
ಬೈಕ್‌ಗಳಿಗೆ ರಿವರ್ಸ್ ಗೇರ್ ಇರುವುದಿಲ್ಲ ಯಾಕೆ? – ಮೆದುಳಿಗೆ ಕೆಲಸ ಕೊಡೋ ಬದಲು ಈ ಸುದ್ದಿ ಓದಿ…
- ಆಟೋ ನ್ಯೂಸ್
- May 26, 2023
- No Comment
- 355
ನ್ಯೂಸ್ ಆ್ಯರೋ : ದ್ವಿಚಕ್ರ ವಾಹನ ಹೊರತು ಪಡಿಸಿ ಬೇರೆಲ್ಲ ವಾಹನಗಳಿಗೆ ರಿವರ್ಸ್ ಗೇರ್ ಇರುತ್ತದೆ. ಕೆಲವೊಮ್ಮೆ ಬೈಕ್ ಗಳಿಗೆ ಇದು ಅಗತ್ಯ ಎನಿಸುತ್ತದೆ. ಆದರೆ ದ್ವಿಚಕ್ರ ವಾಹನದಲ್ಲಿ ರಿವರ್ಸ್ ಗೇರ್ ಅಳವಡಿಸದೇ ಇರುವುದಕ್ಕೆ ಕಾರಣ ಇಲ್ಲಿದೆ.
ಬೈಕ್ ಅನ್ನು ಇಳಿಜಾರಿನ ಕೆಳಗೆ ನಿಲ್ಲಿಸಬಾರದು ಎನ್ನುವ ನಿಯಮವಿದೆ. ಇದರಿಂದ ರಿವರ್ಸ್ ಗೇರ್‌ನ ಅಗತ್ಯ ಇರುವುದಿಲ್ಲ. ಇನ್ನು ಬೈಕ್‌ಗಳು ಕಾಂಪ್ಯಾಕ್ಟ್ ವೀಲ್‌ಬೇಸ್‌ಗಳನ್ನು ಹೊಂದಿರುತ್ತವೆ ಮತ್ತು ಹೀಗಾಗಿ ವೃತ್ತಾಕಾರದಲ್ಲಿ ಸುಲಭವಾಗಿ ಟರ್ನ್ ಮಾಡಬಹುದು. ಜೊತೆಗೆ ಸುಲಭವಾಗಿ ತಿರುಗಿಸಲು ಸಾಧ್ಯವಾಗುತ್ತದೆ. ಇವುಗಳು ಬೈಕ್‌ಗಳಲ್ಲಿ ರಿವರ್ಸ್ ಗೇರ್ ಇರಬೇಕಾದ ಅಗತ್ಯವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.
ಕಾಲು ಬಳಸಬಹುದು
ದ್ವಿಚಕ್ರ ವಾಹನಗಳಿಗೆ ರಿವರ್ಸ್ ಮಾಡುವ ಅಗತ್ಯವು ಅಪರೂಪವಾದರೂ ಕೆಲವೊಮ್ಮೆ ಅಂತಹ ಸಂದರ್ಭ ಎದುರಾಗಬಹುದು ಆಗ ನಿಮ್ಮ ಕಾಲುಗಳನ್ನು ಬಳಸುವುದರ ಮೂಲಕ, ರಿವರ್ಸ್ ಗೇರ್ ಇಲ್ಲದೆ ಸುಲಭವಾಗಿ ತಿರುಗಿಸಲು ಸಾಧ್ಯವಾಗುತ್ತದೆ.
ಇತರ ವಾಹನಗಳಿಗೆ ಹೋಲಿಸಿದರೆ ಬೈಕ್‌ಗಳು ಗಣನೀಯವಾಗಿ ಕಡಿಮೆ ತೂಕವನ್ನು ಹೊಂದಿರುತ್ತವೆ. ಆದ್ದರಿಂದ ಸುಲಭವಾಗಿ ರಿವರ್ಸ್ ಮಾಡಬಹುದು. ಹೀಗಾಗಿ ದ್ವಿಚಕ್ರ ವಾಹನಗಳು ರಿವರ್ಸ್ ಗೇರ್ ಹೊಂದಿರುವುದಿಲ್ಲ. ಆದರೆ ಇತ್ತೀಚಿಗೆ ಬಿಡುಗಡೆಯಾದ ಕೆಲವು ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ರಿವರ್ಸ್ ಮೋಡ್ ಆಯ್ಕೆ ನೀಡಲಾಗಿದೆ.