ತೆರೆ ಮೇಲೆ ಬರಲಿದೆ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ – ‘ಸ್ಟೋರಿ ಆಫ್ ಸೌಜನ್ಯಾ’ ಸಿನಿಮಾ ಕೊಲೆಯ ನಿಗೂಢತೆ ಭೇದಿಸುತ್ತಾ?

ತೆರೆ ಮೇಲೆ ಬರಲಿದೆ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ – ‘ಸ್ಟೋರಿ ಆಫ್ ಸೌಜನ್ಯಾ’ ಸಿನಿಮಾ ಕೊಲೆಯ ನಿಗೂಢತೆ ಭೇದಿಸುತ್ತಾ?

ನ್ಯೂಸ್ ಆ್ಯರೋ‌ : ಧರ್ಮಸ್ಥಳದ ಸೌಜನ್ಯಾ ಕೊಲೆಯಾಗಿ 11 ವರ್ಷ ಕಳೆದಿದೆ. 2012ರಲ್ಲಿ ರಾಜ್ಯಾದ್ಯಂತ ತೀವ್ರ ಚರ್ಚೆ ಹುಟ್ಟು ಹಾಕಿದ್ದ ಪ್ರಕರಣ ಈಗ ಮತ್ತೆ ಸದ್ದು ಮಾಡುತ್ತಿದೆ. ಈ ಮಧ್ಯೆ ಪ್ರಕರಣ ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ ಎನ್ನಲಾಗಿದೆ.

‘ಸ್ಟೋರಿ ಆಫ್ ಸೌಜನ್ಯಾ’

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಸ್ಟೋರಿ ಆಫ್ ಸೌಜನ್ಯಾ’ ಎನ್ನುವ ಶೀರ್ಷಿಕೆಯ ನೋಂದಣಿಯಾಗಿದೆ. ವಿ.ಲವ ಚಿತ್ರವನ್ನು ನಿರ್ದೇಶಿಲಿದ್ದಾರೆ. ಇದು ಕನ್ನಡದಲ್ಲಿ ಮಾತ್ರ ಸಿದ್ದವಾಗಲಿದೆ. ಜೆಕೆ ವೆಂಚರ್ಸ್ ಚಿತ್ರ ನಿರ್ಮಿಸಲಿದೆ.

ಏನಿದು ಪ್ರಕರಣ?

ಸುಮಾರು 11 ವರ್ಷಗಳ ಹಿಂದೆ. ಅಂದರೆ 2012ರ ಅ. 9ರಂದು ಉಜಿರೆ ಎಸ್‍ಡಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದ ಧರ್ಮಸ್ಥಳದ ಚಂದ್ರಪ್ಪ ಮತ್ತು ಕುಸುಮಾವತಿ ದಂಪತಿ ಪುತ್ರಿ ಸೌಜನ್ಯಾ(17)ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದಾಗ ನಾಪತ್ತೆಯಾಗಿದ್ದಳು. ಹೀಗಾಗಿ ಪೋಷಕರು ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನಿಖೆ ನಡೆಸಿದ ಪೊಲೀಸರಿಗೆ ಮರದಿನ ಸೌಜನ್ಯಾ ಮೃತದೇಹ ಪತ್ತೆಯಾಗಿತ್ತು. ವೈದ್ಯಕೀಯ ಪರೀಕ್ಷೆ ವೇಳೆ ಆಕೆಯ ಮೇಲೆ ಅತ್ಯಾಚಾರ ಎಸಗಿರುವುದು ಕಂಡು ಬಂದಿತ್ತು. ಈ ಹಿನ್ನಲೆಯಲ್ಲಿ ಅಪರಾಧಿ ಎಂದು ಸಂತೋಷ್ ರಾವ್ ಎನ್ನುವವರನ್ನು ಬಂಧಿಸಲಾಗಿತ್ತು. ಆದರೆ ತನಿಖೆ ಸೂಕ್ತವಾಗಿ ನಡೆಯುತ್ತಿಲ್ಲವೆಂದು ದಕ್ಷಿಣ ಕನ್ನಡ ಜಿಲ್ಲಯಲ್ಲಿ ಭಾರೀ ಪ್ರತಿಭಟನೆ ನಡೆದಿದ್ದವು.

ಇತ್ತೀಚೆಗೆ ಕೋರ್ಟ್ ತೀರ್ಪು ನೀಡಿ ಸಂತೋಷ್ ರಾವ್ ನನ್ನು ನಿರಪರಾಧಿ ಎಂದು ಹೇಳಿದೆ. ಹೀಗಾಗಿ ಸೌಜನ್ಯಾ ಕೊಲೆ ಕೇಸ್ ಮತ್ತೆ ಮುನ್ನೆಲೆಗೆ ಬಂದಿದೆ. ಇನ್ನು ಈ ಚಿತ್ರದಲ್ಲಿ ಯಾವೆಲ್ಲ ಘಟನೆಗಳು ಇರಲಿವೆ ಎನ್ನುವುದನ್ನು ಕಾದು ನೋಡಬೇಕಿದೆ. ತಂತ್ರಜ್ಞರು, ತಾರಾಗಣದ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

Related post

ಅಕ್ರಮ ಭ್ರೂಣ ಹತ್ಯೆ ಹಗರಣ; ವೈದ್ಯರ ವಿರುದ್ಧದ ಪ್ರಕರಣ ರದ್ದು ಸಾಧ್ಯವಿಲ್ಲ…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ವ್ಯಾಪಿಸಿರುವ ಅಕ್ರಮ ಭ್ರೂಣ ಹತ್ಯೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. “ಪ್ರಕರಣ…
ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 12-05-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದಾದರೂ ಅದೇ ಸಮಯದಲ್ಲಿ ಭಯ, ದ್ವೇಷ, ಅಸೂಯೆ, ಸೇಡಿನಂಥ ನಕಾರಾತ್ಮಕ ಭಾವನೆಗಳನ್ನು ಹಿಂದೆ ಬಿಡಲು ಸಿದ್ಧವಾಗಿ.…
ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ ಆರು ದಿನಗಳ ಕಾಲ ಭಾರಿ ಮಳೆ; ಹವಾಮಾನ ಇಲಾಖೆ…

ನ್ಯೂಸ್ ಆ್ಯರೋ : ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ರಾಜ್ಯಾದ್ಯಂತ ಮುಂದಿನ 6 ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ…

Leave a Reply

Your email address will not be published. Required fields are marked *