ಮುಸ್ಲಿಂ ರಾಜಕಾರಣಿಯನ್ನು ಮದುವೆಯಾದ ನಟಿ ಸ್ವರಾ ಭಾಸ್ಕರ್: ಸಿಎಎ ಕಾಯ್ದೆ ವಿರೋಧಿಸುವಾಗ ಹುಟ್ಟಿದ ಪ್ರೀತಿಗೆ ಮದುವೆಯ ಮುದ್ರೆ

ಮುಸ್ಲಿಂ ರಾಜಕಾರಣಿಯನ್ನು ಮದುವೆಯಾದ ನಟಿ ಸ್ವರಾ ಭಾಸ್ಕರ್: ಸಿಎಎ ಕಾಯ್ದೆ ವಿರೋಧಿಸುವಾಗ ಹುಟ್ಟಿದ ಪ್ರೀತಿಗೆ ಮದುವೆಯ ಮುದ್ರೆ

ನ್ಯೂಸ್‌ಆ್ಯರೋ : ಕೇಂದ್ರ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಾ ವಿವಾದಕ್ಕೆ ಗುರಿಯಾಗುತ್ತಲೇ ಇರುವ ನಟಿ ಸ್ವರಾ ಭಾಸ್ಕರ್‌ ಅವರು ಮುಸ್ಲಿಂ ರಾಜಕಾರಣಿಯನ್ನು ಮದುವೆಯಾಗಿದ್ದಾರೆ. ಈ ವಿಷಯವನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Swara Bhasker marries political activist Fahad Ahmad

ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಯುವ ಘಟಕದ ಅಧ್ಯಕ್ಷರಾಗಿರುವ ಫಹಾದ್ ಜಿರಾರ್ ಅಹ್ಮದ್ ಅವರನ್ನು ಮದುವೆಯಾಗಿದ್ದಾರೆ.

ಈ ಬಗ್ಗೆ ಟ್ವಿಟರ್‌ ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮೊದಲ ಬಾರಿ ಸಿಎಎ ಕಾಯ್ದೆಯನ್ನು ವಿರೋಧಿಸುವಾಗ ಪರಸ್ಪರ ಇಬ್ಬರು ಭೇಟಿಯಾದ ಕ್ಷಣ, ಪರಸ್ಪರರ ಪೋಟೋ ಹಾಗೂ ಪ್ರತಿಭಟನೆ ಮಾಡಿ ಕಾಯ್ದೆಯನ್ನು ವಿರೋಧಿಸಿದನ್ನು ತೋರಿಸಲಾಗಿದೆ. ಇದಲ್ಲದೇ ಜ. 6 ರಂದು ಕೋರ್ಟಿನಲ್ಲಿ ಮದುವೆಯಾದ ಕ್ಷಣವನ್ನು ಅದರಲ್ಲಿ ತೋರಿಸಲಾಗಿದೆ.

ಟ್ವೀಟ್‌ನ ಅಡಿಬರಹದಲ್ಲಿ ‘ಕೆಲವೊಮ್ಮೆ ನಮ್ಮ ಪಕ್ಕದಲ್ಲೇ ಏನಾದರೂ ಇದ್ದರೂ, ಅದನ್ನು ನಾವು ಇನ್ನೆಲ್ಲೋ ದೂರದಲ್ಲಿ ಹುಡುಕುತ್ತೇವೆ. ನಾವು ಪ್ರೀತಿಯನ್ನು ಹುಡುಕುತ್ತಿದ್ದೆವು. ಆದರೆ ಮೊದಲು ಸ್ನೇಹವನ್ನು ಕಂಡುಕೊಂಡು, ನಮ್ಮನ್ನು ಅರ್ಥೈಸಿಕೊಂಡೆವು. ನನ್ನ ಹೃದಯಕ್ಕೆ ಸ್ವಾಗತ ಫಹಾದ್’ ಎಂದು ಸ್ವರಾ ಬರೆದುಕೊಂಡಿದ್ದಾರೆ.

ಕೇಂದ್ರ ಸರ್ಕಾರದ ಸಿಎಎ (ಪೌರತ್ವ ಕಾಯ್ದೆ) ಕಾಯ್ದೆ ಸೇರಿದಂತೆ, ಸರ್ಕಾರದ ಅನೇಕ ವಿಚಾರಗಳನ್ನು ವಿರೋಧಿಸಿ ಟ್ರೋಲ್‌ ಗೆ ಒಳಗಾಗಿ, ಸಾಮಾಜಿಕ ಜಾಲತಾಣದಲ್ಲಿ ಸದಾ ಸ್ವರಾ ಭಾಸ್ಕರ್‌ ಚರ್ಚೆಯಲ್ಲಿದ್ದಾರೆ.

ಇತ್ತೀಚೆಗೆ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದ ಬಗ್ಗೆ ನಡಾವ್​ ಲಪಿಡ್​ ನೀಡಿದ ಹೇಳಿಕೆಗೆ ಸ್ವರಾ ಭಾಸ್ಕರ್‌ ಬೆಂಬಲವನ್ನು ನೀಡಿ ಟ್ರೋಲ್‌ ಗೆ ಒಳಗಾಗಿದ್ದರು

‘ತನು ವೆಡ್ಸ್​ ಮನು’, ‘ಪ್ರೇಮ್​ ರಥನ್​ ಧನ್​ ಪಾಯೋ’, ‘ಅನಾರ್ಕಲಿ ಆಫ್​ ಆರಾ’, ‘ವೀರೇ ದಿ ವೆಡ್ಡಿಂಗ್ʼ ಮುಂತಾದ ಸಿನಿಮಾಗಳಲ್ಲಿ ಸ್ವರಾ ನಟಿಸಿದ್ದಾರೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *