ನಟಿ ಜಾಕ್ವೆಲಿನ್, ನೋರಾ ಫತೇಹಿಯನ್ನು ಬಳಸಿಕೊಂಡಿದ್ನಂತೆ ಸುಕೇಶ್..!! -ಜಾಕ್ವೆಲಿನ್ ಜತೆಗಿನ ಸಂಬಂಧಕ್ಕೆ ಹುಳಿ ಹಿಂಡಿದ್ಲಂತೆ ಡ್ಯಾನ್ಸ್ ಕ್ವೀನ್ : ಸುಕೇಶ್ ಹೇಳಿದ್ದೇನು?

ನಟಿ ಜಾಕ್ವೆಲಿನ್, ನೋರಾ ಫತೇಹಿಯನ್ನು ಬಳಸಿಕೊಂಡಿದ್ನಂತೆ ಸುಕೇಶ್..!! -ಜಾಕ್ವೆಲಿನ್ ಜತೆಗಿನ ಸಂಬಂಧಕ್ಕೆ ಹುಳಿ ಹಿಂಡಿದ್ಲಂತೆ ಡ್ಯಾನ್ಸ್ ಕ್ವೀನ್ : ಸುಕೇಶ್ ಹೇಳಿದ್ದೇನು?

ನ್ಯೂಸ್ ಆ್ಯರೋ : ಸುಕೇಶ್ ಚಂದ್ರಶೇಖರ್ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ನೋರಾ ಫತೇಹಿ ಪೇಚಿಗೆ ಸಿಲುಕಿದ್ದಾರೆ.

ಕೋಟಿಗಟ್ಟಲೆ ಬೆಲೆ ಬಾಳುವ ಉಡುಗೊರೆಗಳನ್ನು ಸುಕೇಶ್​ನಿಂದ ಪಡೆದು ಆತ ಹೇಳಿದಂತೆಲ್ಲಾ ವರ್ತಿಸುತ್ತಿದ್ದ ಈ ನಟಿಮಣಿಯರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಈ ನಟಿಯರ ಕುರಿತು ದಿನಕ್ಕೊಂದು ಸತ್ಯವನ್ನು ಅಧಿಕಾರಿಗಳ ಮುಂದೆ ಸುಕೇಶ್‌ ಬಿಚ್ಚಿಡುತ್ತಿದ್ದಾನೆ. ವಂಚನೆಯ ಹಣ ಖಾಲಿ ಮಾಡಲು ಇಬ್ಬರೂ ನಟಿಯರನ್ನು ಬಳಸಿಕೊಂಡ ಬಗ್ಗೆ ಬಾಯಿಬಿಟ್ಟಿದ್ದಾನೆ.

ಜಾಕ್ವೆಲಿನ್ ಫರ್ನಾಂಡಿಸ್ ಬಗ್ಗೆ ನೋರಾಗೆ ಇತ್ತು ಅಸೂಯೆ:

Nora used to call me 10 times a day, I was dating Jacqueline Sukeshs chandra shekar statement

ಸುಕೇಶ್​ ಪೊಲೀಸರಿಗೆ ಹೇಳಿದ್ದೇನೆಂದರೆ, ನಟಿ ನೋರಾ ಫತೇಹಿ ಅವರು ಜಾಕ್ವೆಲಿನ್ ಫರ್ನಾಂಡೀಸ್ ಬಗ್ಗೆ ಯಾವಾಗಲೂ ಅಸೂಯೆ ಹೊಂದಿದ್ದು, ನನ್ನನ್ನು ಅವರಿಂದ ದೂರ ಮಾಡಲು ಪ್ರಯತ್ನಿಸಿದ್ದರು.

ಇಷ್ಟಕ್ಕೂ ಆತ ಹೀಗೆ ಹೇಳಲು ಕಾರಣವೇನೆಂದರೆ ಖುದ್ದು ನೋರಾ ಸುಕೇಶ್​ ವಿರುದ್ಧ ಹೇಳಿಕೆ ನೀಡಿರುವುದು ಎನ್ನಲಾಗಿದೆ. ಆತ ಐಷಾರಾಮಿ ಜೀವನಶೈಲಿಯನ್ನು ನೀಡುವುದಾಗಿ ಭರವಸೆ ನೀಡಿದ್ದ. ಮೋಸ ಹೋಗಿರುವ ನಾನು ಏನು ತಪ್ಪು ಮಾಡಿಲ್ಲ ಎಂದು ನೋರಾ ಹೇಳಿಕೊಂಡಿದ್ದರು.

‘ಜಾಕ್ವೆಲಿನ್ ಫರ್ನಾಂಡೀಸ್ ಕೂಡ ಸುಕೇಶ್ ಜೊತೆ ಸಂಬಂಧ ಹೊಂದಲು ಬಯಸಿದ್ದಾರೆ ಮತ್ತು ಸುಕೇಶ್ ಒಪ್ಪಿಗೆಗೆ ಕಾಯುತ್ತಿದ್ದಾರೆ. ಆದರೆ ಸುಕೇಶನಿಗೆ ನಾನೇ ಬೇಕು. ಇದನ್ನು ಖುದ್ದು ಆತ ನನ್ನ ಕಸಿನ್​ ಬಳಿ ಹೇಳಿಕೊಂಡಿದ್ದ. ಅವನೇ ನನ್ನ ಹಿಂದೆ ಬಿದ್ದಿದ್ದ’ ಎಂದು ನೋರಾ ಹೇಳಿದ್ದರು. ಇದಕ್ಕೆ ವಿರುದ್ಧವಾಗಿ ಈಗ ಆಕೆಯ ವಿರುದ್ಧವೇ ಸುಕೇಶ್​ ಭಾರಿ ಆರೋಪ ಮಾಡಿದ್ದಾರೆ.

ಈ ಸಂಬಂಧ ಸುಕೇಶ್ ತನ್ನ ವಕೀಲರಾದ ಅನಂತ್ ಮಲಿಕ್ ಮತ್ತು ಎಕೆ ಸಿಂಗ್ ಮೂಲಕ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ನೋರಾ ವಿರುದ್ಧ ಹೇಳಿಕೆಯನ್ನು ನೀಡಿದ್ದಾನೆ.

‘ಜಾಕ್ವೆಲಿನ್​ನಿಂದ ದೂರ ಇರುವಂತೆ ನನಗೆ ನೋರಾ ಬ್ರೈನ್ ವಾಶ್ ಮಾಡುತ್ತಿದ್ದಳು. ಜಾಕ್ವೆಲಿನ್ ಅನ್ನು ತೊರೆದು ತನ್ನೊಂದಿಗೆ ಡೇಟಿಂಗ್ ಮಾಡು ಎಂದು ಪೀಡಿಸುತ್ತಿದ್ದಳು. ನೋರಾ ದಿನಕ್ಕೆ ಕನಿಷ್ಠ 10 ಬಾರಿ ನನಗೆ ಕರೆ ಮಾಡಲು ಪ್ರಯತ್ನಿಸುತ್ತಿದ್ದಳು ಮತ್ತು ನಾನು ಕರೆಗೆ ಉತ್ತರಿಸದಿದ್ದರೆ ಅವಳು ನನಗೆ ಕರೆ ಮಾಡುತ್ತಲೇ ಇರುತ್ತಿದ್ದಳು. ನಾನು ಮತ್ತು ಜಾಕ್ವೆಲಿನ್ ಗಂಭೀರ ಸಂಬಂಧದಲ್ಲಿದ್ದುದರಿಂದ, ನಾನು ನೋರಾಳನ್ನು ತಪ್ಪಿಸಲು ಪ್ರಾರಂಭಿಸಿದೆ, ಆದರೆ ಅವಳು ಕರೆ ಮಾಡುವ ಮೂಲಕ ನನ್ನನ್ನು ಕೆರಳಿಸುತ್ತಿದ್ದಳು ಮತ್ತು ನಾನು ಸಂಗೀತ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಲು ಬಾಬಿಗೆ (ನೋರಾ ಸಂಬಂಧಿ) ಸಹಾಯ ಮಾಡುವಂತೆ ಕೇಳಿಕೊಂಡಳು. ಅವಳು ಬಯಸಿದ ಹರ್ಮ್ಸ್ ಬ್ಯಾಗ್‌ಗಳು ಮತ್ತು ಆಭರಣಗಳ ಅನೇಕ ಚಿತ್ರಗಳನ್ನು ಅವಳು ನನಗೆ ಕಳುಹಿಸುತ್ತಿದ್ದಳು, ಅದನ್ನು ನಾನು ಅವಳಿಗೆ ನೀಡುವ ಮೂಲಕ ಅವಳಿಂದ ದೂರ ಹೋಗಲು ಬಯಸಿದೆ’ ಎಂದಿದ್ದಾರೆ.

ಅದೇ ಇನ್ನೊಂದೆಡೆ ಸುಕೇಶ್​ನಿಂದ ಐಷಾರಾಮಿ ಉಡುಗೊರೆಗಳನ್ನು ಪಡೆದುಕೊಂಡಿರುವ ಜಾಕ್ವೆಲಿನ್​ ಕೋರ್ಟ್​ನಲ್ಲಿ, ‘ಸುಕೇಶ್ ನನ್ನ ದಾರಿ ತಪ್ಪಿಸಿದ, ನನ್ನ ಜೀವನ, ವೃತ್ತಿ, ಆದಾಯವನ್ನು ಹಾಳು ಮಾಡಿದ. ಆತ ಕ್ರಿಮಿನಲ್ ಬ್ಯಾಕ್‌ಗ್ರೌಂಡರ್​ ನನಗೆ ಆಮೇಲೆ ಗೊತ್ತಾಯ್ತು. ಪಿಂಕಿ ಇರಾನಿ ಅನ್ನುವವಳಿಗೆ ಚಂದ್ರಶೇಖರ್ ಆಕ್ಟಿವಿಟಿ, ಬ್ಯಾಕ್‌ಗ್ರೌಂಡ್ ಬಗ್ಗೆ ಗೊತ್ತಿದ್ದರೂ ಅವಳು ನನಗೆ ಹೇಳಲೇ ಇಲ್ಲ’ ಎಂದು ಆರೋಪವನ್ನು ಮಾಡಿದ್ದಾರೆ.

ಈ ಮೂಲಕ ಇಬ್ಬರು ನಟಿಯರು ಸುಖೇಶ್‌ನಿಂದ ಐಷಾರಾಮಿ ಉಡುಗೊರೆಯನ್ನು ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *