
Infosis : 5.65 ಟ್ರಿಲಿಯನ್ ಮೌಲ್ಯದ ಇನ್ಫೋಸಿಸ್ ತ್ಯಜಿಸಿದ ರೋಹನ್ ಮೂರ್ತಿ – ಅಪ್ಪನ ಕಂಪನಿ ಮಗ ಬಿಟ್ಟು ಹೋಗಿದ್ದೇಕೆ?
- ವಾಣಿಜ್ಯ ಸುದ್ದಿ
- November 3, 2023
- No Comment
- 104
ನ್ಯೂಸ್ ಆ್ಯರೋ : ಯುವಕರು ವಾರದ 70 ಗಂಟೆಗಳ ಕೆಲಸ ಮಾಡಬೇಕೆಂಬ ಸಲಹೆ ನೀಡಿದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಹೇಳಿಕೆ ಈಚೆಗೆ ಭಾರೀ ವೈರಲ್ ಆಗಿತ್ತು. ಅದಲ್ಲದೆ ಇವರ ಈ ಹೇಳಿಕೆ ಅಂತರ್ಜಾಲದಲ್ಲಿ ಈಗಲೂ ಟ್ರೆಂಡಿಂಗ್‌ನಲ್ಲಿದೆ.
ಇನ್ನೂ ಇನ್ಫೋಸಿಸ್ ಪ್ರಸ್ತುತ 5.65 ಟ್ರಿಲಿಯನ್ ರೂ.ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಆದರೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಮಗ ರೋಹನ್ ಮೂರ್ತಿ ಟ್ರಿಲಿಯನ್ ಮೌಲ್ಯದ ಇನ್ಫೋಸಿಸ್ ಬಿಟ್ಟು ಬೇರೆ ಉದ್ಯಮವನ್ನು ಶುರು ಮಾಡಿದ್ದು ಯಾಕೆ ಎಂಬ ಪ್ರಶ್ನೆಯಿದೆ. ಒಟ್ಟಿನಲ್ಲಿ ನಾರಾಯಣ ಮೂರ್ತಿ ಅವರ ಮಗ, 5.65 ಟ್ರಿಲಿಯನ್ ಕಂಪನಿಯನ್ನು ತೊರೆದು ಸ್ವಂತ ಸಂಸ್ಥೆಯನ್ನು ಪ್ರಾರಂಭಿಸಿರುವುದು ಅತ್ಯಂತ ರೋಚಕವಾಗಿದೆ.
ಇನ್ಫೋಸಿಸ್ ಪ್ರಸ್ತುತ ರೂ 5.65 ಟ್ರಿಲಿಯನ್‌ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ತಮ್ಮ ತಂದೆ ನಾರಾಯಣ ಮೂರ್ತಿಯವರಿಂದ ಕಲಿತು, ರೋಹನ್ ಮೂರ್ತಿ ಕೂಡ ತಮ್ಮದೇ ಆದ ಉದ್ಯಮವನ್ನು ಆರಂಭಿಸಲು ನಿರ್ಧರಿಸಿದರು. ಇನ್ನೂ ಹೊಸ ಉದ್ಯಮವನ್ನು ಆರಂಭಿಸುವ ಮುನ್ನಾ ತನ್ನ ಉಪಾಧ್ಯಕ್ಷ ಸ್ಥಾನವನ್ನು ತೊರೆದಿದ್ದರು.
ಆದರೆ ನೆಲ್ಸನ್‌ಹಾಲ್ ವೆಂಡರ್ ಮೌಲ್ಯಮಾಪನ ಮತ್ತು ಅಸೆಸ್‌ಮೆಂಟ್ ಟೂಲ್ ಸೊರೊಕೊದ ಟಾಪ್-ಲೈನ್ ಆದಾಯವನ್ನು 2022 ರಲ್ಲಿ 18 ಮಿಲಿಯನ್ (ಸುಮಾರು Rs 150 ಕೋಟಿ) ಎಂದು ಅಂದಾಜಿಸಿದೆ.
ರೋಹನ್ ಮೂರ್ತಿ ಅವರು 6,08,12,892 ಷೇರುಗಳನ್ನು ಅಥವಾ ಇನ್ಫೋಸಿಸ್‌ನ ಶೇಕಡಾ 1.67 ರಷ್ಟು ಷೇರುಗಳನ್ನು ಹೊಂದಿದ್ದಾರೆ. 106.42 ಕೋಟಿ ಲಾಭಾಂಶ ಆದಾಯವನ್ನು ಪಡೆದರು.
ಇನ್ನೂ ರೋಹನ್ ಅವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಬೆಂಗಳೂರಿನ ಬಿಷಪ್ ಕಾಟನ್ ಬಾಲಕರ ಶಾಲೆಯಲ್ಲಿ ಮಾಡಿದರು. ಕಾರ್ನೆಲ್ ವಿಶ್ವವಿದ್ಯಾಲಯದ ಪದವಿ ಶಿಕ್ಷಣವನ್ನು ಮುಗಿಸಿದರು. ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿಯನ್ನು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಪಡೆದರು.
ರೋಹನ್ ಮೂರ್ತಿ ಅವರ ತಾಯಿ ಸುಧಾ ಮೂರ್ತಿ ಯಶಸ್ವೀ ಉದ್ಯಮಿ, ಲೇಖಕಿ ಮತ್ತು ಸಮಾಜ ಸೇವಕಿ. ರೋಹನ್‌ಗೆ ಅಕ್ಷತಾ ಮೂರ್ತಿ ಎಂಬ ಅಕ್ಕ ಇದ್ದಾರೆ. ಇವರ ಪತಿ ಯುಕೆ ಪ್ರಧಾನಿ ರಿಷಿ ಸುನಕ್ ಅವರನ್ನು ವಿವಾಹವಾಗಿದ್ದಾರೆ.