ಚುನಾವಣಾ ಹೊಸ್ತಿಲಲ್ಲಿ ಸೋಶಿಯಲ್ ಮೀಡಿಯಾ ಬಳಕೆದಾರರ ಬ್ರೇನ್ ವಾಷ್ – ಭಾರತದಲ್ಲಿ ನಡೆಯುತ್ತಿದೆ ನಕಲಿ ಆನ್ಲೈನ್ ಪ್ರಚಾರ…!!

ಚುನಾವಣಾ ಹೊಸ್ತಿಲಲ್ಲಿ ಸೋಶಿಯಲ್ ಮೀಡಿಯಾ ಬಳಕೆದಾರರ ಬ್ರೇನ್ ವಾಷ್ – ಭಾರತದಲ್ಲಿ ನಡೆಯುತ್ತಿದೆ ನಕಲಿ ಆನ್ಲೈನ್ ಪ್ರಚಾರ…!!

ನ್ಯೂಸ್ ಆ್ಯರೋ : ದೇಶ ಚುನಾವಣಾ ಹೊಸ್ತಿಲ್ಲಿರುವಾಗಲೇ ಬ್ರಿಟನ್ನಿನ ‘ದಿ ಗಾರ್ಡಿಯನ್’ ಪತ್ರಿಕೆಯು ಒಂದು ಶಾಕಿಂಗ್ ಸುದ್ದಿಯೊಂದನ್ನು‌ ಹೊರ ಹಾಕಿದೆ. ಇಸ್ರೇಲ್ ಮೂಲದ ಸಾಫ್ಟ್‌ವೇರನ್ನು ಬಳಸಿಕೊಂಡು ಭಾರತದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ನಕಲಿ ಅಭಿಯಾನ‌ ಹಾಗೂ ಅಪಪ್ರಚಾರಗಳನ್ನು ನಡೆಸಲಾಗುತ್ತಿದೆ ಎಂಬ ಆತಂಕಕಾರಿ ಅಂಶವನ್ನು ಈ ವರದಿ ಜಗಜ್ಜಾಹಿರುಗೊಳಿಸಿದೆ.

ಈ ವರದಿಯ ಪ್ರಕಾರ, ವ್ಯಕ್ತಿ ಸಂಸ್ಥೆ, ಪಕ್ಷ, ಅಥವಾ ಸರ್ಕಾರದ ಪರವಾಗಿದ್ದುಕೊಂಡು ಇಲ್ಲವೇ ಅದನ್ನು ಸಂಪೂರ್ಣವಾಗಿ ವಿರೋಧಿಸಿಕೊಂಡು ಬರುವ ರೀತಿಯಲ್ಲಿ ಆನ್ಲೈನ್ ಮೂಲಕ ವ್ಯವಸ್ಥಿತವಾಗಿ ಪ್ರಚಾರ ನಡೆಸಲಾಗುತ್ತಿದೆ. ಭಾರತ ಸೇರಿದಂತೆ ಜಗತ್ತಿನಾದ್ಯಂತ ಒಟ್ಟು 30ಕ್ಕೂ ಹೆಚ್ಚು ಚುನಾವಣೆಗಳಲ್ಲಿ ಈ ರೀತಿ ಮತದಾರರ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪ್ರಭಾವ ಬೀರುವಲ್ಲಿ ಇಸ್ರೇಲ್‌ನ ಒಂದು ತಂಡ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಅಲ್ಲಿ ಸೇನೆಯ ಮಾಜಿ ಯೋಧ ಟಲ್ ಹಾನಾನ್ ಎಂಬಾತ ‘ಜಾರ್ಜ್‘ ಎಂಬ ಗುಪ್ತ ನಾಮದಲ್ಲಿ ಈ ತಂಡವನ್ನು ಮುನ್ನಡೆಸುತ್ತಿದ್ದು, ಇದಕ್ಕಾಗಿ ‘ಅಡ್ವಾನ್ಸಡ್ ಇಂಪ್ಯಾಕ್ಟ್ ಮೀಡಿಯಾ ಸೆಲ್ಯೂಷನ್ಸ್’ ಎಂಬ ಸಾಫ್ಟ್‌ವೇರ್ ಬಳಸುವ ಮಾಹಿತಿಯೂ ಹೊರಬಿದ್ದಿದೆ‌.

ಡೇಂಜರಸ್ ಡಾರ್ಕ್ ವೆಬ್ ಏನೇನು ಮಾಡುತ್ತಿದೆ ಗೊತ್ತಾ?

‘ಜಾರ್ಜ್’ ಹೆಸರಿನ ತಂಡವು ಆನ್ಲೈನ್ ನಲ್ಲಿ ಹ್ಯಾಕಿಂಗ್ ಹಾಗೂ ದುರುದ್ದೇಶಪೂರಿತ ಮಾಹಿತಿ ಪ್ರಸಾರದ ಜೊತೆಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದೆ ಎಂದು ಆರೋಪ ವ್ಯಕ್ತವಾಗಿದೆ‌. ಮುಖ್ಯವಾಗಿ ಈ ತಂಡವು ಭಾರತ, ಬ್ರಿಟನ್, ಅಮೆರಿಕಾ, ಕೆನಡಾ, ಮೆಕ್ಸಿಕೋ, ಜರ್ಮನಿ, ಯುಎಇ, ಸೇರಿ ಒಟ್ಟು 30 ದೇಶಗಳಲ್ಲಿನ ವಾಣಿಜ್ಯ ವಿವಾದಗಳು ಮತ್ತು ಚುನಾವಣೆಯ ಮೇಲೆ ಪ್ರಭಾವ ಬೀರುವಂತಹ ಅಂಶಗಳನ್ನು ಬಿತ್ತರಿಸಿದೆ ಎಂಬುದು ಬಯಲಾಗಿದೆ. ಡಾರ್ಕ್ ವೆಬ್ ಮೂಲಕ ರಾಷ್ಟ್ರದ್ರೋಹಿ ಕೆಲಸಗಳನ್ನು‌ ಮಾಡುತ್ತಿರುವ ಜಾರ್ಜ್ ಹೆಸರಿನ ತಂಡದ ಪತ್ತೆಗಾಗಿ ಅಮೆರಿಕದ ಸೈಬರ್ ಸೆಕ್ಯುರಿಟಿ ತಜ್ಞರು ಈಗಾಗಲೇ ಬಲೆ ಬೀಸಿದ್ದಾರೆ ಎಂದು ಮೂಲಗಳು ತಿಳಿಸಿವೆ‌.

ಈ ಹಿಂದೆಯೂ ಹೀಗೆಯೇ ಆಗಿತ್ತು!

ಇಸ್ರೇಲ್ ಮೂಲದ ಎನ್ಎಸ್ಒ ಅಮೂಹ ಅಭಿವೃದ್ಧಿ ಪಡಿಸಿದ ‘ಪೆಗಾಸಸ್ ಸ್ಪೈವೇರ್’ ಸಾಫ್ಟ್‌ವೇರ್ ಬಳಸಿ ಕೇಂದ್ರ ಸರ್ಕಾರವೂ ಭಾರದ ಗಣ್ಯ ವ್ಯಕ್ತಿಗಳ ಮೊಬೈಲ್ ಗಳನ್ನು ಹ್ಯಾಕ್ ಮಾಡಿ ಡೇಟಾ ಕಳವು ಮಾಡಲು ಪ್ರಯತ್ನಿಸಿತ್ತು. ಜೊತೆಗೆ ಭಾರತೀಯ ಪ್ರಮುಖರ ಚಲನವಲನಗಳ ಮೇಲೆ ನಿಗಾ ಇಟ್ಟಿದೆ ಎಂಬ ವರದಿಯೂ ಈ ಹಿಂದೆ ಭಾರೀ ಸಂಚಲನ ಸೃಷ್ಟಿಸಿತ್ತು.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *