ಟ್ರೆಂಡಿಂಗ್‌ನಲ್ಲಿದೆ ಪತಿ ಜೊತೆಗಿನ ನಟಿ ಶುಭ್ರ ಅಯ್ಯಪ್ಪ ರೊಮ್ಯಾಂಟಿಕ್ ಫೋಟೋಸ್‌ – ಫೋಟೋಸ್ ಇಲ್ಲಿವೆ ನೋಡಿ…

ಟ್ರೆಂಡಿಂಗ್‌ನಲ್ಲಿದೆ ಪತಿ ಜೊತೆಗಿನ ನಟಿ ಶುಭ್ರ ಅಯ್ಯಪ್ಪ ರೊಮ್ಯಾಂಟಿಕ್ ಫೋಟೋಸ್‌ – ಫೋಟೋಸ್ ಇಲ್ಲಿವೆ ನೋಡಿ…

ನ್ಯೂಸ್ ಆ್ಯರೋ : ‘ವಜ್ರಕಾಯ’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ಕೊಡಗಿನ‌ ಬೆಡಗಿ ನಟಿ ಶುಭ್ರ ಅಯ್ಯಪ್ಪ ಇತ್ತೀಚೆಗಷ್ಟೇ ವೈವಾಹಿಕ‌ ಜೀವನಕ್ಕೆ ಕಾಲಿಟ್ಟಿದ್ದರು. ಬಾಲ್ಯದ ಗೆಳೆಯ ವಿಶಾಲ್ ಜೊತೆ ಮದುವೆಯಾಗಿರುವ ನಟಿ ಇದೀಗ ದಾಂಪತ್ಯ ಜೀವನ ಎಂಜಾಯ್ ಮಾಡುತ್ತಿದ್ದಾರೆ. ಇದೇ, ವೇಳೆ ನಟಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋಸ್ ಟ್ರೆಂಡಿಂಗ್ ನಲ್ಲಿದೆ.

ಸತತ ಆರು ವರ್ಷ ಪ್ರೀತಿಸಿ ಶುಭ್ರ ಅಯ್ಯಪ್ಪ ಹಾಗೂ ಉದ್ಯಮಿ ವಿಶಾಲ್ ಇತ್ತೀಚೆಗೆ ವಿವಾಹವಾಗಿದ್ದರು. ಮದುವೆಯ ನಂತರ ಈ ನವದಂಪತಿಗಳು ಕುಟುಂಬ ಹಾಗೂ ಗೆಳೆಯರೊಂದಿಗೆ ಕಾಕ್ ಟೈಲ್ ಪಾರ್ಟಿ ಮಾಡಿತ್ತು. ಇದೇ ವೇಳೆ ವಿವಿಧ ಆಕರ್ಷಕ ಭಂಗಿಯಲ್ಲಿ ಇವರಿಬ್ಬರು ಕ್ಲಿಕ್ಕಿಸಿಕೊಂಡ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಿಸಿ ದೋಸೆಯಂತೆ ಹಂಚಿಕೆಯಾಗುತ್ತಿದೆ.

ಲಲಿತಾ ಮಹಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಕ್ ಟೈಲ್ ಪಾರ್ಟಿಯಲ್ಲಿ ಅಯ್ಯಪ್ಪ ಬ್ಲಾಕ್ ಸೂಟ್ ಧರಿಸಿ ಕಂಗೊಳಿಸುತ್ತಿದ್ದರೆ, ನಟಿ ಶುಭ್ರ ಅಯ್ಯಪ್ಪ ಲೈಟ್ ಆರೆಂಜ್ ಡ್ರೆಸ್ ನಲ್ಲಿ‌ ಮುದ್ದಾಗಿ ಕಾಣಿಸುತ್ತಿದ್ದರು.

ಜನವರಿ 18 ರಂದು ಪ್ರೇಮಿಗಳಾಗಿದ್ದ ವಿಶಾಲ್ ಹಾಗೂ ಶುಭ್ರ ಅಯ್ಯಪ್ಪ ಕೊಡಗಿನ 150 ರಷ್ಟು ಹಳೆಯ ದೊಡ್ಮನೆಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದರು.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *