ಕ್ಯಾನ್ಸರ್ ಕ್ಯಾಪಿಟಲ್ ಆಗಿದೆ ಮೇಘಾಲಯ – ಈ ರಾಜ್ಯದ ಪ್ರತಿ ಒಂದು ಲಕ್ಷ ಜನರ ಪೈಕಿ 131 ಜನರಿಗಿದೆ ಕ್ಯಾನ್ಸರ್..!!

ಕ್ಯಾನ್ಸರ್ ಕ್ಯಾಪಿಟಲ್ ಆಗಿದೆ ಮೇಘಾಲಯ – ಈ ರಾಜ್ಯದ ಪ್ರತಿ ಒಂದು ಲಕ್ಷ ಜನರ ಪೈಕಿ 131 ಜನರಿಗಿದೆ ಕ್ಯಾನ್ಸರ್..!!

ನ್ಯೂಸ್ ಆ್ಯರೋ‌ : ಕ್ಯಾನ್ಸರ್ ಕಾರಣದಿಂದ ಮೇಘಾಲಯದಲ್ಲಿ ಪ್ರತಿ ವರ್ಷ ಸುಮಾರು 8 ಸಾವಿರ ಮಂದಿ ಮರಣ ಹೊಂದುತ್ತಿದ್ದಾರೆ. ಇಡೀ ದೇಶದಲ್ಲೇ ಮೇಘಾಲಯದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚು. ಇದಕ್ಕೆ ತಂಬಾಕು ಸೇವನೆಯೇ ಮುಖ್ಯ ಕಾರಣ ಎಂದು NEIGRIHMSನ ಸರ್ಜಿಕಲ್ ಆಂಕಾಲಾಜಿ ಅಸೋಸಿಯೇಟ್ ಪ್ರೊಫೆಸರ್ ಡಾ. ಕಾಲೇಬ್ ಹ್ಯಾರಿಸ್ ತಿಳಿಸಿದ್ದಾರೆ.

ಮೇ 31ರಂದು ವಿಶ್ವ ತಂಬಾಕು ವಿರೋಧಿ ದಿನ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಅವರು ಮಾತನಾಡಿದರು. ಮೇಘಾಲಯದಲ್ಲಿ ಕಂಡು ಬರುವ ಕ್ಯಾನ್ಸರ್ ರೋಗಿಗಳ ಪೈಕಿ ಸುಮಾರು ಶೇ. 70ರಷ್ಟು ಮಂದಿ ತಂಬಾಕು ಉಪಯೋಗಿಸುತ್ತಾರೆ. ರಾಜ್ಯದಲ್ಲಿ ತಂಬಾಕು ಬಳಕೆಯನ್ನು ನಿಷೇಧಿಸಿದರೆ ಮೂರರಲ್ಲಿ ಎರಡರಷ್ಟು ಕ್ಯಾನ್ಸರ್ ಪ್ರಕರಣಗಳನ್ನು ತಡೆಯಬಹುದು ಎಂದು ವಿವರಿಸಿದ್ದಾರೆ.

ಮೇಘಾಲಯದಲ್ಲಿ ಅನ್ನನಾಳದ ಕ್ಯಾನ್ಸರ್ ಪ್ರಮಾಣ ಹೆಚ್ಚು. ಇದು ದೇಶದ ಅಂಕಿ ಅಂಶಕ್ಕೆ ಹೋಲಿಸಿದರೆ ಸುಮಾರು ಹತ್ತು ಪಟ್ಟು ಅಧಿಕ. ದೇಶದಲ್ಲಿ ಪ್ರತಿ 1 ಲಕ್ಷ ಮಂದಿಯ ಪೈಕಿ 5 ಜನರಿಗೆ ಅನ್ನನಾಳದ ಕ್ಯಾನ್ಸರ್ ಇದ್ದರೆ ಮೇಘಾಲಯದಲ್ಲಿನ ಪ್ರಮಾಣ 50ರಿಂದ 70. ಇದು ದೇಶ ಮಾತ್ರವಲ್ಲ ವಿಶ್ವದಲ್ಲೇ ಅತೀ ಹೆಚ್ಚಿನ ಪ್ರಮಾಣದ್ದು ಎಂದು ಆತಂಕ ವ್ಯಕ್ತಪಡಿಸಿದರು.

ಅನ್ನನಾಳದ ಕ್ಯಾನ್ಸರ್ ಗೆ ಚಿಕಿತ್ಸೆ ನಿಡುವುದು ತುಂಬಾ ಕಠಿಣ. ಇದು ಬಾಧಿಸಿದರೆ ಗುಣಮುಖವಾಗುವ ಸಾಧ್ಯತೆ ಕೇವಲ ಶೇ, 20ರಿಂದ 25 ಮಾತ್ರ. NEIGRIHMS ವೈದ್ಯಕೀಯ ಸಂಸ್ಥೆಗೆ ಪ್ರತೀ ವರ್ಷ 1,000ದಿಂದ 1,200ದವರೆಗೆ ಕ್ಯಾನ್ಸರ್ ರೋಗಿಗಳು ದಾಖಲಾಗುತ್ತಾರೆ ಎಂದು ತಿಳಿಸಿದ್ದಾರೆ.

ಮಕ್ಕಳಲ್ಲಿ ಜಾಗೃತಿ

National Tobacco Control Programme (NTCP)ನ ನೋಡೆಲ್ ಅಧಿಕಾರಿ ಡಾ.ಲನಾ ಲಿಂಗ್ಡೊ ನೊಂಗ್ಬ್ರಿ ಮಾತನಾಡಿ, ಯುವ ಜನತೆ ಈಗಾಗಲೇ ವಿವಿಧ ರೂಪಗಳಲ್ಲಿನ ತಂಬಾಕನ್ನು ಬಳಸುತ್ತಿದೆ. ನಾವು ಮೇಘಾಲಯದ ಮಕ್ಕಳನ್ನು ತಂಬಾಕಿನ ಉಪಯೋಗದಿಂದ ರಕ್ಷಿಸಲು ಶ್ರಮಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಸಂಬಂಧ್ ಹೆಲ್ತ್ ಫೌಂಡೇಷನ್ ಜೊತೆಗೋಡಿ Tobacco-Free Educational Institutions (ToFEI) ಕಾರ್ಯಕ್ರಮವನ್ನು 2021ರಲ್ಲಿ ಆರಂಭಿಸಲಾಗಿದೆ. ಇದರ ಭಾಗವಾಗಿ ಪ್ರತೀ ಶಾಲೆಯಲ್ಲಿ ತಂಬಾಕು ಜಾಗೃತಿ ರ್ಯಾಲಿ ಮೂಡಿಸಲು ಸೂಚಿಸಲಾಗಿದೆ. ವಿಶ್ವ ತಂಬಾಕು ವಿರೋಧಿ ದಿನದ ಈ ವರ್ಷದ ನಮ್ಮ ಧ್ಯೇಯ ವಾಕ್ಯ ನನ್ನ ಮೇಘಾಲಯ-ತಂಬಾಕು ರಹಿತ ಮೇಘಾಲಯ ಎಂದು ಡಾ.ಲನಾ ಹೇಳಿದ್ದಾರೆ.

‘ಕ್ಯಾನ್ಸರ್ ರಾಜಧಾನಿ’

ಮೇಘಾಲಯವನ್ನು ಕ್ಯಾನ್ಸರ್ ರಾಜಧಾನಿ ಎಂದು ಕರೆಯಲಾಗುತ್ತದೆ. ಯಾಕೆಂದರೆ ಇಡೀ ದೇಶದಲ್ಲಿ ಅತೀ ಹೆಚ್ಚು ಕ್ಯಾನ್ಸರ್ ರೋಗಿಗಳು ಇರುವುದು ಇಲ್ಲಿ. ಅತಿ ಹೆಚ್ಚು ತಂಬಾಕು ಬಳಸುವುದೇ ಇದಕ್ಕೆ ಕಾರಣ. ಸಮೀಕ್ಷೆಯೊಂದರ ಪ್ರಕಾರ ಶೇ. 47ರಷ್ಟು ವಯಸ್ಕರು ಮತ್ತು ಶೇ. 34ರಷ್ಟು 13-15 ವಯಸ್ಸಿನವರು ತಂಬಾಕು ಬಳಸುತ್ತಾರೆ. ಈ ರಾಜ್ಯದಲ್ಲಿ ಪ್ರತೀ 1 ಲಕ್ಷ ಜನರ ಪೈಕಿ 131 ಮಂದಿಗೆ ಕ್ಯಾನ್ಸರ್ ಇದೆ ಎಂದು ಅಂಕಿ ಅಂಶ ಹೇಳುತ್ತದೆ.

Related post

ಪ್ರೇಯಸಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾಳಾ? – ಈ ತಪ್ಪುಗಳು ನಿಮ್ಮಲ್ಲೂ ಇರಬಹುದು ಗಮನಿಸಿ…

ಪ್ರೇಯಸಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾಳಾ? – ಈ ತಪ್ಪುಗಳು ನಿಮ್ಮಲ್ಲೂ ಇರಬಹುದು ಗಮನಿಸಿ…

ನ್ಯೂಸ್ ಆ್ಯರೋ‌ : ನಾವು ಪ್ರೀತಿಸುವ ಜೀವಗಳು ನಮ್ಮನ್ನು ದೂರ ಮಾಡಿದರೆ, ನಮ್ಮನ್ನು ನಿರ್ಲಕ್ಷ್ಯ ಮಾಡಿದರೆ ಅದರಿಂದಾಗುವ ನೋವು ಅಪಾರ. ಅದರಲ್ಲೂ ಪ್ರೇಯಸಿ ದೂರ ಮಾಡುತ್ತಿದ್ದರೆ ಅದನ್ನು ಸಹಿಸಲು…
ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ – ಸಿಸಿಟಿವಿಯಲ್ಲಿ ಘೋರ ಕೃತ್ಯ ಸೆರೆ, ವಿಡಿಯೋ ವೈರಲ್…!!

ಮಲಗುವ ವಿಚಾರಕ್ಕೆ ಮಗಳಿಗೆ 25 ಬಾರಿ ಚೂರಿಯಿಂದ ಇರಿದು ಕೊಂದ ಅಪ್ಪ…

ನ್ಯೂಸ್ ಆ್ಯರೋ : ಮಲಗುವ ವಿಚಾರಕ್ಕೆ ಉಂಟಾದ ಜಗಳದ ಹಿನ್ನೆಲೆಯಲ್ಲಿ ಸೂರತ್‌ನ ವ್ಯಕ್ತಿಯೊಬ್ಬ ತನ್ನ ಮಗಳಿಗೆ 25 ಬಾರಿ ಇರಿದು ಕೊಂದಿರುವ ಘಟನೆ ನಡೆದಿದೆ. ಇಡೀ ಕೃತ್ಯ ಸಿಸಿಟಿವಿಯಲ್ಲಿ…
ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ ಕಾರಣಿಕದಿಂದಾಗಿಯೇ ಇಲ್ಲಿಗೆ ಬಂದೆ ಎಂದ ಗುಳಿಕೆನ್ನೆ ಬೆಡಗಿ..

ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಭೇಟಿ ನೀಡಿದ ರಚಿತಾ ರಾಮ್ – ಕೊರಗಜ್ಜನ…

ನ್ಯೂಸ್ ಆ್ಯರೋ : ಸ್ಯಾಂಡಲ್ ವುಡ್ ಬೆಡಗಿ, ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಅವರು ಬುಧವಾರ ಮಂಗಳೂರು ಸಮೀಪದ ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿ ಸ್ಥಳಕ್ಕೆ ಭೇಟಿ…

Leave a Reply

Your email address will not be published. Required fields are marked *