ಚಿತ್ರರಂಗ ನನ್ನ ಆಸ್ತಿ ಅಲ್ಲ, ಬರೋದು ಬಿಡೋದು ಅವರಿಷ್ಟ ಎಂದ ಕಿಚ್ಚ ಸುದೀಪ್ – ಕಿಚ್ಚ ಗರಂ ಆಗಿ ಹೀಗೆ ಹೇಳಿದ್ಯಾಕೆ?

ಚಿತ್ರರಂಗ ನನ್ನ ಆಸ್ತಿ ಅಲ್ಲ, ಬರೋದು ಬಿಡೋದು ಅವರಿಷ್ಟ ಎಂದ ಕಿಚ್ಚ ಸುದೀಪ್ – ಕಿಚ್ಚ ಗರಂ ಆಗಿ ಹೀಗೆ ಹೇಳಿದ್ಯಾಕೆ?

ನ್ಯೂಸ್ ಆ್ಯರೋ : ಕಳೆದ ಕೆಲ ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಸ್ತಬ್ಧವಾಗಿದ್ದ ಕೆಸಿಸಿ ಅರ್ಥಾತ್‌ ‘ಕರ್ನಾಟಕ ಚನಲಚಿತ್ರ ಕಪ್’ ಮತ್ತೆ ಗರಿಗೆದರಿ ನಿಂತಿದೆ. ಸಿನಿಮಾ ಕೆಲಸಗಳನ್ನೆಲ್ಲ ಬದಿಗೊತ್ತಿ ಚಂದನವದ ನಟರು, ತಂತ್ರಜ್ಞರು ಕ್ರಿಕೆಟ್ ಅಂಗಳಕ್ಕಿಳಿಯಲು ಸಿದ್ಧರಾಗಿದ್ದಾರೆ. ಈ ವರ್ಷ ಕೆಸಿಸಿ ಮೂರನೇ‌ ಸೀಸನ್ ನಡೆಯಲಿದ್ದು, ಈ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ನಟ ಕಿಚ್ಚ ಸುದೀಪ್ ಕೆಲ ವಿಚಾರಗಳನ್ನು ಪ್ರಸ್ತಾಪಿಸಿದ್ದು ಈ ಸುದ್ದಿಯಲ್ಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದೀಪ್ ಅವರಿಗೆ, ಕಳೆದ ವರ್ಷ ಚಿತ್ರರಂಗದ ಕೆಲವರು ಕೆಸಿಸಿ ಆಡಲು ಬಂದಿರಲಿಲ್ಲ. ಅವರಿಗೆ ಆಹ್ವಾನ ನೀಡಿರಲಿಲ್ಲವೆ? ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿದ ಕಿಚ್ಚ, ‘ನಾವು ಚಿತ್ರರಂಗದ ಪ್ರತಿಯೊಬ್ಬರಿಗೂ ಆಹ್ವಾನ ನೀಡುತ್ತೇವೆ. ಕೆಲವರಿಗೆ ಬರೋದಕ್ಕೆ ಇಷ್ಟ ಇರಲ್ಲ, ಅಂತವರು ಬರೋದಿಲ್ಲ. ಅವರು ಯಾಕೆ ಬಂದಿಲ್ಲ, ಇವರು‌ ಯಾಕೆ ಬಂದಿಲ್ಲ ಅಂತ ಕೇಳಬೇಡಿ, ಸಿನಿಮಾರಂಗ ನನ್ನೊಬ್ಬನ‌ ಸೊತ್ತಲ್ಲ ಎಂದಿದ್ದಾರೆ.

ಮುಂದುವರೆಸಿ, ಕಳೆದ ಎರಡು ಸೀಸನ್‌ಗಳಂತೆ ಈ ಬಾರಿಯೂ ಕೆಸಿಸಿ ನಲ್ಲಿ ಆರು ಅಂತರಾಷ್ಟ್ರೀಯ ಆಟಗಾರರನ್ನು ಸೇರಿ, ಕನ್ನಡ ಸಿನಿಮಾ‌ ನಟರು, ತಂತ್ರಜ್ಞರು ಭಾಗವಹಿಸಲಿದ್ದಾರೆ. ರಾಜಕೀಯ ವಲಯದವರು, ಮಾಧ್ಯಮ ಮಿತ್ರರೂ‌ ಕೂಡ ಕೆಸಿಸಿ‌ಯಲ್ಲಿ ಆಡಬಹುದು ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನುಳಿದಂತೆ, ಈ ಬಾರಿಯ ಕೆಸಿಸಿ ಅತ್ಯಂತ ವರ್ಣರಂಜಿತವಾಗಿರಲಿದೆ. ಟೂರ್ನಮೆಂಟ್ ಗಳು ಫೆ.11 ಮತ್ತು 12 ರಂದು ನಡೆಯಲಿದೆ ಎಂದಿದ್ದಾರೆ. ನಟ ಶಿವರಾಜ್ ಕುಮಾರ್, ಗಣೇಶ್, ಡಾಲಿ ದನಂಜಯ್ ಸೇರಿದಂತೆ, ಕನ್ನಡದ ದಿಗ್ಗಜರು ಭಾಗವಹಿಸುವ ನಿರೀಕ್ಷೆಗಳಿವೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *