ಶನಿವಾರದಂದು ಬರುವ ಅಮಾವಾಸ್ಯೆ ವಿಶೇಷವಾದ ದಿನ: ನಾಳೆ ಈ ಕೆಲ ತಪ್ಪುಗಳನ್ನು ಮಾಡಲೇ ಬೇಡಿ

ಶನಿವಾರದಂದು ಬರುವ ಅಮಾವಾಸ್ಯೆ ವಿಶೇಷವಾದ ದಿನ: ನಾಳೆ ಈ ಕೆಲ ತಪ್ಪುಗಳನ್ನು ಮಾಡಲೇ ಬೇಡಿ

ನ್ಯೂಸ್ ಆ್ಯರೋ : ಶನಿವಾರದಂದು ಅಮವಾಸ್ಯೆ ಬಂದರೆ ಅದನ್ನು ಶನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಶನಿವಾರವು ಶನಿಗೆ ಸಂಬಂಧಿಸಿದ ದಿನವಾಗಿರುವುದರಿಂದ ಶನಿ ಅಮಾವಾಸ್ಯೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

ನಾಳೆ ಅಂದರೆ ಶನಿವಾರ ಶನೈಶ್ಚರ ಅಮಾವಾಸ್ಯೆ. ಮಾಘ ಮಾಸದ ಅಮಾವಾಸ್ಯೆಯನ್ನು ಸಾಮಾನ್ಯವಾಗಿ ಮೌನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ವರ್ಷ ಮೌನಿ ಅಮಾವಾಸ್ಯೆಯ ದಿನದಂದು ಶನಿಯು ತನ್ನ ಮೂಲ ರಾಶಿಯಾದ ಕುಂಭ ರಾಶಿಯಲ್ಲಿ ಇರುವುದರಿಂದ ಇದು ಇನ್ನಷ್ಟು ವಿಶೇಷವಾಗಿದೆ. ಇನ್ನೂ ಈ ದಿನದಲ್ಲಿ ಕೆಲ ಆಚಾರಗಳನ್ನು ಪಾಲಿಸುವುದು ಅಗತ್ಯವಾಗಿದ್ದು, ಕೆಲ ಕೆಲಸಗಳನ್ನು ಮಾಡಿದರೆ ಶನಿಯ ಕೋಪಕ್ಕೆ ತುತ್ತಾಗಬೇಕಾಗುತ್ತದೆ ಎಂಬುದು ನಂಬಿಕೆ. 

ಈ ದಿನ ಏನೆಲ್ಲ ಮಾಡಬಾರದು:

ಮಾಂಸಾಹಾರ-ಮದ್ಯವನ್ನು ಸೇವಿಸಬಾರದು. ಹೀಗೆ ಮಾಡುವುದರಿಂದ ಶನಿದೇವನಿಗೆ ಕೋಪ ಬರುತ್ತದೆ. ಶನೈಶ್ಚರ ಅಮಾವಾಸ್ಯೆಯ ದಿನದಂದು ಸಾತ್ವಿಕ ಆಹಾರ ಸೇವಿಸಬೇಕು.

ಈ ದಿನದಂದು ಅಸಹಾಯಕರು, ಬಡವರು, ಅಂಗವಿಕಲರನ್ನು ಎಂದಿಗೂ ಹಿಂಸಿಸಬಾರದು ಅಥವಾ ಶ್ರಮಜೀವಿಗಳನ್ನು ಶೋಷಣೆ ಮಾಡಬಾರದು.

ಯಾವುದೇ ಕಾರಣಕ್ಕೂ ಈ ದಿನದಂದು ಹೊಸ ಚಪ್ಪಲಿ, ಶೂಗಳನ್ನು ಖರೀದಿಸಬಾರದು. ಒಂದು ವೇಳೆ ಈ ದಿನ ಪಾದರಕ್ಷೆಗಳನ್ನು ಖರೀದಿಸಿದಲ್ಲಿ ಭಾರೀ ನಷ್ಟ ಸಂಭವಿಸುವ ಸಾಧ್ಯತೆಯಿದೆ. ಹೀಗೆ ಮಾಡುವುದರಿಂದ ಜಾತಕದಲ್ಲಿ ಶನಿದೋಷ ಸೃಷ್ಟಿಯಾಗುತ್ತದೆ. 

ಎಣ್ಣೆ, ಕಬ್ಬಿಣವನ್ನು ಕೂಡಾ ಖರೀದಿಸಬಾರದು. ಯಾಕೆಂದರೆ ಮನೆಯಲ್ಲಿ ಬಡತನ ತಾಂಡವವಾಡುತ್ತದೆ. ಶನೈಶ್ಚರ ಅಮಾವಾಸ್ಯೆಯ ದಿನ ಶನಿಗೆ ಸಂಬಂಧಿಸಿದ ಯಾವ ವಸ್ತುಗಳನ್ನು ಕೂಡಾ ಮನೆಗೆ ತರಬೇಡಿ.

ಅದಲ್ಲದೆ ಪುರುಷ ಮತ್ತು ಮಹಿಳೆ ದೈಹಿಕ ಸಂಬಂಧ ಬೆಳೆಸಬಾರದು. ಗರುಡ ಪುರಾಣದ ಪ್ರಕಾರ, ಅಮವಾಸ್ಯೆಯ ದಿನದಂದು ಜನಿಸಿದ ಮಗು ಜೀವನದಲ್ಲಿ ಅನೇಕ ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *