ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಯುವತಿ ಹಲ್ಲೆ ಪ್ರಕರಣ – ಯಾರೀಕೆ ಸಪ್ನಾ ಗಿಲ್..!? ಹಲ್ಲೆ ಮಾಡಿದ್ದು ನಿಜಾನಾ?

ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಯುವತಿ ಹಲ್ಲೆ ಪ್ರಕರಣ – ಯಾರೀಕೆ ಸಪ್ನಾ ಗಿಲ್..!? ಹಲ್ಲೆ ಮಾಡಿದ್ದು ನಿಜಾನಾ?

ನ್ಯೂಸ್‌ ಆ್ಯರೋ : ಭಾರತ ಕ್ರಿಕೆಟ್ ತಂಡದಿಂದ ಹೊರಗುಳಿದಿರುವ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಅವರ ಮೇಲೆ ಯುವತಿಯೊಬ್ಬಳು ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮುಂಬೈನ ಬೀದಿಯಲ್ಲಿ ಪೃಥ್ವಿ ಶಾ ಮೇಲೆ ಯುವತಿಯೊಬ್ಬಳು ಹಲ್ಲೆ ನಡೆಸಿದ್ದಾಳೆ ಎಂಬ ಸುದ್ದಿ ಹರಿದಾಡುತ್ತಿದೆ. ಸೆಲ್ಫಿಗಾಗಿ ಶುರುವಾದ ಸಣ್ಣದೊಂದು ವಿಷಯ ವಿಕೋಪಕ್ಕೆ ತಿರುಗಿದ್ದು ಪೃಥ್ವಿಯ ಸ್ನೇಹಿತನ ಕಾರಿನ ಗಾಜು ಪುಡಿ ಪುಡಿ ಮಾಡಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಪೃಥ್ವಿ ಶಾ ಜೊತೆ ಗಲಾಟೆ ನಡೆದ ಯುವತಿ ಹೆಸರು ಸಪ್ನಾ ಗಿಲ್.

ಪೃಥ್ವಿ ಶಾ ಸ್ನೇಹಿತ ಎಫ್‌ಐಆರ್ ದಾಖಲಿಸಿದ್ದು, ಶಾ ಅವರ ಸ್ನೇಹಿತನ ದೂರಿನ ಪ್ರಕಾರ, ಮುಂಬೈ ವಿಮಾನ ನಿಲ್ದಾಣದ ಬಳಿಯ ಐಷಾರಾಮಿ ಹೋಟೆಲ್‌ನಲ್ಲಿ ಬುಧವಾರ ಮುಂಜಾನೆ ಇಬ್ಬರು ಅಭಿಮಾನಿಗಳು ಪೃಥ್ವಿ ಅವರನ್ನು ಸೆಲ್ಫಿಗಾಗಿ ಸಂಪರ್ಕಿಸಿದಾಗ ಈ ಜಗಳ ಪ್ರಾರಂಭವಾಗಿದೆ.

ಪೃಥ್ವಿ ಶಾ ಸ್ನೇಹಿತನ ಕಾರಿನ ಗಾಜು ಒಡೆದು 50 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ 8 ಜನರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದ ಇಬ್ಬರನ್ನು ಶೋಭಿತ್ ಠಾಕೂರ್ ಮತ್ತು ಸಪ್ನಾ ಗಿಲ್ ಎಂದು ಗುರುತಿಸಲಾಗಿದೆ.

ಆದರೆ ಸಪ್ನಾ ಗಿಲ್ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಪೃಥ್ವಿ ತನ್ನ ಮೇಲೆ ಮೊದಲು ಹಲ್ಲೆ ನಡೆಸಿದ್ದಾನೆ ಎಂದು ಅವರ ವಕೀಲರು ಹೇಳಿದ್ದಾರೆ. ಪೃಥ್ವಿ ಶಾ ಕೈಯಲ್ಲಿ ಬೇಸ್‌ಬಾಲ್ ಬ್ಯಾಟ್‌ ಇರುವುದು ವೀಡಿಯೊದಲ್ಲಿ ಕಾಣಿಸಿಕೊಂಡಿದೆ.

ಸಪ್ನಾ ಗಿಲ್ ಅವರು 2021 ರಲ್ಲಿ ಭೋಜ್‌ಪುರಿ ಚಲನಚಿತ್ರ ಮೇರಾ ವತನ್ ಮತ್ತು 2017 ರಲ್ಲಿ ಕಾಶಿ ಅಮರನಾಥ್‌ನಲ್ಲಿ ಕೆಲಸ ಮಾಡಿದ್ದಾರೆ. ಸಪ್ನಾ ಗಿಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಆಕ್ಟೀವ್ ಆಗಿದ್ದು, ಅವರು ಇಲ್ಲಿಯವರೆಗೆ 1,471 ಪೋಸ್ಟ್‌ಗಳನ್ನು ಮಾಡಿದ್ದಾರೆ. ಜೊತೆಗೆ Instagram ನಲ್ಲಿ 218,000 ಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *