
ಸಲ್ಮಾನ್ ಖಾನ್ ಮದುವೆಯಾಗದಿರಲು ಅವರ ತಾಯಿಯೇ ಕಾರಣ – ಸಲ್ಲು ರಹಸ್ಯ ಕೊನೆಗೂ ಬಯಲು ಮಾಡಿದ ತಂದೆ ಸಲೀಂ ಖಾನ್
- ಮನರಂಜನೆ
- May 26, 2023
- No Comment
- 213
ನ್ಯೂಸ್ ಆ್ಯರೋ : ಬಾಲಿವುಡ್ ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಈ ನಟ ಬಿಗ್ ಬಾಸ್ ಹಿಂದಿ ಅವತರಣಿಕೆಯನ್ನು ನಡೆಸಿಕೊಡುತ್ತಿದ್ದಾರೆ. ಮಾತ್ರವಲ್ಲ ಜಾಹೀರಾತುಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಲಕ್ಷಾಂತರ ಮಂದಿ ಅಬಿಮಾನಿಗಳನ್ನು ಹೊಂದಿರುವ ಸಲ್ಮಾನ್ ಖಾನ್ ಗೆ ವಯಸ್ಸು 60ರ ಸಮೀಪ ಬಂದರೂ ಇನ್ನೂ ಯಾಕೆ ಮದುವೆಯಾಗಿಲ್ಲ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ. ಇದಕ್ಕೆ ಸ್ವತಃ ಅವರ ತಂದೆ ಸಲೀಂ ಖಾನ್ ಕಾರಣ ತಿಳಿಸಿದ್ದಾರೆ.
ಇತ್ತೀಚೆಗೆ ‘ತೇರೆ ಮೇರೆ ಬೀಚ್ ಮೇ’ ಶೋನಲ್ಲಿ ಭಾಗಿಯಾಗಿದ್ದ ಸಲೀಂ ಖಾನ್ ಅವರಿಗೆ ಸಲ್ಮಾನ್ ಖಾನ್ ಇನ್ನೂ ಬ್ರಹ್ಮಚಾರಿಯಾಗಿರುವುದಕ್ಕೆ ಕಾರಣ ಏನು ಎನ್ನುವುದನ್ನು ಕೇಳಲಾಯಿತು. ಸಲ್ಮಾನ್ ಖಾನ್ ಮದುವೆಯಾಗದಿರಲು ಅವರ ತಾಯಿ ಸಲ್ಮಾ ಖಾನ್ ಕಾರಣ ಎಂದು ಹೇಳಿರುವ ಸಲೀಂ ಖಾನ್ ಅದನ್ನು ವಿವರಿಸಿದ್ದಾರೆ.
ಸಲ್ಮಾನ್ ಖಾನ್ ಇಲ್ಲಿಯವರೆಗೆ ಬಹಳಷ್ಟು ಹುಡುಗಿಯರನ್ನು ಪ್ರೀತಿಸಿದ್ದರು. ಆದರೆ ಆ ಸಂಬಂಧ ಮದುವೆ ಎನ್ನುವ ದಡ ಸೇರಲೇ ಇಲ್ಲ. ಯಾವ ಹುಡುಗಿಯನ್ನು ಸಲ್ಮಾನ್ ಪ್ರೀತಿಸುತ್ತಾರೋ, ಆ ಹುಡುಗಿಯಲ್ಲಿ ತನ್ನ ತಾಯಿಯನ್ನು ಹುಡುಕಲು ಪ್ರಾರಂಭಿಸುತ್ತಾರೆ. ಇದರ ಪರಿಣಾಮವಾಗಿಯೇ ಆ ಹುಡುಗಿ ಸಲ್ಮಾನ್ ಅನ್ನು ಬಿಟ್ಟು ಹೋಗುತ್ತಾಳೆ. ಇದೇ ಕಾರಣದಿಂದ ಸಲ್ಮಾನ್ ಇಲ್ಲಿಯವರೆಗೆ ಬ್ರಹ್ಮಚಾರಿಯಾಗಿಯೇ ಉಳಿದಿದ್ದಾರೆ ಎಂದು ವಿವರಿಸಿದ್ದಾರೆ.
ಈ ವರ್ಷ ಬಿಡುಗಡೆಯಾದ ಸಲ್ಮಾನ್ ಚಿತ್ರ ‘ಕಿಸಿ ಕ ಭಾಯಿ ಕಿಸಿ ಕಿ ಜಾನ್’ ಸಾಧಾರಣ ಯಶಸ್ಸು ಕಂಡಿದೆ. ತಮಿಳು ಚಿತ್ರ ‘ವೀರಂ’ನ ರೀಮೇಕ್ ಆದ ಇದರಲ್ಲಿ ಕನ್ನಡತಿ ಪೂಜಾ ಹೆಗ್ಡೆ ನಾಯಕಿಯಾಗಿದ್ದರು. ಇನ್ನು ವರ್ಷಾಂತ್ಯದಲ್ಲಿ ಸಲ್ಮಾನ್-ಕತ್ರಿನಾ ಕೈಫ್ ಜೋಡಿಯ ‘ಟೈಗರ್ 3’ ಸಿನಿಮಾ ತೆರೆ ಕಾಣಲಿದೆ.