಗಳಿಗೂ ತೆರೆ ಎಳೆದಿದ್ದರು.

ಮಾಸ್ಟರ್ ಆಂಡ್ ಬೀಸ್ಟ್ ನಂತರ ದಳಪತಿ ವಿಜಯ್ ಚಿತ್ರ ವಾರಿಸು ಬಿಡುಗಡೆಯಾಗಿ ಯಶಸ್ವಿಯಾಗಿ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ವಿಜಯ್ 66ನೇ ಚಿತ್ರಕ್ಕೆ ಖ್ಯಾತ ನಿರ್ದೇಶಕ ವಂಶಿ ಪೈಡಿಪಲ್ಲಿ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಮತ್ತು ಪಿವಿಪಿ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ದಿಲ್ ರಾಜು, ಸಿರೀಶ್, ಪರಮ್ ವಿ ಪೊಟ್ಲೂರಿ ಮತ್ತು ಪರ್ಲ್ ವಿ ಪೊಟ್ಲೂರಿ ಜಂಟಿಯಾಗಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *