ಅದೃಷ್ಟ ಲಕ್ಷ್ಮಿ ಈತನ ಮನೆ ಬಾಗಿಲಿಗೆ ಬಂದು ಬಿದ್ದೇ ಬಿಟ್ಳು – ಲಾಟರಿಯಲ್ಲಿ ಈತ ಗಳಿಸಿದ್ದೆಷ್ಟು ತಿಳಿದರೆ ತಲೆ ತಿರುಗೋದು ಗ್ಯಾರಂಟಿ…!

ಅದೃಷ್ಟ ಲಕ್ಷ್ಮಿ ಈತನ ಮನೆ ಬಾಗಿಲಿಗೆ ಬಂದು ಬಿದ್ದೇ ಬಿಟ್ಳು – ಲಾಟರಿಯಲ್ಲಿ ಈತ ಗಳಿಸಿದ್ದೆಷ್ಟು ತಿಳಿದರೆ ತಲೆ ತಿರುಗೋದು ಗ್ಯಾರಂಟಿ…!

ನ್ಯೂಸ್ ಆ್ಯರೋ‌ : ಅದೃಷ್ಟ ಎಂದರೆ ಹೀಗಿರಬೇಕು ಎಂದು ಪ್ರತಿಯೊಬ್ಬರೂ ಅಂದುಕೊಳ್ಳುವ ಘಟನೆಯೊಂದು ಅಮೆರಿಕ ಲಾಸ್ ಏಂಜೆಲ್ಸ್ ನಲ್ಲಿ ನಡೆದಿದೆ. ವ್ಯಕ್ತಿಯೊಬ್ಬರಿಗೆ ಜಾಕ್ ಪಾಟ್ ಡ್ರಾದಲ್ಲಿ 1 ಶತಕೋಟಿ ಡಾಲರ್ ಅಂದರೆ ಬರೋಬ್ಬರಿ 8,206 ಕೋಟಿ ರೂ. ಲಭಿಸಿದೆ..!

ಬೃಹತ್ ಮೊತ್ತ

ಈ ಜಾಕ್ ಪಾಟ್ ಒಲಿಯುವುದು ಅತೀ ಅಪರೂಪ. ಅಷ್ಟು ಅದೃಷ್ಟ ಇದ್ದವರಿಗೆ ಮಾತ್ರ ಇದು ಒಲಿಯುತ್ತದೆ. ಇದೀಗ ತೆರಿಗೆ ಎಲ್ಲಾ ಕಡಿತವಾಗಿ ಅದೃಷ್ಟಶಾಲಿಗೆ 558.1 ಮಿಲಿಯನ್ ಡಾಲರ್ ಎಂದರೆ ಸುಮಾರು 4,582 ಕೋಟಿ ರೂ. ಸಿಗಲಿದೆ.

ಮೂರನೇ ಬಾರಿ

ಪವರ್ ಬಾಲ್ ಇತಿಹಾಸದಲ್ಲಿ ಬಹುಮಾನದ ಮೊತ್ತ ಒಂದು ಶತಕೋಟಿ ಡಾಲರ್ ದಾಟುವುದು ಇದು ಮೂರನೇ ಬಾರಿ. 1992ರಲ್ಲಿ ಈ ಆಟ ಆರಂಭವಾಗಿತ್ತು. 2015ರಲ್ಲಿ ನಿಯಮಗಳಲ್ಲಿ ಬದಲಾವಣೆ ಮಾಡಿದ ಬಳಿಕ ಜಾಕ್ ಪಾಟ್ ಗೆಲುವು ಸವಾಲಿನಿಂದ ಕೂಡಿತ್ತು.

2022ರಲ್ಲಿ ವ್ಯಕ್ತಿಯೊಬ್ಬರಿಗೆ 16,886 ಕೋಟಿ ರೂ. ಒಲಿದಿದ್ದರೆ 2016ರಲ್ಲಿ ವ್ಯಕ್ತಿಯೊಬ್ಬರು 10,646 ಕೋಟಿ ರೂ. ಗಳಿಸಿದ್ದರು. ಇದೀಗ ಈ ಜಾಕ್ ಪಾಟ್ ಹೊಡೆದ ವ್ಯಕ್ತಿಯ ಅದೃಷ್ಟ ಕಂಡು ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

Related post

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ ಸೂಪರ್

ಸಂಜೆಯ ಸ್ನ್ಯಾಕ್ಸ್‌ಗೆ ಮಾಡಿ ರುಚಿರುಚಿಯಾದ ಗೋಧಿ ಉಸ್ಲಿ; ಆರೋಗ್ಯಕ್ಕೂ ಒಳ್ಳೆಯದು, ರುಚಿನೂ…

ನ್ಯೂಸ್ ಆರೋ: ಆರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ…
ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ ಆಯ್ಕೆ

ನವೋದಯ ವಿದ್ಯಾಲಯ ಸಮಿತಿ ಇಂದ ಶಿಕ್ಷಕರ ನೇಮಕ; ನೇರ ಸಂದರ್ಶನದ ಮೂಲಕ…

ನ್ಯೂಸ್ ಆರೋ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 2 ಪ್ರಾಜೆಕ್ಟ್​ ಅಸೋಸಿಯೇಟ್-I ಹುದ್ದೆ ಖಾಲಿ ಇದ್ದು, ಅರ್ಹ…
ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ತೆಲಂಗಾಣ ಚುನಾವಣೆ; ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಟಾಲಿವುಡ್ ತಾರೆಯರು…!

ನ್ಯೂಸ್ ಆ್ಯರೋ : ಇಂದು  4ನೇ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಹಲವೆಡೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಸಾಮಾನ್ಯರಂತೆಯೇ ಸರತಿ…

Leave a Reply

Your email address will not be published. Required fields are marked *