ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಅತ್ಯದ್ಭುತ ಸ್ಮಾರ್ಟ್ ವಾಚ್ – ಬೆಲೆ ಕೇವಲ 1999 ರೂಪಾಯಿ..!!

ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಅತ್ಯದ್ಭುತ ಸ್ಮಾರ್ಟ್ ವಾಚ್ – ಬೆಲೆ ಕೇವಲ 1999 ರೂಪಾಯಿ..!!

ನ್ಯೂಸ್ ಆ್ಯರೋ : ಈಗಂತೂ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಸ್ಮಾರ್ಟ್ ವಾಚ್ ಗಳದ್ದೇ ಕಾರುಬಾರು. ಕೈಗೊಂದು ಸ್ಮಾರ್ಟ್ ವಾಚ್ ಬೇಕು ಎಂದು ಎಲ್ಲರೂ ಬಯಸುವವರೆ. ಅಂತಹಾ ವಾಚ್ ಪ್ರಿಯರಿಗೆ ಇಲ್ಲೊಂದು ಸಿಹಿ ಸುದ್ದಿಯಿದೆ‌. ಕೇವಲ 1999 ರೂ. ಬೆಲೆಯ ಅತ್ಯದ್ಭುತ ಸ್ಮಾರ್ಟ್ ವಾಚ್ ಒಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದು ಹೇಗಿದೆ?, ಏನ್ ಕತೆ? ನೋಡೋಣ ಬನ್ನಿ.

ಇತ್ತೀಚೆಗಷ್ಟೆ, ಪೇಬಲ್ ಫ್ರಾಸ್ಟ್ ಬ್ಲೂಟೂತ್ ಕಾಲಿಂಗ್ ಸ್ಮಾರ್ಟ್ ವಾಚ್ ಬಿಡುಗಡೆ ಮಾಡಿದೆ. ಆಕರ್ಷಕ ವಿನ್ಯಾಸ ಹೊಂದಿರುವ ಈ ವಾಚ್ ವಾಟರ್ ಪ್ರೂಫ್ ಫೀಚರ್ ಹೊಂದಿದೆ. ಬಲಬಾಗದಲ್ಲಿ ಕ್ರೌನ್ ಬಟನ್ ಇದ್ದು ಇನ್ನಷ್ಟು ಮೆರುಗು ನೀಡಿದೆ. ಈ ವಾಚ್ 1.87 ಇಂಚಿನ ಐಪಿಎಸ್ 2.5D ಡಿಸ್‌ಪ್ಲೇ ಯನ್ನು ಹೊಂದಿದೆ‌. ಮುಖ್ಯವಾಗಿ ನಿಮಗಿಷ್ಟ ಬಂದಂತೆ ಈ ವಾಚ್ ಪೇಸ್ ಬದಲಾಯಿಸಬಹುದಾಗಿದ್ದು, ಒಟ್ಟು 100 ಆಯ್ಕೆಗಳಿವೆ.

ವಿನ್ಯಾಸ ಹಾಗೂ ಕಾರ್ಯವೈಖರಿಯಲ್ಲಿ ಇದು ಆ್ಯಪಲ್ ವಾಚನ್ನು ಹೋಲುತ್ತದೆ. SPO2, 24X7 ಹೃದಯ ಬಡಿತ ಮಾನಿಟರಿಂಗ್ ಇದರಲ್ಲಿದೆ.ಜೊತೆಗೆ ಸ್ಟೆಪ್ ಪೆಡೋಮೀಟರ್, ಸ್ಲೀಪ್ ಮಾನಿಟರ್, ಕ್ಯಾಲೋರಿ ಮಾನಿಟರ್, ಪಾಸ್ ವರ್ಡ್ ವಾಚ್ ಹಾಗೂ ಸ್ಟಾಪ್ ವಾಚ್ ಫೀಚರ್ ಗಳು ಕೂಡ ಇದರಲ್ಲಿ ಕಾಣಬಹುದಾಗಿದೆ‌.

ಸ್ಪೋರ್ಟ್ಸ್ ಪೀಚರ್ ಹೊಂದಿರುವ ಈ ವಾಚ್ ನೀವಿಷ್ಟ ಪಡುವಂತಹ ಪ್ರತಿಯೊಂದು ಆಟಕ್ಕೂ ಸಿದ್ಧರಾಗುವಂತೆ ನೋಟಿಫಿಕೇಶನ್ ನೀಡುತ್ತದೆ. ದೈಹಿಕ‌ ಕಸರತ್ತು ಮಾಡುವವರ ಫಿಟ್ನೆಸ್ ಕಾಳಜಿಯನ್ನು ಕೂಡ ಈ ವಾಚ್ ಮಾಡುತ್ತದೆ‌. ಕಾಲಮಾನಕ್ಕೆ ಅನುಗುಣವಾಗಿ ಹವಾಮಾನ ವರದಿಯನ್ನು ಕೂಡ ನೀಡುತ್ತದೆ.

ಇನ್ನುಳಿದಂತೆ ಈ ವಾಚ್ ಬ್ಯಾಟರಿ ಸಾಮರ್ಥ್ಯದ ಬಗ್ಗೆ ತಿಳಿಯುವುದಾದರೆ, ಒಂದು ಬಾರಿ ಫುಲ್‌ ಚಾರ್ಜ್ ಮಾಡಿದರೆ‌ 5 ದಿನಗಳ ವರೆಗೆ ಇದನ್ನು ಉಪಯೋಗಿಸಬಹುದಾಗಿದೆ‌. ಸ್ಟ್ಯಾಂಡ್ ಬೈ‌ ಮೂಡ್ ನಲ್ಲಿ ಕಾರ್ಯನಿರ್ವಹಿಸುವಷ್ಟು ಸಾಮರ್ಥ್ಯ ಈ ವಾಚ್ ನಲ್ಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ವಿಂಟರ್ ಫೈರ್, ವಿಂಟರ್ ಬ್ಲೂ, ಕ್ಲಾಸಿಕ್‌ ಬ್ಲ್ಯಾಕ್ ಹಾಗೂ ಮಿಸ್ಟಿ‌ ಗ್ರೇ ಬಣ್ಣಗಳಲ್ಲಿ‌ ಲಭ್ಯವಿರುವ ಈ ವಾಚ್ ಗಳ ಬೆಲೆ ಸದ್ಯ ಮಾರುಕಟ್ಟೆಯಲ್ಲಿ1999 ರೂ. ವಾಚ್ ಪ್ರೀಯರು ಫ್ಲಿಪ್ ಕಾರ್ಟ್, ಅಮೆಜಾನ್‌ ಅಥವಾ ಕಂಪೆನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಸಬಹುದಾಗಿದೆ‌.

Related post

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…
ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…

Leave a Reply

Your email address will not be published. Required fields are marked *