ಕನ್ನಡದ ಇಬ್ಬರೂ ಖ್ಯಾತ ರ್‍ಯಾಪ್ ಸ್ಟಾರ್‌ಗಳ ಕಿತ್ತಾಟ– ಆಲ್ ಓಕೆ ಅಸಲಿ ಬಣ್ಣ ಬಯಲು ಮಾಡಿದ ರಾಹುಲ್ ಡಿಟೋ, ರ‍್ಯಾಪ್ ಸಾಂಗ್‌ ಮೂಲಕವೇ ಟಾಂಗ್‌

ಕನ್ನಡದ ಇಬ್ಬರೂ ಖ್ಯಾತ ರ್‍ಯಾಪ್ ಸ್ಟಾರ್‌ಗಳ ಕಿತ್ತಾಟ– ಆಲ್ ಓಕೆ ಅಸಲಿ ಬಣ್ಣ ಬಯಲು ಮಾಡಿದ ರಾಹುಲ್ ಡಿಟೋ, ರ‍್ಯಾಪ್ ಸಾಂಗ್‌ ಮೂಲಕವೇ ಟಾಂಗ್‌

ನ್ಯೂಸ್‌ ಆ್ಯರೋ : ಕನ್ನಡದ ರ‍್ಯಾಪರ್ ಎಂದಾಗ ತಕ್ಷಣ ನೆನಪಾಗುವುದು ಆಲ್ ಓಕೆ, ಚಂದನ್ ಶೆಟ್ಟಿ, ರಾಹುಲ್ ಡಿಟೋ, ಎಂ ಸಿ ಬಿಜ್ಜು ಹೀಗೆ ಅನೇಕರು ಇದ್ದಾರೆ. ಎಲ್ಲರೂ ತಮ್ಮದೇ ಆದ ಅಭಿಮಾನಿಗಳನ್ನು, ಬೆಂಬಲಿಗರನ್ನು ಹೊಂದಿದ್ದಾರೆ. ವಿಭಿನ್ನ ಶೈಲಿಯ ರ‍್ಯಾಪ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಕೆಲ ವರ್ಷಗಳ ಹಿಂದೆ ಆಲ್ ಓಕೆ ಮತ್ತು ಚಂದನ್ ಶೆಟ್ಟಿ ನಡುವೆ ಮುಸುಕಿನ ಮುದ್ದಾಟ ಆರಂಭವಾಗಿತ್ತು. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿರಲಿಲ್ಲ. ಹಾವು ಮುಂಗುಸಿಯ ಹಾಗಿದ್ದ ಇಬ್ಬರೂ ನಿಧಾನಕ್ಕೆ ಮುನಿಸು ಮರೆತು ಒಂದಾಗಿದ್ದು ಇತಿಹಾಸ. ಇದೀಗ ಆಲ್ ಓಕೆ ಟೀಂನಲ್ಲೇ ಇದ್ದ ಮತ್ತೊಬ್ಬ ಖ್ಯಾತ ರ‍್ಯಾಪರ್ ರಾಹುಲ್ ಡಿಟೋ ಎಂಬುವರು ಆಲ್ ಓಕೆ ವಿರುದ್ಧ ಸಿಡಿದೆದ್ದಿದ್ದಾರೆ.

ಆಲ್ ಓಕೆಯನ್ನು ರಾಹುಲ್ ಡಿಟೋ ರ‍್ಯಾಪ್ ಸಾಂಗ್‌ ಮೂಲಕವೇ ತರಾಟೆ ತೆಗೆದುಕೊಂಡಿದ್ದಾರೆ. ‘ನಂಗನ್ಸಿದ್ದು’ ಎನ್ನುವ ಟೈಟಲ್‌ನಲ್ಲಿ ಹೊಸ ರ‍್ಯಾಪ್‌ ಸಾಂಗ್‌ ಮಾಡಿರುವ ರಾಹುಲ್ ಹಾಡಿನ ಮೂಲಕವೇ ಆಲ್ ಓಕೆಯ ಬಣ್ಣ ಬಯಲು ಮಾಡಿದ್ದಾರೆ.

‘ಆಲ್ ಈಸ್ ನಾಟ್ ಓಕೆ’ ಎಂದಿರುವ ರಾಹುಲ್, ‘ಇದು ಕಥೆ ಅಲ್ಲ ಅವ್ನ್ ಜೀವ್ನ, ನಂಗನ್ಸಿದ್ದು, ನಾನ್ ಅನುಭವಿಸಿದ್ದು, ನಂಗೊತ್ತಿತು ಆಲ್‌ ನಾಟ್‌ ಒಕೆ’ ಎಂದು ಕ್ಯಾಪ್ಷನ್ ನೀಡಿ ಹಾಡನ್ನು ರಿಲೀಸ್ ಮಾಡಿದ್ದಾರೆ. ಸದ್ಯ ಈ ರ‍್ಯಾಪ್‌ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಂಗ್‌ನಲ್ಲಿ ಬರುವ ಪ್ರತಿಯೊಂದು ಸಾಲುಗಳು ಕೂಡ ಆಲ್ ಓಕೆ ಅವರಿಗೆ ಹೇಳಿದ್ದು ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ನೀನು ಮಾಡಿದ್ದು ಡವ್, ನಮ್ಮನಮ್ಮೊಳಗೆ ಎಲ್ಲಾ ತಂದು ಇಟ್ಟೆ ಎಂದು ಆಲ್ ಓಕೆ ಅಸಲಿ ಮುಖ ಬಿಚ್ಚಿಟ್ಟಿದ್ದಾರೆ. ಯಾರು ಬೆಳೆಸಿದ್ದು ಅಲ್ಲ, ಬೆಳೆದಿದ್ದು ಎಂದು ಆಲ್ ಓಕೆಗೆ ರ‍್ಯಾಪ್ ಮೂಲಕವೇ ಟಾಂಗ್ ನೀಡಿದ್ದಾರೆ.

‘ಹಾಡಿನ ಲಾಭ ಕೂಡ ನನಗೆ ಬೇಡ ಅದನ್ನು ನೀನೆ ಇಟ್ಕೊ, ನೀನು ಮಾಡಿದ್ದು ಎಲ್ಲಾ ದೋಖ, ಶೆಟ್ಟಿನ ಕೆಳಗಿಳಿಸೋ ಪ್ಲಾನ್ ನಿಂದಾಗಿತ್ತು, ನಿನ್ನ ಕೈಯಲ್ಲಿ ಆಗಿಲ್ಲ ನಾನು ಬೇಕಾಗಿತ್ತು. ಅವತ್ತೆ ನಿನ್ನ ಯೋಗ್ಯತೆ ಗೊತ್ತಾಗಿತ್ತು’ ಎಂದು ಹಾಡಿನ ಮೂಲಕವೇ ತಿವಿದಿದ್ದಾರೆ.

‘ನಿನ್ನ ಹತ್ರ ಇದ್ದಿದ್ದಕ್ಕೆ ನಿಮ್ಮ ಬಗ್ಗೆ ಗೊತ್ತಾಯಿತು. ಆಚೆ ಬಂದಿದ್ದಕ್ಕೆ ನನಗೆ ಒಳ್ಳೆದಾಗಿದೆ. ಮಾಡೋ ಕೆಲಸ ಎಲ್ಲಾ ಕಂತ್ರಿ. ರ್ಯಾಪ್ ಸಿಂಗ್ರಿ, ಡಬಲ್ ಗೇಮ್ ಆಡೋ ಡಿಂಗ್ರಿ’ ಎಂದು ಬೈದಿದ್ದಾರೆ.

ಬಳಿಕ ಆಲ್ ಓಕೆ ಮತ್ತು ಚಂದನ್ ಇಬ್ಬರೂ ಒಂದಾದ ಬಳಿಕ ಒಟ್ಟಿಗೆ ಟಿವಿಯಲ್ಲಿ ಕಾಣಿಸಿಕೊಂಡ ಫೋಟೊವನ್ನು ತೋರಿಸಿ ಇಬ್ಬರಿಗೂ ಒಂದೇ ಕಲ್ಲಲ್ಲಿ ಹೊಡಬೇಕು ಅನ್ಕೊಂಡಿದ್ದೆ ಎಂದು ಹೇಳಿದ್ದಾರೆ. ಡಿಟೋ ಮಾಡಿರುವ ರ‍್ಯಾಪ್ ಕೋರ್ಟ್ ಕಾನ್ಸೆಪ್ಟ್ ನಲ್ಲಿ ಮೂಡಿ ಬಂದಿದೆ. ವಿಚಾರಣೆಗೆ ಬಂದಿರುವ ಡಿಟೋ ಆಲ್ ಓಕೆ ಬಗ್ಗೆ ರ‍್ಯಾಪ್ ಮೂಲಕವೇ ವಿವರಿಸುತ್ತಾರೆ. ಈ ರ್ಯಾಪ್ ಈಗ ವೈರಲ್ ಆಗಿದ್ದು, ಮತ್ತೊಮ್ಮೆ ಇಬ್ಬರೂ ರ್‍ಯಾಪ್ ಸ್ಟಾರ್‌ಗಳು ಕಿತ್ತಾಟ ಬೀದಿಗೆ ಬಿದ್ದಿದೆ..

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *