ಬಿಗ್‌ಬಾಸ್ ಮನೆಯಲ್ಲಿ 35 ಕಂಪನಿ ಇದೆ ಎಂದಿದ್ದ ವಿನಯ್ – ಆಕ್ರೋಶದ ಟ್ರೋಲ್‌ ಬೆನ್ನಲ್ಲೇ ಕಣ್ಣೀರು ಹಾಕಿದ ಪತ್ನಿ ಅಕ್ಷತಾ ಹೇಳಿದ್ದೇನು?

ಬಿಗ್‌ಬಾಸ್ ಮನೆಯಲ್ಲಿ 35 ಕಂಪನಿ ಇದೆ ಎಂದಿದ್ದ ವಿನಯ್ – ಆಕ್ರೋಶದ ಟ್ರೋಲ್‌ ಬೆನ್ನಲ್ಲೇ ಕಣ್ಣೀರು ಹಾಕಿದ ಪತ್ನಿ ಅಕ್ಷತಾ ಹೇಳಿದ್ದೇನು?

ನ್ಯೂಸ್‌ ಆ್ಯರೋ : ಬಿಗ್‌ಬಾಸ್ ಮನೆಯಲ್ಲಿ ಸದ್ಯ ವಿನಯ್ ಅವರ ಅರ್ಭಟದ ಬಗ್ಗೆಯೇ ಮಾತು. ಖಡಕ್ ಲುಕ್, ಎದುರಾಳಿಗೆ ಟಾಂಕ್ ನೀಡ್ತಿರುವ ವಿನಯ್ ಆಟಕ್ಕೆ ಹೊರಗಡೆಯಲ್ಲಿ ತುಂಬಾನೇ ನೆಗೆಟಿವ್ ಕಮೆಂಟ್‌ ಬರುತ್ತಿದೆ. ‌‌‌

ಕಳೆದ ವಾರ ಕಿಚ್ಚ ಸುದೀಪ್ ಅವರು ವಿನಯ್‌ ಅವರು ಫೈನಲ್‌ ಸ್ಪರ್ಧಿಯಾಗಿ ಕಾಣುತ್ತಿದ್ದಾರೆಂದು ನೇರವಾಗಿ ಹೇಳಿದ್ದರು. ಅದಲ್ಲದೆ ಬಿಗ್‌ಬಾಸ್‌ ಮನೆಗೆ ಬಂದ ಗಿಫ್ಟ್‌ಬಾಕ್ಸ್‌ನಲ್ಲಿ ಆನೆಯನ್ನು ನೀಡಿ, ಬಿಗ್‌ಬಾಸ್‌ ಮನೆಯಲ್ಲಿ ಆನೆ ನಡೆದದ್ದೇ ದಾರಿ ಎಂಬ ಕ್ರೆಡಿಟ್ ರೂಪದಲ್ಲಿ ಗಿಫ್ಟ್‌ ನೀಡಲಾಗಿತ್ತು. ಇದರಿಂದ ಮತ್ತಷ್ಟು ಪ್ರೇರಣೆ ಪಡೆದ ವಿನಯ್ ಸಹಸ್ಪರ್ಧಿಗಳ ಮೇಲೆ ಸವಾರಿ ಮುಂದುವರೆಸಿದ್ದಾರೆ.

ಅದಲ್ಲದೆ ಈ ವಾರ ನಡೆದ ಹಳ್ಳಿ ಟಾಸ್ಕ್‌ನಲ್ಲಿ ವಿನಯ್ ಅವರು ಎದುರಾಳಿ ಸಂಗೀತಾ ತಂಡದ ಮೇಲೆ ಮುಗಿಬಿದ್ದಿದ್ದಾರೆ. ಇವರ ಈ ವರ್ತನೆಗೆ ಮನೆಯ ಒಳಗಡೆ ಮಾತ್ರವಲ್ಲದೆ ಹೊರಗಡೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ವಾರ ಕಿಚ್ಚ ಸುದೀಪ್ ವಿನಯ್‌ಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಹೇಳುತ್ತಿದ್ದಾರೆ.

ಇನ್ನೂ ನಾಮಿನೇಟ್ ವೇಳೆ ಡ್ರೋನ್ ಪ್ರತಾಪ್ ಹಾಗೂ ವಿನಯ್ ಜತೆ ಮಾತುಕತೆ ನಡೆದಿದೆ. ಹೊರಗಡೆ 30 ಮಂದಿಗೆ ಉದ್ಯೋಗವನ್ನು ನೀಡಿದ್ದೆ ಎಂದು ಪ್ರತಾಪ್ ಹೇಳುವಾಗ ವಿನಯ್ ಮಧ್ಯಪ್ರವೇಶಿಸಿ ನನಗೂ 30 ಕಂಪೆನಿಗಳು ಇದೆ. ಇದೀಗ ಮನೆ ಒಳಗಡೆ ವಿಚಾರ ಮಾತನಾಡು ಎಂದು ಹೇಳಿದ್ದರು.

ಇವರ ಈ ಹೇಳಿಕೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಟ್ರೋಲಿಗರು ವಿನಯ್ ಗಾರ್ಮೆಂಟ್ಸ್‌, ವಿನಯ್ ಜನರಲ್ ಸ್ಟೋರ್‌ನ ಫೋಟೋಗಳನ್ನು ಕೋಲಾಜ್ ಮಾಡಿ ಇದೇ ವಿನಯ್ ಅವರ 30 ಕಂಪೆನಿ ಎಂದು ವೈರಲ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಟ್ರೋಲ್ ಬೆನ್ನಲ್ಲೇ ವಿನಯ್ ಪತ್ನಿ ಅಕ್ಷತಾ ಅವರು ಯೂಟ್ಯೂಬ್ ಒಂದಕ್ಕೆ ಸಂದರ್ಶನ ನೀಡುವಾಗ ವಿನಯ್ ಆ ಅರ್ಥದಲ್ಲಿ ಹೇಳಲಿಲ್ಲ. ಅವರ ಮಾತನ್ನು ಅರ್ಧದಲ್ಲೇ ಕಟ್‌ ಮಾಡಲಾಗಿದೆ. ಅವರು ತನಗೆ ಕಂಪೆನಿ ಇದೆ ಎಂದು ಮಾತುಗಳನ್ನು ಮುಂದುವರೆಸಿದ್ದಾರೆ. ಆದರೆ ಅದು ಬಂದಿಲ್ಲ. ವಿನಯ್ ಅವರು ಯಾವುದೇ ಕಂಪೆನಿಯನ್ನು ಹೊಂದಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.

ವಿನಯ್ ಪತ್ನಿ ಅಕ್ಷತಾ ನೀಡಿದ ಸಂದರ್ಶನದಲ್ಲಿ ಹೀಗಿದೆ:

ಬಿಗ್‌ಬಾಸ್ ಮನೆಯಲ್ಲಿ ವಿನಯ್ ಅವರನ್ನು ತುಂಬಾನೇ ನೆಗೆಟಿವ್‌ ಶೇಡ್‌ನಲ್ಲಿಯೇ ತೋರಿಸಲಾಗುತ್ತಿದೆ. ಅವರು ಕೆಟ್ಟ ಮನುಷ್ಯ ಅಲ್ಲ. ವಿಲನ್‌ ಲುಕ್‌ನಲ್ಲಿ ಮಾತ್ರ ತೋರಿಸಲಾಗುತ್ತಿದ್ದು, ಅವರ ಖುಷಿ ಹಾಗು ತಮಾಷೆಯ ಕ್ಷಣಗಳನ್ನು ಬಿಗ್‌ಬಾಸ್ ಮನೆಯಲ್ಲಿ ತೋರಿಸುತ್ತಿಲ್ಲ. ಅವರನ್ನು ಈ ರೀತಿ ತೋರಿಸುತ್ತಿರುವುದು ನಮ್ಮ ಕುಟುಂಬದವರಿಗೆ ನೋಡಲು ಕಷ್ಟವಾಗುತ್ತಿದೆ.‌

ಮಗನಿಗೆ ಸ್ಕೂಲ್‌ನಲ್ಲಿ ಸಹಪಾಠಿಗಳು ನಿಮ್ಮ ಅಪ್ಪ ಯಾಕೆ ಹೀಗೆ ಆಡುತ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಅದಲ್ಲದೆ ನನಗೆ ಕರೆ ಮಾಡಿ, ನೀನು ಅವನೊಂದಿಗೆ ಹೇಗೆ ಬದುಕುತಿದ್ದೀಯಾ, ಆತನಿಗೆ ವಿಚ್ಚೇದನ ನೀಡು ಎಂದು ಹೇಳುತ್ತಿದ್ದಾರೆ. ವಿನಯ್ ಅವರು ತುಂಬಾನೇ ಒಳ್ಳೆಯ ವ್ಯಕ್ತಿ. ನಮಗೆ ಈ ರೀತಿ ಅವರನ್ನು ನೋಡಲು ತುಂಬಾನೇ ಕಷ್ಟವಾಗುತ್ತದೆ ಎಂದು ಕಣ್ಣೀರು ಹಾಕಿದ್ದಾರೆ.

ಈ ಸಂಬಂಧ ಕಾರ್ಯಕ್ರಮದ ಮುಖ್ಯಸ್ಥರಿಗೆ ಕರೆ ಮಾಡಿದರೆ ಅವರು ಸ್ಪಂದಿಸುತ್ತಿಲ್ಲ ಎಂದು ಅಕ್ಷತಾ ದೂರಿದ್ದಾರೆ.

Related post

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 08-12-2023 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಕೆಲವು ಕುಟುಂಬದ ಸದಸ್ಯರು ತಮ್ಮ ಅಸೂಯೆಯ ವರ್ತನೆಯಿಂದ ನಿಮಗೆ ಕಿರಿಕಿರಿ ಮಾಡಬಹುದು. ಆದರೆ ತಾಳ್ಮೆ ಕಳೆದುಕೊಳ್ಳುವುದು ಬೇಡ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣ ಮೀರಬಹುದು. ಗುಣಪಡಿಸಲಾರದ್ದನ್ನು ತಡೆದುಕೊಳ್ಳಬೇಕು ಎಂದು ನೆನಪಿಡಿ.…
ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ – ಅಮಿತ್ ಷಾ ಅವರು ನೆಹರು ಬಗ್ಗೆ ಹೇಳಿದ್ದೇನು?

ನೆಹರು ಮಾಡಿದ “ಆ ಎರಡು ತಪ್ಪುಗಳೇ” ಸಂಪೂರ್ಣ ಕಾಶ್ಮೀರ ನಮ್ಮದಾಗದಿರಲು ಕಾರಣ…

ನ್ಯೂಸ್ ಆ್ಯರೋ : ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಕಳೆದ 5 ದಶಕಗಳಲ್ಲಿ ಕಾಶ್ಮೀರಿಗಳು ಅನುಭವಿಸಿದ ಸಂಕಷ್ಟಕ್ಕೆ…
ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ – ಭಾಗ್ಯಗಳ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರಕ್ಕೆ ಮದ್ಯ ಪ್ರಿಯರ ಸಾಥ್ –

ರಾಜ್ಯದಲ್ಲಿ ಮದ್ಯ ಸೇವನೆ ದಿಢೀರ್ ಹೆಚ್ಚಳ, ಬೊಕ್ಕಸಕ್ಕೆ ಭರ್ಜರಿ ಆದಾಯ –…

ನ್ಯೂಸ್ ಆ್ಯರೋ : ಕರ್ನಾಟಕದಲ್ಲಿ ‘ಮದ್ಯ’ ದರ ಹೆಚ್ಚಾಗಿದ್ದರೂ ಎಣ್ಣೆ ಪ್ರಿಯರಿಂದಾಗಿ ಮದ್ಯ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿರುವುದು ರಾಜ್ಯ ಸರ್ಕಾರಕ್ಕೆ…

Leave a Reply

Your email address will not be published. Required fields are marked *