
ನಟಿ ಮಾಳವಿಕಾ ಅವಿನಾಶ್ ಆಧಾರ್ ಕಾರ್ಡ್ ದುರ್ಬಳಕೆ – ಮಾಳವಿಕಾ ಹೆಸರಲ್ಲಿ ಸಿಮ್ ಖರೀದಿಸಿದ್ದ ಖದೀಮ ಮಾಡಿದ್ದೇನು?
- ವೈರಲ್ ನ್ಯೂಸ್
- November 3, 2023
- No Comment
- 78
ನ್ಯೂಸ್ ಆ್ಯರೋ : ಆಧಾರ್ ಕಾರ್ಡ್ ದುರ್ಬಳಕೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು ಇದೀಗ ನಟಿ ಮಾಳವಿಕಾ ಅವಿನಾಶ್ ತಮ್ಮ ಆಧಾರ್ ಕಾರ್ಡ್ ದುರ್ಬಳಕೆಯಾಗಿರುವ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದಿಂದ (ಟಿಆರ್ಎಐ) ನಿಮ್ಮ ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಸಂದೇಶ ಬಂದ ಬಳಿಕ ನನ್ನ ಆಧಾರ್ ಕಾರ್ಡ್ ದುರ್ಬಳಕೆಯಾಗಿರುವ ಮಾಹಿತಿ ಸಿಕ್ಕಿದೆ ಎಂದು ನಟಿ ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.
ಟಿಆರ್ಎಐ ನಿಂದ ಮೊಬೈಲ್ ಸೇವೆ ಸ್ಥಗಿತಗೊಳಿಸೋದಾಗಿ ಸಂದೇಶ ಬಂದಾಗ ಹೆಚ್ಚಿನ ಮಾಹಿತಿಗಾಗಿ ನಂಬರ್ 9ಕ್ಕೆ ಕರೆ ಮಾದಿದೆ. ಆಗ ಪಶ್ಚಿಮ ಮುಂಬಯಿಯ ಒಂದು ಸ್ಥಳದಲ್ಲಿ ನನ್ನ ಆಧಾರ್ ಕಾರ್ಡ್ ಬಳಸಿ ಸಿಮ್ ಕಾರ್ಡ್ ಖರೀದಿಸಿರುವುದು ತಿಳಿದು ಬಂತು. ಅಲ್ಲದೇ ಆ ಸಿಮ್ ನಿಂದ ಅನೇಕರಿಗೆ ಕಿರುಕುಳ ಕೊಟ್ಟಿರುವ, ಕೆಟ್ಟ ಪದ ಬಳಕೆ ಮಾಡಿ ಸಂದೇಶ ಕಳುಹಿಸಿರುವುದು ಮಾಹಿತಿ ಅಧಿಕಾರಿಗಳು ತಿಳಿಯಿತು ಎಂದು ಮಾಳವಿಕಾ ಹೇಳಿದ್ದಾರೆ.
ಈ ಬಗ್ಗೆ ಮುಂಬಯಿ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಗೆ ಕರೆ ಮಾಡಿ ಮಾಹಿತಿ ಕೇಳಿದಾಗ ಅವರು ಮಾಳವಿಕಾ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡು ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಅವರ ಹೆಸರಿನಲ್ಲಿರುವ ಅನಧಿಕೃತ ಸಿಮ್ ಕಾರ್ಡ್ ರದ್ದುಗೊಳಿಸಲು ಮನವಿ ಮಾಡಿರುವುದಾಗಿ ಮಾಳವಿಕಾ ತಿಳಿಸಿದ್ದಾರೆ.
ಸಾಕಷ್ಟು ಕಡೆಗಳಲ್ಲಿ ನಾನು ಆಧಾರ್ ಕಾರ್ಡ್ ಬಳಸಿದ್ದೇನೆ. ಆದರೆ ಎಲ್ಲಿ, ಹೇಗೆ ದುರ್ಬಳಕೆ ಆಗಿದೆ ಎಂದು ತಿಳಿದಿಲ್ಲ ಎಂದು ಮಾಳವಿಕಾ ತಿಳಿಸಿದ್ದಾರೆ.
ನಮ್ಮ ಆಧಾರ್ ಕಾರ್ಡ್ ಅನ್ನು ಬೇರೆಯವರು ಬಳಸುತ್ತಿದ್ದರೆ ಇದರ ಬಗ್ಗೆ ತಿಳಿದುಕೊಳ್ಳಬಹುದು. ಇದಕ್ಕಾಗಿ ಯುಐಡಿಎಐ ಅಧಿಕೃತ ವೆಬ್ ಸೈಟ್ ನಲ್ಲಿ ಆಧಾರ್ ಅಥೆಂಟಿಕೇಷನ್ ಹಿಸ್ಟರಿಗೆ ಹೋಗಿ ಪತ್ತೆ ಹಚ್ಚಬಹುದು.
ಯುಐಡಿಎಐ ಅಧಿಕೃತ ವೆಬ್ ಸೈಟ್ uidai.gov.in. ಗೆ ಲಾಗಿನ್ ಆಗಿ ‘My Aadhaar’ ಅನ್ನು ಆಯ್ಕೆ ಮಾಡಿ. ಬಳಿಕ ಡ್ರಾಪ್ ಡೌನ್ ಮೆನುವಿನಲ್ಲಿ ಆಧಾರ್ ಸೇವಾ ವಿಭಾಗದಲ್ಲಿ ‘Aadhaar Authentication History’ ಗೆ ಭೇಟಿ ಕೊಡಬೇಕು.
ಇಲ್ಲಿ ನಮ್ಮ ಆಧಾರ್ ಸಂಖ್ಯೆ ಹಾಗೂ ಸೆಕ್ಯುರಿಟಿ ಕೋಡ್ ಬಳಸಿ ಲಾಗಿನ್ ಆದರೆ ಒಟಿಪಿ ಕ್ಲಿಕ್ ಮಾಡಬೇಕು. ಬಳಿಕ ಮೊಬೈಲ್ ಗೆ ಬಂದಿರುವ ಒಟಿಪಿಯನ್ನು ಹಾಕಿ ‘Proceed’ ಎಂದು ಆಯ್ಕೆ ಮಾಡಿದರೆ ನಮ್ಮ ಆಧಾರ್ ಕಾರ್ಡ್ ಎಲ್ಲ ಮಾಹಿತಿಗಳು ಲಭ್ಯವಾಗುತ್ತದೆ.
ಒಂದು ವೇಳೆ ಯಾರಾದರೂ ನಮ್ಮ ಆಧಾರ್ ಕಾರ್ಡ್ ಬೇರೆಯವರು ಬಳಕೆ ಮಾಡಿದ್ದರೆ ಕೂಡಲೇ ಯುಐಡಿಎಐ ಟೋಲ್ ಫ್ರೀ ನಂಬರ್ 1947 ಗೆ ಅಥವಾ help@uidai.gov.in ಗೆ ಮಾಹಿತಿ ನೀಡಬಹುದು.