ಅಪರೂಪದ ವಿರಾಟ ರೂಪ ದರ್ಶನ ಮಾಡಿಸಿದ ಕಾಳಿಂಗ – ಬರೋಬ್ಬರಿ 6 ಅಡಿ ಎತ್ತರ ಹೆಡೆ ಎತ್ತಿದ ಕಿಂಗ್‌ಕೋಬ್ರಾ..!! ವಿಡಿಯೋ ನೋಡಿ…

ಅಪರೂಪದ ವಿರಾಟ ರೂಪ ದರ್ಶನ ಮಾಡಿಸಿದ ಕಾಳಿಂಗ – ಬರೋಬ್ಬರಿ 6 ಅಡಿ ಎತ್ತರ ಹೆಡೆ ಎತ್ತಿದ ಕಿಂಗ್‌ಕೋಬ್ರಾ..!! ವಿಡಿಯೋ ನೋಡಿ…

ನ್ಯೂಸ್‌ ಆ್ಯರೋ : ಸಾಮಾನ್ಯವಾಗಿ ಕಾಳಿಂಗ ಸರ್ಪ ಬಹಳ ಉದ್ದನೆಯ ಹಾವು. ಇದು ಸರಾಸರಿ 3ರಿಂದ 4 ಮೀಟರ್‌ನಷ್ಟು ಉದ್ದವಿರುತ್ತದೆ. ನಾಗರಹಾವು ಸರಾಸರಿ ಉದ್ದ 1ರಿಂದ 2 ಮೀಟರ್ ಉದ್ದ ಇರುತ್ತದೆ.

ಕಾಳಿಂಗ ಸರ್ಪದ ಈ ವಿರಾಟ ರೂಪ ನೋಡಲು ಸಿಗುವುದು ಬಹಳ ಅಪರೂಪ. ಅಂತಹ ಅಪರೂಪದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕಾಳಿಂಗ ಸರ್ಪ ಈ ಹಾವು ಬರೋಬ್ಬರಿ 6 ಅಡಿಯಷ್ಟು ಎತ್ತರಕ್ಕೆ ತನ್ನ ಹೆಡೆ ಎತ್ತಿದೆ. ಅಷ್ಟೇ ಅಲ್ಲ ತನ್ನ ದೇಹದ ಮೂರನೇ ಒಂದು ಭಾಗವನ್ನ ಗಾಳಿಯಲ್ಲಿ ತೇಲಿಸುವ ಮೂಲಕ ಗಮನ ಸೆಳೆದಿದೆ. ಆಳೆತ್ತರಕ್ಕೆ ಹೆಡೆ ಎತ್ತಿ ನಿಂತ ಈ ವಿಡಿಯೋ ನಿಜಕ್ಕೂ ನೋಡುಗರ ಮೈ ಜುಮ್ಮೆನ್ನಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಈ ಒಂದು ವಿಡಿಯೋ ಬಹಳಷ್ಟು ಅಚ್ಚರಿಗೆ ಕಾರಣವಾಗಿದೆ. ಇಂಡಿಯನ್ ಫಾರಿನ್ ಆಫೀಸರ್ ಸುಶಾಂತ ನಂದ ಅವರು ಈ ಹಾವಿನ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಟ್ವಿಟರ್‌ನಲ್ಲಿ ಈ ವಿಡಿಯೋ ನೋಡಿದ ನೆಟ್ಟಿಗರು ಅದ್ಭುತ, ಅಮೋಘ ಹಾವಿನ ದರ್ಶನ ಎಂದು ಹೌಹಾರಿದ್ದಾರೆ. ಈ ಹಾವು ಎಲ್ಲಿ ಪತ್ತೆಯಾಗಿದೆ ಎಂಬುದರ ಕುರಿತು ಮಾಹಿತಿ ನೀಡಿಲ್ಲ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *